ಖಾತ್ರಿ ಯೋಜನೆ ಸಮರ್ಪಕ ಅನುಷ್ಠಾನಕ್ಕೆ ಕ್ರಮ

SABHE
ಗಂಗಾವತಿ ತಾಲೂಕಿನ ಶ್ರೀರಾಮನಗರ ಗ್ರಾಪಂ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಗ್ರಾಮಸಭೆಯಲ್ಲಿ ಪಿಡಿಒ ನಾಗೇಶ ಕುರ್ಡಿ ಮಾತನಾಡಿದರು. ಅಧ್ಯಕ್ಷ ಶಾಂತಪ್ಪ ಕಲಪಟ್ಲಿ, ಉಪಾಧ್ಯಕ್ಷ ರೆಡ್ಡಿ ವೀರರಾಜು ಇತರರಿದ್ದರು.
Published on

ಗಂಗಾವತಿ: ಕೆಲಸ ಸೃಷ್ಟಿಸುವ ಉದ್ದೇಶದಿಂದ ಉದ್ಯೋಗ ಖಾತ್ರಿ ಯೋಜನೆ ಸಮರ್ಪಕ ಅನುಷ್ಠಾನಗೊಳಿಸಲಾಗುತ್ತಿದ್ದು, ಕೆಲಸ ಬಯಸುವ ಕುಟುಂಬಗಳಿಗೆ 100 ದಿನ ಕೆಲಸ ನೀಡಲಾಗುವುದು ಎಂದು ಗ್ರಾಪಂ ಪಿಡಿಒ ನಾಗೇಶ ಕುರ್ಡಿ ಹೇಳಿದರು.

ತಾಲೂಕಿನ ಶ್ರೀರಾಮನಗರ ಗ್ರಾಪಂ ಕಚೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಗ್ರಾಮಸಭೆಯಲ್ಲಿ ಮಾತನಾಡಿದರು. ನರೇಗಾ ಯೋಜನೆಯಡಿ ವಿವಿಧ ಅಭಿವೃದ್ಧಿ ಕಾಮಗಾರಿ ನಿರ್ವಹಿಸಲು ಅವಕಾಶವಿದ್ದು, ಆಸ್ತಿಗಳನ್ನು ಸೃಜಿಸಲಾಗುವುದು. ವೈಯಕ್ತಿಕ ಕಾಮಗಾರಿ ಕೈಗೆತ್ತಿಕೊಳ್ಳಬಹುದಾಗಿದ್ದು, ಯೋಜನೆಯಡಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸಬೇಕು. ವಾರ್ಡ್‌ಗಳ ಸಮಸ್ಯೆಗಳಿಗೆ ಸ್ಪಂದಿಸಲಾಗುತ್ತಿದ್ದು, ಆದ್ಯತೆ ಮೇರೆಗೆ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದರು.

ಸಭೆಯಲ್ಲಿ ಚರಂಡಿ ಸ್ವಚ್ಛತೆ, ಸಿಸಿ ರಸ್ತೆ ನಿರ್ಮಾಣ, ಗುಂತಕಲ್ ಕ್ಯಾಂಪ್ ನಿವಾಸಿಗಳಿಗೆ ಬಾಕಿಯಿರುವ ಹಕ್ಕುಪತ್ರ ವಿತರಣೆ, ಘನತ್ಯಾಜ್ಯ ವಿಲೇವಾರಿ, ಅಂಗನವಾಡಿ ಕೇಂದ್ರಗಳಿಗೆ ಮೂಲ ಸೌಕರ್ಯ ಒದಗಿಸುವುದು, ಕುಡಿವ ನೀರಿನ ಸಮಸ್ಯೆ ಪರಿಹರಿಸುವಂತೆ ಗ್ರಾಮಸ್ಥರು ಮನವಿ ಮಾಡಿದರು.

ಗ್ರಾಪಂ ಅಧ್ಯಕ್ಷ ಶಾಂತಪ್ಪ ಕಲಪಟ್ಲಿ, ಉಪಾಧ್ಯಕ್ಷ ರೆಡ್ಡಿ ವೀರರಾಜು, ಸದಸ್ಯರಾದ ಮುಳ್ಳುಪುಡಿ ಶ್ರೀನಿವಾಸ, ಮಹೆಬೂಬ್, ಪಿಲ್ಲಿ ಕೃಷ್ಣ, ಕೆ.ಲಕ್ಷ್ಮೀ, ಶ್ವೇತಾ, ಕಾರ್ಯದರ್ಶಿ ಉಷಾರಾಣಿ, ನರೇಗಾ ತಾಂತ್ರಿಕ ಸಹಾಯಕ ಮಹೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net