ಅಪಾಯದಿಂದ ಪಾರಾದ ಟಾಟಾ ಏಸ್ ಸವಾರರು: ಇಂಡುವಾಳು ಸಮೀಪ ದರೋಡೆಕೋರರ ದಾಳಿ

cyber crime
Published on

ಮಂಡ್ಯ: ತಾಲೂಕಿನ ಇಂಡುವಾಳು ಸಮೀಪದ ಬೈಪಾಸ್ ರಸ್ತೆಯಲ್ಲಿ ದರೋಡೆಕೋರರ ದಾಳಿಯಿಂದ ಟಾಟಾ ಏಸ್ ವಾಹನ ಚಾಲಕ ಹಾಗೂ ಸ್ನೇಹಿತ ಅಪಾಯದಿಂದ ಪಾರಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಆ.15ರಂದು ರಾತ್ರಿ ಚಾಲಕ ಚಂದ್ರು ಹಾಗೂ ದಯಾನಂದ್ ಎಂಬುವರು ಟಾಟಾ ಏಸ್‌ನಲ್ಲಿ ತರಕಾರಿ ತುಂಬಿಕೊಂಡು ಮೈಸೂರಿನಿಂದ ಮದ್ದೂರಿಗೆ ಬರುತ್ತಿದ್ದರು. ಬೈಪಾಸ್ ರಸ್ತೆಗೆ ತೆರಳುತ್ತಿದ್ದಂತೆ ವಿಭಜಕದ ಮಧ್ಯೆಯ ಗಿಡಗಳಲ್ಲಿ ಅವಿತು ಕುಳಿತ್ತಿದ್ದ ಐವರು ತಂಡ ಮಾರಾಕಾಸ್ತ್ರದೊಂದಿಗೆ ದಾಳಿ ನಡೆಸಿದೆ. ಮಾತ್ರವಲ್ಲದೆ ಏಕಾಏಕಿ ಕಲ್ಲುಗಳಿಂದ ವಾಹನಕ್ಕೆ ಎಸೆದ ಪರಿಣಾಮ ಮುಂಭಾಗದ ಗಾಜು ಒಡೆದಿದೆ. ಆದರೂ ಚಂದ್ರು ವಾಹನವನ್ನು ನಿಲ್ಲಿಸದೇ ವೇಗವಾಗಿ ಚಲಾಯಿಸಿಕೊಂಡು ತೆರಳಿದ ಪರಿಣಾಮ ಅಪಾಯದಿಂದ ಪಾರಾಗಿದ್ದಾರೆ. ಈ ಸಂಬಂಧ ದೂರು ದಾಖಲಾಗಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net