ಶ್ರೀ ನೀಲಕಂಠೇಶ್ವರಗೆ ಜಲಾಭಿಷೇಕ

MERAVANEGE
ಗಂಗಾವತಿ ಶ್ರೀ ನೀಲಕಂಠೇಶ್ವರ ದೇವಾಲಯದಲ್ಲಿ ಶ್ರಾವಣ ಸೋಮವಾರ ನಿಮಿತ್ತ ಕುಂಭೋತ್ಸವ ಅದ್ದೂರಿ ಜರುಗಿತು. ದೇವಾಲಯ ಸಮಿತಿ ಸದಸ್ಯ ಶಾವಿ ತಿಪ್ಪಣ್ಣ, ಸಮಾಜದ ಮುಖಂಡರಾದ ಕುರಗೋಡು ಬಸವರಾಜಪ್ಪ, ಎಂ.ರವೀಂದ್ರ, ಎಂ.ಸರ್ವೇಶ, ಎಂ.ಸಾತ್ವಿಕ್, ಎಚ್. ನಾಗರಾಜ್ ಇತರರಿದ್ದರು.
Published on

ಗಂಗಾವತಿ: ನಗರದ ಶ್ರೀ ನೀಲಕಂಠೇಶ್ವರ ದೇವಾಲಯದಲ್ಲಿ ಕಡೇ ಶ್ರಾವಣ ಸೋಮವಾರ ನಿಮಿತ್ತ ಜಲಾಭಿಷೇಕ ಮತ್ತು ಕುಂಭೋತ್ಸವ ಅದ್ದೂರಿಯಾಗಿ ನೆರವೇರಿತು.

ಕುರಹಿನ ಶೆಟ್ಟಿ ಸಮಾಜದಿಂದ ಶ್ರಾವಣ ಮಾಸದ ನಿಮಿತ್ತ ತಿಂಗಳ ಪರ್ಯಂತ ಹುಬ್ಬಳ್ಳಿಯ ಶಂಕ್ರಯ್ಯಸ್ವಾಮಿ ಆರ್. ಗುರುಮಠ ಕಲ್ಲೂರ್ ನೇತೃತ್ವದಲ್ಲಿ ನಿತ್ಯ ಸಂಜೆ ಚಿತ್ತರಗಿಯ ಶ್ರೀ ವಿಜಯಮಹಾಂತೇಶ್ವರ ಶಿವಯೋಗಿಗಳವರ ಪುರಾಣ ಹಮ್ಮಿಕೊಳ್ಳಲಾಗಿದೆ. ಕುಂಭೋತ್ಸವ ಹಿನ್ನೆಲೆಯಲ್ಲಿ ನಗರದ ಶ್ರೀ ಮಲ್ಲಿಕಾರ್ಜುನ ದೇವಾಲಯದಿಂದ ಶ್ರೀನೀಲಕಂಠೇಶ್ವರ ದೇವಾಲಯದವರೆಗೆ 108 ಕುಂಭ, ಕಳಶ ಮೆರವಣಿಗೆ ಜರುಗಿದ್ದು, ಭಜನಾ ತಂಡ ಮತ್ತು ವಾದ್ಯಮೇಳಗಳು ಸಾಥ್ ನೀಡಿದವು.

ನಂತರ ಶ್ರೀನೀಲಕಂಠೇಶ್ವರ ಮೂರ್ತಿಗೆ ಹೆಬ್ಬಾಳ ಬೃಹನ್ಮಠದ ನಾಗಭೂಷಣ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ಜಲಾಭಿಷೇಕ ನೆರವೇರಿಸಲಾಯಿತು. ಭಜನಾ ತಂಡದಿಂದ ನಿರಂತರ ಭಜನೆ, ಪ್ರಸಾದ ವಿತರಣೆ ಜರುಗಿತು. ಸೆ.4ರಂದು ಪುರಾಣ ಪ್ರವಚನ ಮಂಗಲೋತ್ಸವ ಮತ್ತು ಶ್ರೀ ವಿಜಯಮಹಾಂತೇಶ್ವರ ಶಿವಯೋಗಿಗಳ ಭಾವಚಿತ್ರ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ದೇವಾಲಯ ಸಮಿತಿ ಸದಸ್ಯ ಶಾವಿ ತಿಪ್ಪಣ್ಣ ತಿಳಿಸಿದರು.

ಸಮಾಜದ ಮುಖಂಡರಾದ ಕುರಗೋಡು ಬಸವರಾಜಪ್ಪ, ಎಂ.ರವೀಂದ್ರ, ಎಂ.ಸರ್ವೇಶ, ಎಂ.ಸಾತ್ವಿಕ್, ಎಚ್. ನಾಗರಾಜ್, ಐಲಿ ಮಾರುತಿ, ನೇತ್ರಾ ರಮೆಶ, ಬಸವರಾಜ ಐಲಿ, ತಟ್ಟಿ ಶ್ರಿನಿವಾಸ, ರಾಘವೇಂದ್ರ ನವಣಕ್ಕಿ, ಪೋಲಕಲ್ ಮಲ್ಲಿಕಾರ್ಜುನ, ಕುರಗೋಡು ಚನ್ನಪ್ಪ, ನಗರಸಭೆ ಸದಸ್ಯ ಸುನೀತಾ ತಿಪ್ಪಣ್ಣ, ಮಾಜಿ ಸದಸ್ಯ ಚಂದ್ರಪ್ಪ ಐಲಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net