

ಹುಬ್ಬಳ್ಳಿ: ಗಾಣಿಗರೆಲ್ಲರೂ ಉತ್ತರ- ದಕ್ಷಿಣ, ಸಜ್ಜನ- ಕರಿಕುಲ, ಜ್ಯೋತಿಪಣ ತೇಲಿ ಮುಂತಾದ ಒಳಪಂಗಡಗಳನ್ನು ಮರೆತು "ನಾವು ಗಾಣಿಗರು' ಎಂದು ಗಟ್ಟಿ ಧ್ವನಿಯಿಂದ ಒಗ್ಗೂಡುವುದು ಅವಶ್ಯವಿದೆ ಎಂದು ಮೈಸೂರಿನ ಅಂತಾರಾಷ್ಟ್ರೀಯ ಕ್ರೀಡಾಪಟು ಯೋಗೇಂದ್ರ ಮಾದಪ್ಪ ಅಭಿಪ್ರಾಯಪಟ್ಟರು.
ಇಲ್ಲಿಯ ಬ್ಯಾಂಕರ್ಸ್ ಭವನದಲ್ಲಿ ಇತ್ತೀಚೆಗೆ ಧಾರವಾಡದ ಜ್ಞಾನಯೋಗಿ ವಿದ್ಯಾಸಂಸ್ಥೆಯ ಉದ್ಘಾಟನೆ, ಪದಾಧಿಕಾರಿಗಳ ಪದಗ್ರಹಣ, ವೈ.ಬಿ. ಕಡಕೋಳರ ಸಾರಥ್ಯದಲ್ಲಿ ಪ್ರಕಟಗೊಂಡ "ಗಾಣಿಗರ ಹೆಜ್ಜೆಗಳು' ಪುಸ್ತಕ ಬಿಡುಗಡೆ, ಗಾಣಿಗ ರತ್ನ ರಾಜ್ಯ ಪ್ರಶಸ್ತಿ ವಿಜೇತ ಲೇಖಕರಿಗೆ ಗೌರವ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಗಾಣಿಗರು ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಆದರೆ, ಒಗ್ಗಟ್ಟು ಎಂಬುದಿಲ್ಲ. ಇದರಿಂದಾಗಿ ಊರಿಗೊಂದು ಸಂಘಗಳು ಉದಯವಾಗಿವೆ. ಎಲ್ಲ ಒಳಪಂಗಡಗಳು ಮತ್ತು ಸಂಘಗಳು ಏಕತೆಯಿಂದ ಇರಬೇಕಾಗಿದೆ ಎಂದರು.
ಸಾನ್ನಿಧ್ಯ ವಹಿಸಿದ್ದ ಕೊರ್ತಿ ಕೋಲಾರದ ಯೋಗಿ ಕಲ್ಲಿನಾಥ ಸ್ವಾಮೀಜಿ ಮಾತನಾಡಿ, ವಿಜಯಪುರ ಜ್ಞಾನಯೋಗಿ ವಿದ್ಯಾಸಂಸ್ಥೆಯು ಲಿಂ. ಸಿದ್ದೇಶ್ವರ ಶ್ರೀಗಳ ಹೆಸರಿನಿಂದ ಉದಯವಾಗಿದ್ದು, ಜನಪರ ಕಾರ್ಯಕ್ರಮ ರೂಪಿಸಲಿ, ಗಾಣಿಗ ನಿಗಮ ಸ್ಥಾಪನೆಗೆ ಸಮಾಜದ ವಿವಿಧ ಸಂಘಗಳು ಒಗ್ಗಟ್ಟಿನಿಂದ ಹೋರಾಟ ಮಾಡುವ ಅವಶ್ಯಕತೆ ಇದೆ. ಸಮಾಜದ ಹೋರಾಟದಲ್ಲಿ ತಾವು ಭಾಗಿಯಾಗುವುದಾಗಿ ಹೇಳಿದರು.
ಸಂಸ್ಥೆಯ ಅಧ್ಯಕ್ಷ ಎಂ.ಎಸ್. ಗಾಣಿಗೇರ ಅಧ್ಯಕ್ಷತೆ ವಹಿಸಿದ್ದರು. ಕೊಪ್ಪಳ ಜಿಪಂ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಆರ್.ಜಿ. ಪಾಟೀಲ, ಜಿ.ಎಸ್. ಛಬ್ಬಿ, ಅಶೋಕ ನವಲಗುಂದ, ಮೇಘನಾ ಮಾತನಾಡಿದರು. ಶಿಕ್ಷಕ ಸಾಹಿತಿ ವೈ.ಬಿ. ಕಡಕೋಳ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಶರಣಪ್ಪಗೌಡ ಕೆಂಚಮ್ಮನವರ, ಪ್ರಕಾಶ ಬಾಳೆಕುಂದ್ರಿ, ಮಾಲತೇಶ ಹಂಚಿನಾಳ, ಅಶೋಕ ಮಜ್ಜಿಗುಡ್ಡ, ಅಶೋಕ ಶಿರೂರ, ರಮೇಶ ಉಟಗಿ, ಕೆ.ಎಂ. ಗದಗೇರಿ, ಕೆ.ಬಿ. ಕುರಹಟ್ಟಿ, ಎಲ್.ಐ. ಲಕ್ಕಮ್ಮನವರ, ರವಿಶಂಕರ ಗಡಿಯಪ್ಪನವರ, ಯಶಸ್ವಿನಿ ಗಾಣಿಗೇರ ಉಪಸ್ಥಿತರಿದ್ದರು.