ವಿದ್ಯಾರ್ಥಿಗಳಿಗೆ ಕಲಿಕಾ ಆಸಕ್ತಿ ಹೆಚ್ಚಿಸಿ

Untitled design(9)
Published on

ಗಂಗಾವತಿ: ಶಿಕ್ಷಣ ಯೋಜನೆಗಳ ಸದ್ಬಳಕೆ ಮೂಲಕ ಗುಣಮಟ್ಟದ ಶಿಕ್ಷಣ ಪಡೆಯಬೇಕಿದೆ. ಜತೆಗೆ ಕಲಿಕಾಸಕ್ತಿಗೆ ಹೆಚ್ಚಿನ ಆದ್ಯತೆ ನೀಡಿ ಎಂದು ಪಿಡಿಒ ಸುರೇಶ ಚಲುವಾದಿ ಹೇಳಿದರು.

ತಾಲೂಕಿನ ವಡ್ಡರಹಟ್ಟಿ ಸ.ಹಿ.ಪ್ರಾ.ಶಾಲೆಯಲ್ಲಿ ಗ್ರಾಪಂಯಿಂದ ಬುಧವಾರ ಹಮ್ಮಿಕೊಂಡಿದ್ದ ಮಕ್ಕಳ ಹಕ್ಕುಗಳ ವಿಶೇಷ ಮತ್ತು ಅಂಗವಿಕಲರ ಸಮನ್ವಯ ಗ್ರಾಮಸಭೆ ಉದ್ಘಾಟಿಸಿ ಮಾತನಾಡಿದರು.

ಉತ್ತಮ ಮಾರ್ಗಗಳ ಮೂಲಕ ಶಿಕ್ಷಣ ನೀಡಬೇಕಿದ್ದು, ಮಕ್ಕಳ ಜೀವನವನ್ನು ಅಜ್ಞಾನದಿಂದ ಸುಜ್ಞಾನದ ಕಡೆ ಬೆಳೆಸುವುದು ಪ್ರತಿಯೊಬ್ಬರ ಜವಾಬ್ದಾರಿ. ಗ್ರಾಪಂ ಗ್ರಂಥಾಲಯದ ಸೌಲಭ್ಯ ಪಡೆದುಕೊಳ್ಳಬೇಕು. ಗ್ರಂಥಾಲಯದಲ್ಲಿ ದಿನ ಪತ್ರಿಕೆ, ಸಣ್ಣ ಕಥೆಗಳನ್ನು ಓದುವುದನ್ನು ರೂಢಿಸಿಕೊಳ್ಳಬೇಕು. ಕಂಪ್ಯೂಟರ್ ಕಲಿಕಾಸಕ್ತಿ ಬೆಳೆಸಿಕೊಳ್ಳಬೇಕು. ಸಭೆಯ ಮೂಲಕ ಅಂಗವಿಕಲರ ಸಮಸ್ಯೆಗಳನ್ನು ಆಲಿಸಲು ಸಹಕಾರಿಯಾಗಲಿದ್ದು, ಪರಿಹಾರದ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು. ನರೇಗಾ ಯೋಜನೆಯಡಿ ಅರ್ಜಿ ಸಲ್ಲಿಸುವ ಮೂಲಕ ಉದ್ಯೋಗ ಪಡೆಯುವಂತೆ ಸಲಹೆ ನೀಡಿದರು.

ಮನವಿ: ಪರಿಸರ ನೈರ್ಮಲ್ಯ ಹಾಗೂ ಸ್ವಚ್ಚತೆ, ವಿದ್ಯುತ್ ದೀಪ, ಶಾಲೆ ಗೇಟ್ ಹತ್ತಿರ ರಸ್ತೆಗೆ ಹಂಪ್ಸ್ ಅಳವಡಿಸುವಂತೆ ಮಕ್ಕಳು ಮನವಿ ಮಾಡಿದರು. ಬಾಲ್ಯ ವಿವಾಹ ಮತ್ತು ಬಾಲ ಕಾರ್ಮಿಕ ಪದ್ಧತಿ ಕುರಿತು ಪ್ರಬಂಧ ರಚಿಸಿದರು. ನಂತರ ಕಿರು ನಾಟಕ ಪ್ರದರ್ಶಿಸಿ ಅರಿವು ಮೂಡಿಸಿದರು.

ಗ್ರಾಪಂ ಸದಸ್ಯರಾದ ಬಳ್ಳಾರಿ ರಾಮಣ್ಣ ನಾಯಕ, ಶಾಂತಮ್ಮ, ಫೀರ್ ಮಹ್ಮದ್, ಕಾರ್ಯದರ್ಶಿ ಈಶಪ್ಪ, ಗ್ರಾಪಂ ವ್ಯಾಪ್ತಿಯ ಶಾಲೆಗಳ ಮುಖ್ಯಶಿಕ್ಷಕರಾದ ವಿ. ನಾಗರತ್ನಾ, ಸದಾನಂದ, ಶರಣಪ್ಪ, ಶರಣಬಸಪ್ಪ, ವಿಆರ್ ಡಬ್ಲ್ಯುಗಳಾದ ಶೈಲಜಾ, ಸೋಮಶೇಖರಗೌಡ, ಮುಖಂಡರಾದ ಡಾ.ಅಶೋಕ ಡಂಬರ್, ಆಂಜನೇಯ, ರುದ್ರಸ್ವಾಮಿ, ಮಹ್ಮದ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net