ಪೂರ್ವಸಿದ್ಧತೆಯೊಂದಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಎದುರಿಸಿ: ಜಿಪಂ ಸಿಇಒ ಫೌಜಿಯಾ ತರನ್ನುಮ್ ಕಿವಿಮಾತು

22012023 gangavati sslc student couching
Published on

ಗಂಗಾವತಿ: ವಿಷಯವಾರು ಪರೀಕ್ಷೆಯನ್ನು ಪೂರ್ವಸಿದ್ಧತೆಯೊಂದಿಗೆ ಬರೆದರೆ ನಿರೀಕ್ಷಿತ ಲಿತಾಶ ಪಡೆಯಲು ಸಾಧ್ಯ ಎಂದು ಜಿಪಂ ಸಿಇಒ ಫೌಜಿಯಾ ತರನ್ನುಮ್ ಹೇಳಿದರು.

ನಗರದ ಇಲಾಹಿ ಕಾಲನಿ ಟಿಎಂಎಇ ಬಿ.ಇಡಿ ಕಾಲೇಜಿನಲ್ಲಿ ಶಿಕ್ಷಣ ಇಲಾಖೆ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಶನಿವಾರ ಹಮ್ಮಿಕೊಂಡಿದ್ದ ಪ್ರೇರಣಾ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಕಲಿಯುವ ಸಮಯದಲ್ಲಿ ವಿಷಯವನ್ನು ಮನನಮಾಡಿಕೊಂಡರೆ ಸುಲಭವಾಗಿ ಪರೀಕ್ಷೆ ಬರೆಯಬಹುದು. ಸಮಸ್ಯೆಗಳು ಎದುರಾದರೆ ಶಿಕ್ಷಕರಿಂದ ಪರಿಹಾರ ಕಂಡುಕೊಳ್ಳಬೇಕು. ನಿರಂತರ ಅಧ್ಯಯನದಿಂದ ಎಲ್ಲವನ್ನೂ ಸಾಧಿಸಲು ಸಾಧ್ಯವಿದ್ದು, ಏಕಾಗ್ರತೆ ರೂಢಿಸಿಕೊಳ್ಳಬೇಕು ಎಂದರು.

ಡಿಡಿಪಿಐ ಎಂ.ಎ.ರಡ್ಡೇರ್ ಮಾತನಾಡಿ, ಪರೀಕ್ಷೆ ಇನ್ನೂ 70 ದಿನಗಳಿದ್ದು, ಗೈರಾಗದೇ ವಿಷಯಗಳನ್ನು ಕಲಿಯಬೇಕು. ಓದಿನ ಕಡೆಗೆ ಹೆಚ್ಚು ಗಮನ ಹರಿಸಿ ಅಭ್ಯಾಸ ಮಾಡಿದರೆ ಉತ್ತಮ ಲಿತಾಂಶ ಬರುತ್ತದೆ ಎಂದು ತಿಳಿಸಿದರು. ಸಂಪನ್ಮೂಲ ವ್ಯಕ್ತಿಗಳಾದ ಸತ್ಯನಾರಾಯಣ, ರಮೇಶ ವಿವಿಧ ವಿಷಯಗಳ ಪರೀಕ್ಷೆ ಬರೆಯುವ ಕುರಿತು ಮಾಹಿತಿ ನೀಡಿದರು. ಬಿಇಒ ಸೋಮಶೇಖರಗೌಡ ತಿಪ್ಪನಾಳ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸುರೇಶಗೌಡ, ಶಿಕ್ಷಣ ಸಂಯೋಜಕ ರಾಘವೇಂದ್ರ, ಕಾಲೇಜಿನ ಪ್ರಾಚಾರ್ಯ ಡಾ.ಕೆ.ಸಿ.ಕುಲ್ಕರ್ಣಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net