ಹುಬ್ಬಳ್ಳಿ: ತಾಲೂಕಿನ ಗಂಗಿವಾಳದ ಶ್ರೀ ಕರಿಯಮ್ಮದೇವಿಯ ಜಾತ್ರಾ ಮಹೋತ್ಸವ ಮಾ. 30ರಂದು ಆಯೋಜಿಸಲಾಗಿದೆ.
ಬೆಳಗ್ಗೆ ದೇವಿಗೆ ಮಹಾಭಿಷೇಕ, ಹೋಮ ನಡೆಯಲಿದೆ. ಶ್ರೀ ಮಹಾಂತಯ್ಯ ಸ್ವಾಮಿ ಹಿರೇಮಠ ನೇತೃತ್ವ ವಹಿಸುವರು.
ಬೆಳಗ್ಗೆ 8ಕ್ಕೆ ಗ್ರಾಮದ ಬೀದಿಗಳಲ್ಲಿ ವಾದ್ಯಮೇಳದೊಂದಿಗೆ ಪಲ್ಲಕ್ಕಿ ಉತ್ಸವ ಮತ್ತು ಉಡಿ ತುಂಬುವ ಕಾರ್ಯಕ್ರಮ, 11 ಗಂಟೆಗೆ ಜೋಗಮ್ಮರಿಂದ ಪಡ್ಡಲಗಿ ತುಂಬಿಸುವುದು, ಮಧ್ಯಾಹ್ನ 1ಕ್ಕೆ ಅನ್ನಸಂತರ್ಪಣೆ ನಡೆಯಲಿದೆ. ಭಕ್ತರು ಪಾಲ್ಗೊಳ್ಳಬೇಕೆಂದು ಶ್ರೀ ಕರಿಯಮ್ಮದೇವಿ ಚಾರಿಟಬಲ್ ಟ್ರಸ್ಟ್ ಪ್ರಕಟಣೆ ಕೋರಿದೆ.