ಸಂಸ್ಕೃತಿಯ ಅರಿವಿನಿಂದ ಸದೃಢ ಸಮಾಜ ನಿರ್ಮಾಣ : ನಾಗೇಶ್ ಕಲ್ಲಡ್ಕ ವಿಶ್ಲೇಷಣೆ

New Project (22)
Published on

ಉಪ್ಪಿನಂಗಡಿ: ದೈವಾರಾಧನೆಯಲ್ಲಿ ನಿಷ್ಠೆ ಮತ್ತು ಭಕ್ತಿ, ಗತಿಸಿದ ಕುಟುಂಬದ ಹಿರಿಯರನ್ನು ಸ್ಮರಿಸುವ ನಡೆ ಮರೆಯದಂತೆ ಯುವಜನಾಂಗಕ್ಕೆ ತಿಳಿಯಪಡಿಸುವ ಕಾರ್ಯ ಸರ್ವತ್ರ ನಡೆದಾಗ ಸದೃಢ ಸಮಾಜ ನಿರ್ಮಾಣವಾಗಬಹುದು ಎಂದು ಸುಮಂಗಲ ಸಹಕಾರಿ ಸಂಸ್ಥೆಯ ಅಧ್ಯಕ್ಷ ನಾಗೇಶ್ ಕಲ್ಲಡ್ಕ ಪ್ರತಿಪಾದಿಸಿದರು.

ಉಪ್ಪಿನಂಗಡಿಯಲ್ಲಿ ಪುತ್ತೂರು ತಾಲೂಕು ಸಪಲಿಗರ ಯಾನೆ ಗಾಣಿಗರ ಸಂಘದ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು.

ಕೀರ್ತೇಶ್ವರ ದೇವಳದ ಬ್ರಹ್ಮಕಲಶೋತ್ಸವದ ಮುಂದಾಳು ದಿನೇಶ್ ನಟ್ಟಿಬೈಲ್, ಸಫಲ ಸಹಕಾರಿ ಸಂಘದ ನಿರ್ದೇಶಕ ಭಾಸ್ಕರ ಎಡಪದವು ಮಾತನಾಡಿದರು.

ಕೃಷಪ್ಪ ನೆಕ್ಕರೆ, ಉದ್ಯಮಿ ಮಹೇಶ್ ಕುಂಟಿನಿ ಹಾಗೂ ರಾಜೇಶ್ ಕುಂಟಿನಿ ಅವರನ್ನು ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ಹರಿರಾಮಚಂದ್ರ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ವಸಂತ ಕುಂಟಿನಿ ವರದಿ ಮಂಡಿಸಿದರು.

ನಿತೇಶ್ ಗಾಣಿಗ, ಪ್ರಶಾಂತ್ ನೆಕ್ಕಿಲಾಡಿ, ದೇವರಾಜ್, ಕಿರಣ್ ಹರಿನಗರ, ಅಕ್ಷಯ್ ಕುಮಾರ್ ಹರಿನಗರ, ಮಂಜುನಾಥ್, ರಮೇಶ್ ನಟ್ಟಿಬೈಲ್, ಚೇತನ್, ಸುನೀಲ್ ಸಂಗಮ್, ಶಶಿಕಲಾ ಭಾಸ್ಕರ್, ಶೋಭಾ ದಯಾನಂದ್, ಬಿ.ಕೆ.ಆನಂದ್, ಮೋಹನ್ ನಗರ, ರಾಮಣ್ಣ ಸಪಲ್ಯ, ಅನೀಶ್ ನೆಕ್ಕಿಲಾಡಿ, ಅನುಪಮಾ ರವಿಶಂಕರ್, ಶಿವಕುಮಾರ್, ವಿನೋದ್ ಕುಮಾರ್, ಕೃಷ್ಣ ನೆಕ್ಕಿಲಾಡಿ, ಯು.ರಾಧಾ, ನಾರಾಯಣ, ರಂಜಿನಿ ಚಂದ್ರಶೇಖರ್ ಮೊದಲಾದವರು ಭಾಗವಹಿಸಿದ್ದರು.

ಮೋಹಿತಾ, ವೈಶಾಲಿ, ನಿಧಿ, ವಿನೋದ್ ಗಾಣಿಗ ಕುದ್ರಡ್ಕ ಮೊದಲಾದವರಿಂದ ಗೀತಗಾಯನ ಕಾರ್ಯಕ್ರಮ ನಡೆಯಿತು. ರಾಜೇಶ್ ಕುಕ್ಕೆಶ್ರೀ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net