ಬಾರ್ಡರ್ ಕ್ರಾಸ್ ಮಾಡಿದ್ದಕ್ಕೆ ಗ್ಯಾಂಗ್ ವಾರ್.. ಮನುಷ್ಯರಲ್ಲ, ಕೋತಿಗಳ ಎರಡು ಗುಂಪಿನ ನಡುವೆ ಗಲಾಟೆ!

1300011
Published on

ಹನೂರು: ಮನುಷ್ಯರ ನಡುವೆ ಗುಂಪು ಘರ್ಷಣೆಗಳು ನಡೆಯುವುದು ಸಾಮಾನ್ಯ. ಆದರಿಲ್ಲಿ ಗಂಪು ಗುಂಪಾಗಿ ಜಗಳ ಆಡಿರುವುದು ಮನುಷ್ಯರಲ್ಲ ಬದಲಾಗಿ ಕೋತಿಗಳು. ಹೌದು ಕೋತಿಗಳು ಸಹ ಮತ್ತೊಂದು ಗುಂಪಿನ ಜತೆ ಕಾದಾಟಕ್ಕಿಳಿದಿರುವ ದೃಶ್ಯ ಈಗ ಭಾರೀ ವೈರಲ್​ ಆಗುತ್ತಿದೆ.

ಏರಿಯಾ ಬಾರ್ಡರ್ ಕ್ರಾಸ್ ಮಾಡಿದಕ್ಕೆ ಕೋತಿಗಳ ಎರಡು ಗುಂಪುಗಳ ನಡುವೆ ಜಗಳವಾಗಿದೆ.ಹನೂರಿನ ಸಂತೇಪೇಟೆ ಬೀದಿಯಲ್ಲಿ ಗುರುವಾರ ಈ ಘಟನೆ ನಡೆದಿದೆ. ಹನುಮನು ನೆಲೆಸಿದ ನೆಲೆಬೀಡಾದ ಹನೂರಿನಲ್ಲಿ (ಹನುಮಪುರಿ) ಸಾವಿರಾರು ವಾನರಗಳು ನೆಲೆಸಿದ್ದು, ಪ್ರತಿ ಬಡಾವಣೆಯಲ್ಲಿ ತನ್ನದೇಯಾದ ಬಳಗವನ್ನು ಹೊಂದಿವೆ.

ಒಂದು ಬಡಾವಣೆಯಲ್ಲಿರುವ ಕೋತಿಗಳು ಇನ್ನೊಂದು ಬೀದಿಗೆ ಲಗ್ಗೆ ಹಾಕಲು ಮೂಲ‌ನಿವಾಸಿ ಕೋತಿಗಳ ಸೈನ್ಯ ಬಿಡುವುದಿಲ್ಲ. ಆದರೆ ಗುರುವಾರ ಪಟ್ಟಣದ ಆಂಜನೇಯ ಬಡಾವಣೆಯಲ್ಲಿರುವ ಸುಮಾರು 15ಕ್ಕೂ ಹೆಚ್ಚು ಕೋತಿಗಳ ಹಿಂಡು ಸಂತೆಪೇಟೆ ಬೀದಿಗೆ ಲಗ್ಗೆ ಇಟ್ಟಿದ್ದವು. ಇದರಿಂದ ರೊಚ್ಚಿಗೆದ್ದ ವಿರೋಧಿ ಕೋತಿಗಳ ಗುಂಪುಗಳು ಜಗಳಕ್ಕಿಳಿದವು. ಸಾರ್ವಜನಿಕರು ಈ ದೃಶ್ಯವನ್ನು ವಿಡಿಯೋ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net