ಕಸ ಸುರಿಯಬೇಡಿ ಎಂದಿದ್ದಕ್ಕೆ ಲಾಂಗು​, ಮಚ್ಚು ಹಿಡಿದು ದಾಂಧಲೆ ನಡೆಸಿದ 50ಕ್ಕೂ ಹೆಚ್ಚು ಪುಂಡರು

lathi charg
Published on

ಮೈಸೂರು: ತನ್ನ ಜಮೀನಿನ ಬಳಿ ಮಾಂಸದಂಗಡಿಯ ತ್ಯಾಜ್ಯ ಸುರಿಯಬೇಡಿ ಎಂದ ಉದ್ಯಮಿ ಅರುಣ್ ಗೌಡ ಮೇಲೆ 50ಕ್ಕೂ ಹೆಚ್ಚು ಪುಂಡರ ಗುಂಪು ದಾಳಿ ನಡೆಸಿದೆ.

ನಾಚನಹಳ್ಳಿಪಾಳ್ಯದಲ್ಲಿ ಉದ್ಯಮಿಗೆ ಸೇರಿದ ಖಾಸಗಿ ಜಾಗಕ್ಕೆ ಲಾಂಗು, ಮಚ್ಚು, ಕಬ್ಬಿಣದ ರಾಡು ಹಿಡಿದು ನುಗ್ಗಿದ್ದ ದುಷ್ಕರ್ಮಿಗಳು ದಾಂಧಲೆ ನಡೆಸಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸರೆಯಾಗಿದೆ.

ಅರುಣ್​ ಗೌಡಗೆ ಸೇರಿದ ಜಾಗದ ಪಕ್ಕದಲ್ಲೇ ದನದ ಮಾಂಸದ ತ್ಯಾಜ್ಯವನ್ನು ಆರೋಪಿಗಳು ಸುರಿಯುತ್ತಿದ್ದರು. ಇದನ್ನು ಅರುಣ್​ಗೌಡ ಪ್ರಶ್ನಿಸಿದ್ದರು. ಇದರಿಂದ ಕುಪಿತಗೊಂಡ ದುಷ್ಕರ್ಮಿಗಳು ಗುಂಪು ಕಟ್ಟಿಕೊಂಡು ಅರುಣ್ ಗೌಡ ಜಾಗಕ್ಕೆ ನುಗ್ಗಿ ಕಂಡಕಂಡ ವಸ್ತುವನ್ನೆಲ್ಲ ದ್ವಂಸಗೊಳಿಸಿದ್ದಾರೆ. ಘಟನೆಯಲ್ಲಿ ಅರುಣ್ ಗೌಡ ಹಾಗೂ ಬೆಂಬಲಿಗರ ಮೇಲೂ ಹಲ್ಲೆ ಮಾಡಿದ್ದಾರೆ.

ಡಿಸಿಪಿ ಪ್ರಕಾಶ್ ಗೌಡ, ಅಶೋಕಪುರಂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಗಾಯಗೊಂಡ ಅರುಣ್ ಗೌಡಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 2013ರಲ್ಲಿ ಚಾಮರಾಜ ಕ್ಷೇತ್ರದಿಂದ ಕೆಜೆಪಿ ಅಭ್ಯರ್ಥಿಯಾಗಿ ಅರುಣ್ ಗೌಡ ಸ್ಪರ್ಧಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net