ಶ್ರೀನಿವಾಸ್ ರಾಮಾನುಜಂ ಕೊಡುಗೆ ಅಪಾರ: ಸಹಾಯಕ ಪ್ರಾಧ್ಯಾಪಕ ಡಾ.ಶಿವಕುಮಾರಸ್ವಾಮಿ ಹೇಳಿಕೆ

(Maths Day)
Published on

ಮಂಡ್ಯ: ಗಣಿತ ಶಾಸ್ತ್ರಜ್ಞ ಡಾ.ಶ್ರೀನಿವಾಸ್ ರಾಮಾನುಜಂ ಅವರ ಜನ್ಮದಿನವನ್ನು ಗಣಿತ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ಸರ್ಕಾರಿ ಮಹಿಳಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಶಿವಕುಮಾರಸ್ವಾಮಿ ತಿಳಿಸಿದರು.

ನಗರದ ಶಂಕರಗೌಡ ಶಿಕ್ಷಣ ಮಹಾವಿದ್ಯಾಲಯದ ವತಿಯಿಂದ ಕಾಲೇಜಿನಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಗಣಿತ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ತಮಿಳುನಾಡಿನ ಈರೋಡ್‌ನಲ್ಲಿ ಜನಿಸಿದ ಶ್ರೀನಿವಾಸ್ ರಾಮಾನುಜಂ ಅವರ ಗಣಿತ ವಿಷಯದ ಬಗ್ಗೆ ಅಪಾರ ಜ್ಞಾನ ಹೊಂದಿದ್ದರು. ಅವರು ನೀಡಿದ ಕೊಡುಗೆ ಮತ್ತು ಸಾಧನೆಗಳನ್ನು ಗುರುತಿಸಲು ರಾಷ್ಟ್ರೀಯ ಗಣಿತ ದಿನ ಆಚರಣೆ ಮಾಡಲಾಗುತ್ತದೆ ಎಂದು ಹೇಳಿದರು.

ಗಣಿತದ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು. ರಾಷ್ಟ್ರದ ಯುವ ಪೀಳಿಗೆಗೆ ಗಣಿತ ವಿಷಯಕ್ಕೆ ಮತ್ತು ಕ್ಷೇತ್ರಕ್ಕೆ ಕೊಡುಗೆ ನೀಡಿದ ನಮ್ಮ ದೇಶದ ಗಣಿತಜ್ಞ ಶ್ರೆನಿವಾಸ್ ರಾಮಾನುಜಂ ಕೊಡುಗೆಗಳನ್ನು ತಿಳಿಸುವುದು ಇದರ ಮುಖ್ಯ ಉದ್ದೇಶ. ಯುವಕರಲ್ಲಿ ಗಣಿತ ಕಲಿಕೆಯಿಂದ ಆಗುವ ಉಪಯೋಗಗಳನ್ನು ತಿಳಿಸುವುದು. ಗಣಿತ ಶಿಕ್ಷಕರಿಂದ ಈ ದಿನ ತರಬೇತಿ ನೀಡುವುದು ಮತ್ತು ಶಾಲೆಗಳು, ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ವಿವಿಧ ಸ್ಪರ್ಧೆಗಳು ಮತ್ತು ಗಣಿತದ ರಸಪ್ರಶ್ನೆಗಳನ್ನು ನಡೆಸಲಾಗುತ್ತದೆ ಎಂದರು.

ಕಾಲೇಜಿನ ಪ್ರಾಂಶುಪಾಲೆ ಡಾ.ವಿ.ಡಿ.ಸುವರ್ಣ ಸಮಾರಂಭ ಉದ್ಘಾಟಿಸಿದರು. ಪ್ರಾಧ್ಯಾಪಕರಾದ ಡಾ.ಹೇಮಂತ್‌ಕುಮಾರ್, ಡಾ.ಚನ್ನಕೃಷ್ಣಯ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net