

ಗಂಗಾವತಿ: ವಿಶ್ವಪರಿಸರ ದಿನ ನಿಮಿತ್ತ ನಗರದಲ್ಲಿ ಸ್ಪೂರ್ತಿ ಆಯುರ್ವೇದ ಮಹಾವಿದ್ಯಾಲಯದಿಂದ ಪ್ಲಾಸ್ಟಿಕ್ ಮುಕ್ತ ದೇಶ ಅಭಿಯಾನ ಗುರುವಾರ ಹಮ್ಮಿಕೊಳ್ಳಲಾಗಿತ್ತು.
ಪರಿಸರ ಕಾಳಜಿ ಮತ್ತು ಹಸಿರೀಕರಣಕ್ಕಾಗಿ ನಗರದಾದ್ಯಂತ ಅಭಿಯಾನ ನಡೆಸಿದ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು, ಮನೆಗೊಂದು ಮರ, ಪ್ಲಾಸ್ಟಿಕ್ ಮುಕ್ತ ದೇಶ ನಿರ್ಮಾಣಕ್ಕೆ ಕೈ ಜೋಡಿಸುವಂತೆ ಮನವಿ ಮಾಡಿದರು.
ಪ್ರಾಚಾರ್ಯ ಡಾ.ಬಸವರಾಜ ಸವಡಿ ಮಾತನಾಡಿ, ಪ್ಲಾಸ್ಟಿಕ್ ಮುಕ್ತ ಮಹಾವಿದ್ಯಾಲಯ ಎಂದು ಸಂಕಲ್ಪ ಮಾಡಿದ್ದು, ಪರಿಸರ ಕಾಳಜಿಗೆ ಒತ್ತು ನೀಡಲಾಗಿದೆ. ಆಯುರ್ವೇದ ಶಾಸ್ತ್ರದಲ್ಲಿ ಪರಿಸರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದು, ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಅಭಿಯಾನದಲ್ಲಿ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾದ ಡಾ.ಖಾಲಿದ್, ಡಾ.ಖಾದರ್, ಡಾ.ಮೋಹನ್, ಡಾ.ಕಾರ್ತಿಕ್, ಡಾ.ನಿವೇದಿತಾ, ಡಾ.ರಮೇಶ, ಉಪನ್ಯಾಸಕರಾದ ಪಂಪಾದೇವಿ, ಸೋಫಿಯಾ, ಸುರೇಶ, ಶಿಲ್ಪಾ, ಆಡಳಿತಾಧಿಕಾರಿ ಸ್ಯಾಮ್ಯೂಯೆಲ್ ಇತರರಿದ್ದರು.
ಪ್ರತಿಭಾ ಶಾಲೆ: ನಗರದ ಪ್ರತಿಭಾ ಪ್ರಾಥಮಿಕ ಮತ್ತು ಪ್ರೌಢಶಾಲೆ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್‌ನಿಂದ ಸಸಿಗಳನ್ನು ನೆಟ್ಟು ಪರಿಸರ ದಿನ ಆಚರಿಸಲಾಯಿತು. ಪರಿಸರ ಕಾಳಜಿ, ಸಂರಕ್ಷಣೆ ಮತ್ತು ಹಸೀಕರೀಣ ಕುರಿತು ಶಾಲಾಡಳಿತ ಮಂಡಳಿ ಅಧ್ಯಕ್ಷೆ ಎಚ್.ಪುಟ್ಟಮ್ಮ ಗಿಡ್ಡಿ ಮಾತನಾಡಿದರು. ಸಂಸ್ಥೆ ಪ್ರತಿನಿಧಿಗಳಾದ ಲೋಕೇಶ, ಪ್ರಕಾಶ, ಕಾರ್ಯದರ್ಶಿ ಎಚ್.ಅರುಣ್ ಗಿಡ್ಡಿ, ಸದಸ್ಯರಾದ ಶಶಿಕಲಾ ಅರುಣ್ ಗಿಡ್ಡಿ, ಕೆಂಚಪ್ಪ ಮಾಳಮ್ಮನವರ್, ಮುಖ್ಯಶಿಕ್ಷಕರಾದ ಎಚ್.ಸುಮಾಗಿಡ್ಡಿ, ಬೀಬನ್‌ಬೀ, ಶಿಕ್ಷಕರಾದ ಮಂಜುನಾಥ, ಬಿ.ಜ್ಯೋತಿ, ದಾಕ್ಷಾಯಣಿ, ಅರುಣಾ ಶಿರಿಗೇರಿ, ಪಿ.ಲತಾ, ಶಾಹೀನ್ ಇತರರಿದ್ದರು.
ಅಕ್ಷರ ಪಬ್ಲಿಕ್ ಸ್ಕೂಲ್: ಪ್ಲಾಸ್ಟಿಕ್ ಮುಕ್ತ ಭಾರತಕ್ಕಾಗಿ ನಗರದ ಅಕ್ಷರ ಪಬ್ಲಿಕ್ ಸ್ಕೂಲ್‌ನಲ್ಲಿ ಪರಿಸರ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಲಯನ್ಸ್ ಕ್ಲಬ್ ತಾಲೂಕು ಘಟಕದಿಂದ ನಡೆದ ಅಭಿಯಾನದಲ್ಲಿ ಬೀದಿ ಬದಿಯ ವ್ಯಾಪಾರಿಗಳಿಗೆ ಪರಿಸರ ಸ್ನೇಹಿ ಬ್ಯಾಗ್‌ಗಳನ್ನು ಉಚಿತ ವಿತರಿಸಲಾಯಿತು. ಇದಕ್ಕೂ ಮುನ್ನ ಶ್ರೀಕೃಷ್ಣ ದೇವರಾಯ ವೃತ್ತದಿಂದ ಶಾಲೆವರೆಗೆ ಜಾಗೃತಿ ಜಾಥಾ ನಡೆಯಿತು. ಶಾಲಾಡಳಿತ ಮಂಡಳಿ ಅಧ್ಯಕ್ಷ ರವಿ ಚೈತನ್ಯರೆಡ್ಡಿ ಮಾತನಾಡಿ, ಗಿಡಗಳನ್ನು ಬೆಳೆಸುವ, ನೀರನ್ನು ಸಂರಕ್ಷಿಸುವ ಹಾಗೂ ಕಡಿಮೆ ಪ್ಲಾಸ್ಟಿಕ್ ಬಳಕೆಗೆ ಆದ್ಯತೆ ನೀಡಬೇಕಿದೆ ಎಂದರು. ಲಯನ್ಸ್ ಕ್ಲಬ್ ಅಧ್ಯಕ್ಷ ಸುಬ್ರಮಣ್ಯೇಶ್ವರರಾವ್, ಕಾರ್ಯದರ್ಶಿ ಡಾ.ಶಿವಕುಮಾರ ಮಾ.ಪಾಟೀಲ್, ಮುಖ್ಯಶಿಕ್ಷಕಿ ಹಿಮಾರೆಡ್ಡಿ, ಶಿಕ್ಷಕರಾದ ಸವಿತಾ, ಮಂಜುಳಾ, ಆಸ್ಮಾ ಇತರರಿದ್ದರು.
ಪತಂಜಲಿ ಯೋಗ ಸಮಿತಿ: ನಗರದ ತಾಲೂಕು ಕ್ರೀಡಾಂಗಣದ ಯೋಗ ಕೇಂದ್ರದಲ್ಲಿ ಪತಂಜಲಿ ಯೋಗ ಸಮಿತಿಯಿಂದ ವಿಶ್ವ ಪರಿಸರ ದಿನ ನಿಮಿತ್ತ ಸಸಿಗಳನ್ನು ನೆಡಲಾಯಿತು. ಸಮಿತಿ ರಾಜ್ಯ ಪ್ರಭಾರ ಡಾ.ಎಸ್.ಬಿ. ಹಂದ್ರಾಳ್, ಸದಸ್ಯ ಮಲ್ಲಿಕಾರ್ಜುನ ನೂಲ್ವಿ, ವಕೀಲ ನಾಗರಾಜ ಜವಳಿ, ತಾಲೂಕು ಸಮಿತಿ ಸದಸ್ಯರಾದ ಪ್ರಭು ಶೆಟ್ಟರ್, ಕೊಟ್ರೇಶ, ಸಂಗಪ್ಪ ಶೆಟ್ಟರ್ ಇತರರಿದ್ದರು.