22.65 ಲಕ್ಷ ರೂ.ಮೌಲ್ಯದ ಗಾಂಜಾ ಜಪ್ತಿ

02 ard 02
Published on

ಔರಾದ್: ಚಿಂತಾಕಿ ಹೊರವಲಯದಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ಮಂಗಳವಾರ ಬಂಧಿಸಿರುವ ಪೊಲೀಸರು, ೨೨.೬೫ ಲಕ್ಷ ರೂ. ಮೌಲ್ಯದ ೨೨.೫ ಕೆ.ಜಿ. ಗಾಂಜಾ ಹಾಗೂ ದ್ವಿಚಕ್ರ ವಾಹನ ಜಪ್ತಿ ಮಾಡಿದ್ದಾರೆ. ಕಮಲನಗರದ ಮನೋಹರ ಚವ್ಹಾಣ್ (೨೩) ಬಂಧಿತ. ಹುಸೇನ್ ಎಂಬಾತ ಪರಾರಿಯಾಗಿದ್ದಾನೆ. ಇಬ್ಬರು ಸೇರಿ ತೆಲಂಗಾಣದ ಕಂಗಟಿಯಿAದ ದ್ವಿಚಕ್ರ ವಾಹನದ ಮೇಲೆ ಚಿಂತಾಕಿ ಮಾರ್ಗವಾಗಿ ಔರಾದ್‌ನತ್ತ ಗಾಂಜಾ ಸಹಿತ ಪ್ರಯಾಣಿಸುತ್ತಿದ್ದರು. ಖಚಿತ ಮಾಹಿತಿಯಂತೆ ಪೊಲೀಸರು ದಾಳಿ ನಡೆಸಿದ್ದಾರೆ. ಪಿಎಸ್‌ಐ ಸಿದ್ದಲಿಂಗ ಶೆಟ್ಟಿ, ಸುನೀಲ ಕೋರಿ, ಸಾದೋಜಿತ್, ಅರುಣ ಸಿಂಗ್, ಪ್ರಕಾಶ, ಗುರ್ಲಿಂಗ, ಶಿವಕುಮಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net