ಗಾಣಿಗ ಸಮುದಾಯ ಕಾರ್ಯಕ್ರಮ: ಜುಗಲ್​ ಬಂದಿ ಸ್ವಾರಸ್ಯ

20230702_171411
Published on

ಗದಗ: ಗಾಣಿಗ ಸಮುದಾಯದ ಭವನದಲ್ಲಿ ಭಾನುವಾರ ಜರುಗಿದ ಪ್ರತಿಭಾ ಪುರಸ್ಕಾರ, ಶಾಸಕ ಹಾಗೂ ಸಚಿವರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಶಾಸಕ ಲಕ್ಷ್ಮಣ ಸವದಿ ವಿಚಾರವಾಗಿ ಸಿ.ಸಿ. ಪಾಟೀಲ ಮತ್ತು ಎಚ್​.ಕೆ. ಪಾಟೀಲ ನಡುವೆ ವೇದಿಕೆ ಮೇಲೆ ನಡೆದ ಜುಗಲ್​ ಬಂದಿ ಪ್ರಸಂಗ ಎಲ್ಲರನ್ನೂ ನಗೆಡಲಲ್ಲಿ ತೇಲುವಂತೆ ಮಾಡಿತು.
ನಮ್ಮದು ಮತ್ತು ಲಕ್ಷ್ಮಣ ಸವದಿ ಅವರದ್ದು ಬಹು ವರ್ಷಗಳ ಹಿಂದಿನ ಗೆಳೆತನ. ಬೆಳಗಾವಿ ಜಿಲ್ಲೆಯ ಜಿಪಂ ಸದಸ್ಯರಾಗಿ ರಾಜಕೀಯ ಜೀವನ ಆರಂಭಿಸಿ ವಿಧಾನಸೌಧದ ವರೆಗೆ ನಮ್ಮ ಗೆಳೆತನ ಮುಂದುವರಿದಿದೆ. ಸವದಿ ಅವರು ಬಿಜೆಪಿ ಪಕ್ಷ ಬಿಡುವ ಸಂದರ್ಭದಲ್ಲಿ ನನಗೆ ಕರೆ ಮಾಡಿದ್ದರು. ನೋವು ಹಂಚಿಕೊಂಡಿದ್ದರು. ಬಿಜೆಪಿ ಅಧಿಕಾರಕ್ಕೆ ಬಂದರೆ ನಾನು ಸಚಿವನಾಗುತ್ತೇನೆ. ಕಾಂಗ್ರೆಸ್​ ಅಧಿಕಾರಕ್ಕೆ ಬಂದರೆ ನೀನು ಸಚಿವನಾಗು ಎಂದು ಹೇಳಿದ್ದೆ. ಆದರೆ, ದೇವರು ಎರಡನ್ನೂ ಈಡೇರಿಸಲಿಲ್ಲ. ಇದೊಂದು ಕಹಿ ಅನುಭವ ಎಂದು ಸಿ.ಸಿ. ಪಾಟೀಲ ನಗೆ ಚಟಾಕಿ ಹಾರಿದರು.

ಎಚ್​.ಕೆ. ಪಾಟೀಲ ಮಾತನಾಡುವ ಸಂದರ್ಭದಲ್ಲಿ ಲಕ್ಷ್ಮಣ ಸವದಿ ಬಿಜೆಪಿಗೆ ಆಗಮಿಸಿದ ಸಂದರ್ಭ ಪ್ರಸ್ತಾಪಿಸಿದರು. "ಸವದಿ ಅವರನ್ನು ಬಿಜೆಪಿ ಮನೆಯಲ್ಲಿ ಕುರಿಸುವ ಪ್ರಯತ್ನ ಮಾಡಿತ್ತು. ಆದರೆ ಒಂದು ಸಮುದಾಯದ ಮೇಲೆ ಪ್ರಭಾವ ಬೀರುವ ಪ್ರಬಲ ವ್ಯಕ್ತಿಗೆ ಅನ್ಯಾಯ ಆದಾಗ ನಾವು ಸುಮ್ಮನಿರಲು ಸಾದ್ಯವಾಗಲಿಲ್ಲ. ಕಾಂಗ್ರೆಸ್ಸಿನಿಂದ ಅವರನ್ನು ವಿಧಾನಸಭೆಗೆ ಕರೆತಂದೆವು ಎನ್ನುತ್ತಲೇ ಸಿ.ಸಿ. ಪಾಟೀಲ ಕಡೆಗೆ ನೋಡಿದಾಗ ಸಭೆ ನಗೆಗಡಲಲ್ಲಿ ತೇಲಿತು.

ಕೋಟ್​:
ಎಚ್​.ಕೆ. ಪಾಟೀಲ ಮತ್ತು ನಾನು ವಿಧಾನಸೌಧದಲ್ಲಿ ಆಡಳಿ ಮತ್ತು ವಿರೋಧ ಪಕ್ಷದ ಸದಸ್ಯರಾಗಿ ಟೀಕೆ ಟಿಪ್ಪಣಿ ಮಾಡಿದ್ದೇವೆ. ಬದಲಾವಣೆಯ ಅನಿವಾರ್ಯತೆಯಿಂದ ಈಗ ನಾವು ಒಂದೇ ಪಕ್ಷದಲ್ಲಿ ಇದ್ದೇವೆ.
- ಲಕ್ಷ್ಮಣ ಸವದಿ, ಶಾಸಕ, ಅಥಣಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net