ಗಾಂಜಾ ಮಾರಾಟಗಾರರ ಬಂಧನ

ganja
Published on

ಮಡಿಕೇರಿ;

ಕುಶಾಲನಗರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ನಿಷೇಧಿತ ಮಾದಕ ವಸ್ತು ಗಾಂಜಾ ಮಾರಾಟ ಮತ್ತು ಬಳಕೆ ಮಾಡುತಿದ್ದ ವ್ಯಕ್ತಿಗಳನ್ನು ಪತ್ತೆ ಹಚ್ಚುವಲ್ಲಿ ಕೊಡಗು ಜಿಲ್ಲಾ ಪೊಲೀಸ್ ಯಶಸ್ವಿಯಾಗಿದೆ.

ಫೆ25ರಂದು ಬೈಚನಹಳ್ಳಿಯ ಜಾತ್ರೆ ಮೈದಾನದ ಸಮೀಪ ನಿಷೇಧಿತ ಮಾದಕ ವಸ್ತುವನ್ನು ಸರಬರಾಜು ಮತ್ತು ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಬೈಚನಹಳ್ಳಿ ನಿವಾಸಿ ಪ್ರಮೋದ್ ಕುಮಾರ್ (34) ರಾಧಾಕೃಷ್ಣ ಬಡಾವಣೆ ನಿವಾಸಿ ದರ್ಶನ್ (21) ಎಂಬವÀರನ್ನು 25 ಗ್ರಾಂ ಗಾಂಜಾ ನಿಷೇಧಿತ ಮಾದಕ ವಸ್ತುವಿನೊಂದಿಗೆ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಮತ್ತೊಂದು ಪ್ರಕರಣದಲ್ಲಿ ಬುಧವಾರ (ಫೆ.26) ಬೈಚನಹಳ್ಳಿಯ ರೈತ ಸಹಕಾರ ಭವನದ ಸಮೀಪ ನಿಷೇಧಿತ ಮಾದಕ ವಸ್ತುವನ್ನು ಬಳಕೆ ಮಾಡುತ್ತಿದ್ದ ಬೈಚನಹಳ್ಳಿ ನಿವಾಸಿ ರವಿಕುಮಾರ್ (22) ನಿಖಿಲ್ ಕುಮಾರ್ (24) ಹಾಗೂ ಯೋಗಾನಂದ ಬಡಾವಣೆ ನಿವಾಸಿ ಶರತ್ ನಾಯಕ್ (25) ಎಂಬವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಡಿವೈಎಸ್‌ಪಿ ಆರ್.ವಿ. ಗಂಗಾಧರಪ್ಪ, ವೃತ್ತನಿರೀಕ್ಷ ಬಿ.ಜಿ. ಪ್ರಕಾಶ್, ಎಸ್‌ಐ ಗೀತಾ ಹಾಗೂ ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net