

ಅರಸೀಕೆರೆ ಗ್ರಾಮಾಂತರ: ಬಾಣಾವರ ಹೋಬಳಿಯ ಗಂಜಿಗೆರೆಪುರದ ಶ್ರೀ ಲಕ್ಷ್ಮೀ ರಂಗನಾಥ ಸ್ವಾಮಿ ಬ್ರಹ್ಮರಥೋತ್ಸವ ಏ. 23 ರಂದು
ನೆರವೇರಲಿದೆ. ಜಾತ್ರಾ ಮಹೋತ್ಸವದ ಪ್ರಯುಕ್ತ 21 ರಂದು ಪಂಚಾಮೃತ ಅಭಿಷೇಕ, ಗಂಗಾಸ್ನಾನ, ಬಲಿ ಪ್ರದಾನೋತ್ಸವ, ಸಂಪ್ರೋಕ್ಷಣೆ, ರಕ್ಷಾ ಬಂಧನ, 22ರಂದು ನವಿಲೋತ್ಸವ, ಗಜೇಂದ್ರ ಮೋಕ್ಷ, ಗರುಡೋತ್ಸವ, ಲಕ್ಷ್ಮೀ ಕಲ್ಯಾಣೋತ್ಸವ, 23 ರಂದು ಬ್ರಹ್ಮ ರಥೋತ್ಸವ ಏರ್ಪಡಿಸಲಾಗಿದೆ. 24ರಂದು ರಥಾವರೋಹಣ ಪೂಜೆ, ಅಡ್ಡಪಲ್ಲಕ್ಕಿ ಉತ್ಸವ, ಕುಂಕುಮೋತ್ಸವ, ಶಾಂತೋತ್ಸವ, ಪ್ರಹ್ಲಾದ ಪುರಾಣ, ಗರುಡೋತ್ಸವ, ಉಯ್ಯಲೋತ್ಸವ, ಶಯನೋತ್ಸ, ಮಧ್ಯಾಹ್ನ 12ಕ್ಕೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. 25ರಂದು ಅಶ್ವರೋಹಣೋತ್ಸವ, ಚೂರ್ಣೋತ್ಸವ, ಓಕಳಿ ತೀರ್ಥಸ್ನಾನ ರಾತ್ರಿ 10 ಕ್ಕೆ ಹನುಮಂತೋತ್ಸವ, ರಾತ್ರಿ ಗ್ರಾಮದೇವತೆಗೆ ಮದುವಣೆಗೆ ಶಾಸ್ತ, ಬೇವಿನುಡಿಗೆ ಸೇವೆ ನೆರವೇರಲಿದೆ. 26 ರ ರಾತ್ರಿ ಲಕ್ಷ್ಮಿ ರಂಗನಾಥ ಸ್ವಾಮಿ ಕೃಪಾಪೋಷಿತ ನಾಟಕ ಮಿತ್ರ ಮಂಡಳಿಯಿಂದ ಕುರುಕ್ಷೇತ್ರ ಅಥವಾ ಧರ್ಮರಾಜ್ಯ ಸ್ಥಾಪನೆ -ಪೌರಾಣಿಕ ನಾಟಕವಿದೆ.