

ಗಂಗಾವತಿ: ಗ್ರಾಮಾಡಳಿತಾಧಿಕಾರಿಗಳ ನೇರನೇಮಕಕ್ಕಾಗಿ ಪರೀಕ್ಷಾ ಪ್ರಾಧಿಕಾರದಿಂದ ನಗರ ಮತ್ತು ತಾಲೂಕಿನ 15 ಕಾಲೇಜುಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಭಾನುವಾರ ಸುಗಮವಾಗಿ ನಡೆಯಿತು.
7404 ಪುರುಷ, 5603 ಮಹಿಳೆಯರು ಸೇರಿ ಜಿಲ್ಲೆಯಲ್ಲಿ 13,007 ಅಕಾಂಕ್ಷಿಗಳು ಪರೀಕ್ಷೆ ಬರೆಯಲು ಅರ್ಹರಾಗಿದ್ದರು. ಕೇಂದ್ರಗಳಿಗೆ ತಾಲೂಕು ಮಟ್ಟದ ಅಧಿಕಾರಿಗಳನ್ನು ನಿಯೋಜಿಸಲಾಗಿತ್ತು. ಸಿಸಿ ಕ್ಯಾಮರಾ ಕಣ್ಗಾವಲಿನಲ್ಲಿ ಪರೀಕ್ಷೆ ನಡೆದಿದ್ದು, ಪರೀಕ್ಷಾ ಕೊಠಡಿ ಪ್ರವೇಶಿಸುವ ಮುನ್ನ ಎಲ್ಲ ಅಭ್ಯರ್ಥಿಗಳನ್ನು ತಪಾಸಿಸಲಾಯಿತು. ಕೇಂದ್ರದ 200 ಮೀ. ವ್ಯಾಪ್ತಿಯಲ್ಲಿ ನಿಷೇದಾಜ್ಞೆಯಿದ್ದು, ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಬೆಳಗ್ಗೆ ಮತ್ತು ಮಧ್ಯಾಹ್ನ ಎರಡು ಪತ್ರಿಕೆಗಳಿದ್ದವು. ಪರೀಕ್ಷಾ ಕೇಂದ್ರ ಹುಡುಕಲು ಅಭ್ಯರ್ಥಿಗಳು ಪರದಾಡಿದರು. ದೂರದ ಪರೀಕ್ಷಾ ಕೇಂದ್ರಗಳಿಗೆ ಗ್ರಾಮೀಣ ಅಭ್ಯರ್ಥಿಗಳು ಓಡುತ್ತಲೇ ತಲುಪುವಂತ ಸ್ಥಿತಿ ಬಂದಿತ್ತು. ಮಾಹಿತಿ ಕೇಂದ್ರ ತೆರೆಯದಿದ್ದರಿಂದ ಮಹಿಳಾ ಅಭ್ಯರ್ಥಿಗಳಿಗೆ ತೊಂದರೆಯಾಗಿದ್ದು, ದಾರಿಹೋಕರ ನೆರವು ಪಡೆದರು. ಹೊರ ಜಿಲ್ಲೆಗಳಿಂದ ಅಭ್ಯರ್ಥಿಗಳು ಬಂದಿದ್ದರಿಂದ ಎಲ್ಲ ಹೋಟೆಲ್, ುಟ್‌ಪಾತ್ ಟಿಫಿನ್ ಸೆಂಟರ್‌ಗಳು ುಲ್ ಆಗಿದ್ದವು.