ಸ್ವಯಂ ಪ್ರೇರಣೆಯಿಂದ ಪ್ಲಾಸ್ಟಿಕ್ ಬಳಕೆ ನಿಷೇಧಿಸಿ

Gangavathi World Environment Day
ಶ್ರೀರಾಮನಗರದ ಸಿಎನ್‌ಆರ್ ಸರ್ಕಾರಿ ಪದವಿ ಕಾಲೇಜಿನಲ್ಲಿ ವಿವಿಧ ಸಸಿಗಳನ್ನು ನೆಡಲಾಯಿತು. ಪ್ರಾಚಾರ್ಯೆ ಡಾ.ಕೆ.ಎಸ್. ಶೋಭಾ, ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರೊ.ಸುಂಕೇಶ್ವರ ಕರಿಗೂಳಿ ಇತರರಿದ್ದರು.
Published on

ಗಂಗಾವತಿ: ನಗರದ ಲಿಟಲ್ ಹಾರ್ಟ್ಸ್ ಶಾಲೆಯಲ್ಲಿ ವಿಶ್ವ ಪರಿಸರ ದಿನ ನಿಮಿತ್ತ ಜಾಗೃತಿ ಅಭಿಯಾನ ಶುಕ್ರವಾರ ನಡೆಯಿತು. ಭಿತ್ತಿಪತ್ರದೊಂದಿಗೆ ವಿದ್ಯಾರ್ಥಿಗಳು ಜಾಗೃತಿ ಮೂಡಿಸಿದರಲ್ಲದೇ ಪ್ಲಾಸ್ಟಿಕ್ ಬಳಕೆಯಿಂದ ಪರಿಸರ ಮೇಲಾಗುತ್ತಿರುವ ದುಷ್ಪರಿಣಾಮ ಕುರಿತು ಅರಿವು ಮೂಡಿಸಿದರು.

ಶಾಲಾಡಳಿತ ಮಂಡಳಿ ಕಾರ್ಯದರ್ಶಿ ಜಗನ್ನಾಥ ಆಲ್ಲಂಪಲ್ಲಿ ಮಾತನಾಡಿ, ಪರಿಸರ ಸಂರಕ್ಷಣೆ ಮೂಲಕ ಜೀವ ಸಂಕುಲ ಉಳಿಸಬೇಕಿದ್ದು, ಸ್ವಯಂ ಪ್ರೇರಣೆಯಿಂದ ಪ್ಲಾಸ್ಟಿಕ್ ಬಳಕೆ ನಿಷೇಧಿಸಬೇಕಿದೆ ಎಂದರು. ನಂತರ ಶಾಲಾವರಣದಲ್ಲಿ ಸಸಿಗಳನ್ನು ನೆಡಲಾಯಿತು. ಮುಖ್ಯಶಿಕ್ಷಕಿ ಪ್ರಿಯಾಕುಮಾರಿ, ಶಿಕ್ಷಕರಾದ ನೀಲಕಂಠ ಅರಹುಣಸಿ, ಸೋಮಶೇಖರ, ಛತ್ರಪ್ಪ, ಮೇಘಾ, ಅಂಜಿತಾ ಇತರರಿದ್ದರು.

ಶ್ರೀರಾಮನಗರ: ಇಲ್ಲಿನ ಸಿಎನ್‌ಆರ್ ಸರ್ಕಾರಿ ಪದವಿ ಕಾಲೇಜಿನಲ್ಲಿ ಇಕೋ ಕ್ಲಬ್, ರಾಷ್ಟ್ರೀಯ ಸೇವಾ ಯೋಜನಾ ಕೋಶ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಪರಿಸರ ಪ್ರೇಮಿಗಳ ಸಹಯೋಗದಲ್ಲಿ ವಿಶ್ವ ಪರಿಸರ ದಿನ ನಿಮಿತ್ತ ವಿವಿಧ ಬಗೆಯ ಸಸಿಗಳನ್ನು ನೆಡಲಾಯಿತು. ಪರಿಸರ ಸಂರಕ್ಷಣೆ ಮತ್ತು ಜಾಗತಿಕ ತಾಪಮಾನ ಕುರಿತು ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರೊ.ಸುಂಕೇಶ್ವರ ಕರಿಗೂಳಿ ಮಾತನಾಡಿದರು. ಪ್ರಾಚಾರ್ಯೆ ಡಾ.ಕೆ.ಎಸ್.ಶೋಭಾ, ಸಹಾಯಕ ಪ್ರಾಧ್ಯಾಪಕರಾದ ವಿರೂಪಾಕ್ಷ, ಕೆ.ತಾತಪ್ಪ, ಡಾ.ಶಶಿಕುಮಾರ, ರವಿಕುಮಾರ್, ಶಂಕ್ರಪ್ಪ, ಜಬೀನಾ, ವಿನಾಯಕ, ವೆಂಕಟರಾಜು, ಸಂಧ್ಯಾ, ಡಾ.ದೇವರಾಜ್, ರಾಧಾ ಇತರರಿದ್ದರು.

ಹೇರೂರು: ತಾಲೂಕಿನ ಕೇಸರಹಟ್ಟಿಯ ಹಳ್ಳಿ ಬಸವೇಶ್ವರ ದೇವಾಲಯದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್‌ನಿಂದ ಹಣ್ಣಿನ ಸಸಿಗಳನ್ನು ನೆಡುವ ಮೂಲಕ ಪರಿಸರ ದಿನ ಆಚರಿಸಲಾಯಿತು. ತಾಲೂಕು ಜ್ಞಾನ ವಿಕಾಸ ಸಮನ್ವಯಾಧಿಕಾರಿ ಸುಧಾ ಮಾತನಾಡಿದರು. ಗ್ರಾಪಂ ಸದಸ್ಯರಾದ ನಿರುಪಾದಿಗೌಡ ಮಾ.ಪಾಟೀಲ್, ದೇವರಾಜ್ ಬಡಿಗೇರ್, ಪ್ರಮುಖರಾದ ನವೀನ್ ಕುಮಾರ್, ಹುಲುಗಪ್ಪ, ಅಮರೇಗೌಡ, ಶರಣಪ್ಪ ಬೂದಿಹಾಳ್, ಪಂಪಯ್ಯ ಸ್ವಾಮಿ, ಮಂಜುನಾಥ್ ಹಕ್ಕಿ, ಸೇವಾಪ್ರತಿನಿಧಿ ಲತಾ ಇತರರಿದ್ದರು.

ವಿದ್ಯಾನಗರ: ನಗರದ 14ನೇನ ಸ.ಹಿ.ಪ್ರಾ.ಶಾಲೆಯಲ್ಲಿ ಪರಿಸರ ದಿನ ನಿಮಿತ್ತ ಸಸಿಗಳನ್ನು ನೆಡಲಾಯಿತು. ನಗರಸಭೆ ಸದಸ್ಯ ಉಮೇಶ ಸಿಂಗನಾಳ್ ಮಾತನಾಡಿದರು. ಮುಖ್ಯಶಿಕ್ಷಕಿ ವಿ.ಎ.ನಿರ್ಮಲಾ, ಶಿಕ್ಷಕರಾದ ನಾಗಮ್ಮ, ಪ್ರಮೀಳಾಬಾಯಿ, ರೇಖಾ, ಅಂಗನವಾಡಿ ಕಾರ್ಯಕರ್ತೆ ಪುಷ್ಪಾವತಿ ಇತರರಿದ್ದರು.

ಸರ್ಕಾರಿ ಜೂನಿಯರ್ ಕಾಲೇಜು: ಆವರಣದಲ್ಲಿ ವಿಶ್ವ ಪರಿಸರ ದಿನ ನಿಮಿತ್ತ ವಿವಿಧ ಬಗೆಯ ಸಸಿಗಳನ್ನು ನೆಡಲಾಯಿತು. ಸಸಿಗಳ ಆರೈಕೆಗೆ ವಿದ್ಯಾರ್ಥಿಗಳ ಗುಂಪು ರಚಿಸಿದ್ದು, ಜವಾಬ್ದಾರಿ ನೀಡಲಾಯಿತು. ಪ್ರಾಚಾರ್ಯ ಬಸಪ್ಪ ನಾಗೋಲಿ, ಉಪನ್ಯಾಸಕರಾದ ಚಂದ್ರಶೇಖರ, ಲಲಿತಾಬಾಯಿ, ರಮಾ, ಶ್ರೀದೇವಿ, ಅಜಗರ್ ಪಾಷಾ, ಚಿದಾನಂದ ಮೇಟಿ, ಎಂ.ನಾಗಪ್ಪ ಕುಮಾರಸ್ವಾಮಿ, ಸಿ.ಈಶ್ವರಪ್ಪ, ಸಾವಿತ್ರಿ, ಲಕ್ಷ್ಮೀ, ಅತಿಥಿ ಉಪನ್ಯಾಸಕರಾದ ಕವಿತಾ, ಕನಕಮ್ಮ, ನಿರುಪಾದಿ, ಮಹೇಶ್ ಹಿರೇಮಠ, ರುದ್ರೇಶ್ ತಬಾಲಿ ಇತರರಿದ್ದರು.

ಎಚ್‌ಆರ್‌ಎಸ್ ಕಾಲನಿ: ನಗರದ ಎಚ್‌ಆರ್‌ಎಸ್ ಕಾಲನಿ ಸ.ಹಿ.ಪ್ರಾ.ಶಾಲೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್‌ನಿಂದ ವಿಶ್ವ ಪರಿಸರ ದಿನ ಆಚರಿಸಲಾಯಿತು. ಕೃಷಿ ಮೇಲ್ವಿಚಾರಕ ಲೋಕೇಶ ಮಾತನಾಡಿದರು. ಮುಖ್ಯಶಿಕ್ಷಕ ರವಿಕುಮಾರ, ವಲಯ ಮೇಲ್ವಿಚಾರಕ ಬಿ.ನೀಲರಾಜ, ಸೇವಾಪ್ರತಿನಿಧಿಗಳಾದ ಸುಮಿತ್ರಾ, ಮಂಜುಳಾ ಶಿಕ್ಷಕರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net