

ವಿಜಯವಾಣಿ ಸುದ್ದಿಜಾಲ ಗದಗ
ಗಾಣಿಗ ಸಮುದಾಯ ಸಂಟನಾತ್ಮಕ ಕಾರ್ಯಗಳು ಜರುಬೇಕು. ಆ ಮೂಲಕ ಸಮುದಾಯದ ಅಭಿವೃದ್ಧಿ ಆಗಬೇಕು. ಅಭಿವೃದ್ಧಿ ಎಂದರೆ ಬೇರೆ ಸಮುದಾಯದಕ್ಕೆ ತೊಂದರೆ ಕೊಡುವುದಲ್ಲ. ನಮ್ಮ ಅಭಿವೃದ್ಧಿ ಬೇರೆ ಸಮುದಾಯಕ್ಕೆ ಮಾದರಿ ಆಗಬೇಕು ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಅಖಿಲ ಭಾರತ ಗಾಣಿಗ ವಿದ್ಯಾ ಹಾಗೂ ಉದ್ಯೋಗವರ್ಗ ಟ್ರಸ್ಟ್ ವತಿಯಿಂದ ನಗರದ ಗಾಣಿಗ ಭವನದಲ್ಲಿ ಭಾನುವಾರ ಜರುಗಿದ ಪ್ರತಿಭಾ ಪುರಸ್ಕಾರ, ನೂತನ ಶಾಸಕರಿಗೆ, ಸಚಿವರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳಲು ಅಗತ್ಯ ಇದೆ. ಸಮಾಜದ ಇತರೆ ಸಮುದಾಯದ ಜತೆ ಅನ್ಯೋನ್ಯ ಸಂಬಂಧದ ಮೂಲಕ ಗಾಣಿಗ ಸಮುದಾಯದ ಬೆಳವಣಿಗೆ ಕಾಣಬೇಕು ಎಂದ ಸವದಿ, ಸಮುದಾಯದ ಭವನಕ್ಕೆ 10 ಲಕ್ಷ ನೀಡುವುದಾಗಿ ಭರವಸೆ ನೀಡಿದರು. ಲಕ್ಷ್ಮಣ ಸವದಿ, ಜಗದೀಶ ಶೆಟ್ಟರ ಅವರು ಕಾಂಗ್ರೆಸ್ ಪಕ್ಷಕ್ಕೆ ಬರುವುದಾರೆ ಪಕ್ಷದ ನತೆ ಹೆಚ್ಚುತ್ತದೆ ಎಂದು ಎಚ್.ಕೆ. ಪಾಟೀಲರು ಚುನಾವಣಾ ಸಂದರ್ಭದಲ್ಲಿ ಹೇಳಿದ್ದನ್ನು ನಾನೂ ಗೌರವಿಸುತ್ತೇನೆ ಮತ್ತು ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಲಕ್ಷ್ಮಣ ಸವದಿ ಹೇಳಿದರು.
ಸಚಿವ ಎಚ್.ಕೆ. ಪಾಟೀಲ ಮಾತನಾಡಿ, ದೇಶಕ್ಕೆ ಸಂಪತ್ತು ಸೃಷ್ಟಿಮಾಡಲು ಗಾಣಿಗ ಸಮುದಾಯದ ಕೊಡುಗೆ ಅಗ್ರಗಣ್ಯ. ಗದಗ ಕ್ಷೇತ್ರದಲ್ಲಿ ನನ್ನ ಗೆಲುವಿಗೆ ಗಾಣಿಗ ಸಮುದಾಯದವು ಬಹುಮುಖ್ಯ ಪಾತ್ರ ವಹಿಸಿದೆ. ನನ್ನ ಕ್ಷೇತ್ರಾಭಿವೃದ್ಧಿ ಅನುದಾನದಲ್ಲಿ 10 ಲಕ್ಷ ರೂ. ನೀಡುವುದಾಗಿ ಹೇಳಿದರು.
ಸನ್ಮಾನ ಸ್ವೀಕರಿಸಿ ಮಾಜಿ ಸಚಿವ, ಶಾಸಕ ಸಿ.ಸಿ. ಪಾಟೀಲ ಮಾತನಾಡಿ, ಪಕ್ಷಬೇದ ಮರೆತು ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿರುವುದು ಉತ್ತಮ ಬೆಳವಣಿಗೆ. ಗಾಣಿಗ ಸಮುದಾಯ ಸ್ವಂತ ಕಾಲಮೇಲೆ ನಿಂತು ಜನೋಪಕಾರಿ ಕೆಲಸ ಮಾಡುತ್ತದೆ. ನಾನು ನಾಲ್ಕನೇ ಬಾರಿ ಶಾಸಕನಾಗಲು ಗಾಣಿಗ ಸಮುದಾಯದ ಕೃಪೆ ನನ್ನ ಮೇಲಿದೆ ಎಂದರು.
ಜಿ.ಎಸ್. ಪಾಟೀಲ ಮಾತನಾಡಿ, ಜಾತಿಯ ಲೆಕ್ಕಾಚಾರದ ರಾಜಕಾರದಿಂದ ವಿಷಮಯ ಪರಿಸ್ಥಿತಿ ಎದುರಾಗಿದೆ. ಆದರೆ, ಗಾಣಿಗ ಸಮುದಾಯದಿಂದ ನಾವೂ ಎಂದಿಗೂ ಬೇರ್ಪಟ್ಟಿಲ್ಲ. ಸಮುದಾಯಗಳ ನಡುವೆ ಬಾಂಧವ್ಯ ಮುಖ್ಯ. ಬಸವಣ್ಣನವರ ದಾರಿಯಲ್ಲಿ ನಾವು ನಡೆಯಬೇಕು. ಗಾಣಿಗ ಸಮುದಾಯದ ಅಭಿವೃದ್ಧಿಗೆ ನಾವು ಬದ್ಧ ಎಂದರು.
ಕಾರ್ಯಕ್ರಮದಲ್ಲಿ ಸಚಿವ, ಶಾಸಕರನ್ನು ಸನ್ಮಾನಿಸಲಾಯಿತು. ಗಾಣಿಗ ಸಮುದಾಯದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ನೀಲಮ್ಮ ತಾಯಿ ಅಸುಂಡಿ, ಡಾ. ಜಯಬಸವಕುಮಾರ ಶ್ರೀ, ಮಹಾಂತ ದೇವರು ಸೇರಿದಂತೆ ಹಲವರು ಇದ್ದರು.