ವೇದ ಶಾಸದಲ್ಲಿ ಪರಿಸರ ಕಾಳಜಿ, ಪಂ.ಗೋವಿಂದಾಚಾರ್ಯ ಬಾದರ್ಲಿ ಹೇಳಿಕೆ

Yajnavalkya Jayanthyutsava
ಗಂಗಾವತಿಯಲ್ಲಿ ಹಮ್ಮಿಕೊಂಡಿದ್ದ ಶ್ರೀಮದ್ ಯೋಗೀಶ್ವರ ಯಾಜ್ಞವಲ್ಕ್ಯ ಜಯಂತ್ಯುತ್ಸವದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಗುರುವಾರ ಸನ್ಮಾನಿಸಲಾಯಿತು. ಯಾಜ್ಞವಲ್ಕ್ಯ ಸೇವಾ ಸಮಿತಿ ಅಧ್ಯಕ್ಷ ಮುರಳೀಧರ ಕುಲ್ಕರ್ಣಿ, ಪಿಎಸ್ಸೆಸ್ಸೆನ್ ಮಾಜಿ ಸದಸ್ಯ ರಮೇಶ ಕುಲ್ಕರ್ಣಿ ಮರಳಿ, ಮುಖಂಡರಾದ ತಿರುಮಲರಾವ್ ಆಲಂಪಲ್ಲಿ, ಪ್ರಲ್ಹಾದರಾವ್ ಕೊಮಲಾಪುರ, ಶೇಷಗಿರಿ ಕುಲ್ಕರ್ಣಿ ಇತರರಿದ್ದರು.
Published on

ಗಂಗಾವತಿ: ಇಲ್ಲಿನ ಜವಾಹರ ನಗರದ ಶ್ರೀ ಹನುಮಂತ ದೇವರ ದೇವಾಲಯದಲ್ಲಿ ಶ್ರೀಮದ್ ಯೋಗೀಶ್ವರ ಯಾಜ್ಞವಲ್ಕ್ಯ ಜಯಂತ್ಯುತ್ಸವ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ ಗುರುವಾರ ನಡೆಯಿತು.

ಯಾಜ್ಞವಲ್ಕ್ಯರ ಜ್ಞಾನ ಸಂಪತ್ತು ಕುರಿತು ಉಪನ್ಯಾಸ ನೀಡಿದ ಪಂ.ಗೋವಿಂದಾಚಾರ್ಯ ಬಾದರ್ಲಿ, ವೇದ ಶಾಸದಲ್ಲಿ ಗಿಡಮರಗಳಿಗೆ ದೇವತೆಗಳ ಸ್ಥಾನ ನೀಡುವ ಮೂಲಕ ಪರಿಸರ ಕಾಳಜಿಗೆ ಒತ್ತು ನೀಡಲಾಗಿದೆ. ಪ್ರತಿಯೊಂದು ಮರಗಳಲ್ಲೂ ದೇವತೆಯನ್ನು ಆಹ್ವಾನ ಮಾಡಿಕೊಳ್ಳುವ ಪದ್ಧತಿ ಇಂದಿಗೂ ವೇದ ಶಾಸದಲ್ಲಿದೆ ಎಂದರು.

ಬೆಳಗ್ಗೆ ಸುಪ್ರಭಾತ, ನಿರ್ಮಾಲ್ಯ ವಿಸರ್ಜನೆ, ಹರಿವಾಯು ಪುನಶ್ಚರಣೆ, ಯಾಜ್ಞವಲ್ಕ್ಯರ ಅಷ್ಟೋತ್ತರ ಪಾರಾಯಣ, ದೇವಾಲಯದಲ್ಲಿನ ಪರಿವಾರದ ಮೂರ್ತಿಗಳಿಗೆ ಪಂಚಾಮೃತಾಭಿಷೇಕ, ಸ್ವಸ್ಥೃ ಆರೋಗ್ಯಕ್ಕಾಗಿ ಧ್ವನಂತರಿ ಹೋಮ, ಪೂರ್ಣಾಹುತಿ, ಪ್ರವಚನ ಮಂಗಳ, ತೀರ್ಥ ಪ್ರಸಾದ ವಿತರಣೆ, ಹರಭಜನೆ ಮತ್ತು ಅಷ್ಟವಧಾನ ಸೇವೆ ಜರುಗಿತು.

ಶ್ರೀಮದ್ ಯೋಗೀಶ್ವರ ಯಾಜ್ಞವಲ್ಕ್ಯ ಸೇವಾ ಸಮಿತಿಯಿಂದ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಇದೇ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸಮಿತಿಯಿಂದ ಸನ್ಮಾನಿಸಲಾಯಿತು.

ಸಮಿತಿ ಅಧ್ಯಕ್ಷ ಮುರಳೀಧರ ಕುಲ್ಕರ್ಣಿ, ಪಿಎಸ್ಸೆಸ್ಸೆನ್ ಮಾಜಿ ಸದಸ್ಯ ರಮೇಶ ಕುಲ್ಕರ್ಣಿ ಮರಳಿ, ಮುಖಂಡರಾದ ತಿರುಮಲರಾವ್ ಆಲಂಪಲ್ಲಿ, ಪ್ರಲ್ಹಾದರಾವ್ ಕೊಮಲಾಪುರ, ರವಿ ವೀರಾಪುರ, ವಟಗಲ್ ರಂಗನಾಥ, ಶ್ರೀಕಾಂತ ಮ್ಯಾಗೇರಿ, ಗುರುರಾಜ್ ಚಿರ್ಚನಗುಡ್ಡ, ವೆಂಕಟೇಶ ಜೋಶಿ, ಆನಂದ, ಲೆಕ್ಕಿಹಾಳ್ ರಾಘವೇಂದ್ರರಾವ್, ಗೋಪಿನಾಥ ದಿನ್ನಿ, ಶೇಷಗಿರಿ ಕುಲ್ಕರ್ಣಿ, ಮನೋಹರ ನಂದವಾಡಗಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net