

ನರೇಗಲ್ಲ: ಜಕ್ಕಲಿ ಗ್ರಾಪಂ 2ನೇ ಅವಧಿಯ ಅಧ್ಯಕ್ಷೆಯಾಗಿ ಗಂಗವ್ವ ಜಂಗಣ್ಣವರ, ಉಪಾಧ್ಯಕ್ಷೆಯಾಗಿ ನಿರ್ಮಲಾ ಆದಿ ಬುಧವಾರ ಆಯ್ಕೆಯಾಗಿದ್ದಾರೆ.
13 ಸದಸ್ಯ ಬಲದ ಗ್ರಾಪಂನಲ್ಲಿ 8 ಕಾಂಗ್ರೆಸ್, 5 ಬಿಜೆಪಿ ಬೆಂಬಲಿತ ಸದಸ್ಯರಿದ್ದಾರೆ. ಅಧ್ಯಕ್ಷ ಸ್ಥಾನ ಸಾಮಾನ್ಯ(ಮಹಿಳೆ) ಹಾಗೂ ಉಪಾಧ್ಯಕ್ಷ ಸ್ಥಾನವು ಅನುಸೂಚಿತ ಜಾತಿಗೆ ಮೀಸಲಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಸದಸ್ಯೆ ಗಂಗವ್ವ ಜಂಗಣ್ಣವರ ಹಾಗೂ ಕಾಂಗ್ರೆಸ್ ಬೆಂಬಲಿತ ಸದಸ್ಯೆ ಬೀಬಿಜಾನ ಕದಡಿ ನಾಮಪತ್ರ ಸಲ್ಲಿಸಿದ್ದರು.
ಗಂಗವ್ವ ಜಂಗಣ್ಣವರ 7 ಮತ ಹಾಗೂ ಪ್ರತಿಸ್ಪರ್ಧಿ ಬೀಬಿಜಾನ ಕದಡಿ 6 ಮತ ಪಡೆದರು. ಉಪಾಧ್ಯಕ್ಷರ ಸ್ಥಾನಕ್ಕೆ ನಿರ್ಮಲವ್ವ ಆದಿ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾದರು.
8 ಸದಸ್ಯ ಬಲ ಹೊಂದಿದ್ದ ಕಾಂಗ್ರೆಸ್ ಬೆಂಬಲಿತರಲ್ಲಿ ಒಬ್ಬರು ಬಿಜೆಪಿಗೆ ಅಡ್ಡಮತದಾನ ಮಾಡಿದ್ದರಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಪರಾಭವಗೊಂಡಿದ್ದು, ಕಾಂಗ್ರೆಸ್ ಪಾಳೆಯದಲ್ಲಿ ಇರಿಸು ಮುರಿಸಿಗೆ ಕಾರಣವಾಯಿತು. ಸ್ಪಷ್ಟ ಬಹುಮತವಿದ್ದರೂ ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳುವಂತಾಯಿತು.
ಬಿಜೆಪಿ ಸದಸ್ಯರು, ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಿದರು. ರೋಣ ಮಂಡಲ ಬಿಜೆಪಿ ಅಧ್ಯಕ್ಷ ಮುತ್ತಣ್ಣ ಕಡಗದ, ಅನಸೂಯಾ ಜಂಗಣ್ಣವರ, ವೀರಪ್ಪ ವಾಲಿ, ಬಸವರಾಜ ಶ್ಯಾಶೆಟ್ಟಿ, ಶಿವನಾಗಪ್ಪ ದೊಡ್ಡಮೇಟಿ, ಚನ್ನಬಸವರಾಜ ಕೊಪ್ಪದ, ಶೇಖಪ್ಪ ಮಾರನಬಸರಿ, ಪ್ರಕಾಶ ವಾಲಿ, ಜಗದೀಶ ಪಲ್ಲೇದ, ವೀರಯ್ಯ ಹಿರೇಮಠ, ಪುಂಡಪ್ಪ ಮಡಿವಾಳರ, ಶೇಖರಪ್ಪ ಆದಿ, ಮಲ್ಲಪ್ಪ ಪಲ್ಲೇದ, ನಾಗರಾಜ ಸೋಮನಕಟ್ಟಿ, ಮಲ್ಲಣ್ಣ ಕುರಡಗಿ, ಉಮೇಶ ನರೇಗಲ್ಲ, ಶರಣಪ್ಪ ಕೋರಿ, ಶಿವಪ್ಪ ಕೆಳಗಡೆ, ಬಸವಂತಪ್ಪ ಕೋರಿ, ಪ್ರಕಾಶ ಕೋರಿ, ಕಂಠಯ್ಯ ರೇಣುಕಮಠ ಇತರರಿದ್ದರು.