ಗುರುಕುಲಕ್ಕೆ ಶಾಸಕ ಟೆಂಗಿನಕಾಯಿ ಭೇಟಿ

IMG_20231202_212453_001.jpg
Published on

ಹುಬ್ಬಳ್ಳಿ: ಇಲ್ಲಿಯ ನೃಪತುಂಗ ಬೆಟ್ಟ ಬಳಿ ಇರುವ ಡಾ. ಗಂಗೂಬಾಯಿ ಹಾನಗಲ್ಲ ಗುರುಕುಲಕ್ಕೆ ಶನಿವಾರ ಭೇಟಿ ನೀಡಿದ ಶಾಸಕ ಮಹೇಶ ಟೆಂಗಿನಕಾಯಿ ಅವರು ಪರಿಶೀಲನೆ ನಡೆಸಿದರು.

ಗುರುಕುಲ ವಿದ್ಯಾಥಿರ್ಗಳೊಂದಿಗೆ ಸಂವಾದ ನಡೆಸಿ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದರು.

ಈ ಹಿಂದೆ ಮಹಾರಾಷ್ಟ್ರ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ ರಾಜ್ಯಗಳ ವಿದ್ಯಾಥಿರ್ಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದರು. ಈಗ ಕೇವಲ 19 ವಿದ್ಯಾಥಿರ್ಗಳು ಇದ್ದಾರೆ ಎಂದು ತಿಳಿಸಿದರು.
ಶಿಕ್ಷಕರ ಕೊರತೆ, ವೇತನ ಸಮಸ್ಯೆಗಳ ಬಗ್ಗೆ ಶಾಸಕರ ಗಮನಕ್ಕೆ ಬಂದಿತು.

ಬಿಜೆಪಿ ಮುಖಂಡರಾದ ಸಿದ್ದು ಮೊಗಲಿಶೆಟ್ಟರ, ರವಿ ನಾಯಕ, ಎಚ್.ಎಸ್. ಕಿರಣ, ಆಡಳಿತ ಅಧಿಕಾರಿಗಳಾದ ರಾಜಶೇಖರ ಕಂಠಿಗೌಡರ, ಅನಿತಾ ಹಾನಗಲ್, ಮಹೇಶ ಹಾನಗಲ್, ರು ಧಾರವಾಡಕರ, ಪಿ.ಎಚ್. ಪೂಜಾರ, ಬಸವರಾಜ ನಾಗೋಜಿ, ಮಂಜು ಕಳಸದ ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net