ಬಸ್‌ಗೆ ಜೀಪ್ ಡಿಕ್ಕಿಯಾಗಿ ಚಾಲಕಗೆ ಗಾಯ

ACCIDANTE
ಅಪಘಾತದಲ್ಲಿ ಜಖಂಗೊಂಡ ಚುನಾವಣೆ ವಿಭಾಗದ ಫ್ಲೈಯಿಂಗ್ ಸ್ಕ್ವಾಡ್ ತಂಡದ ಜೀಪ್.
Published on

ಗಂಗಾವತಿ: ಇಲ್ಲಿನ ವಿದ್ಯಾನಗರದ ಚುನಾವಣೆ ಚೆಕ್‌ಪೋಸ್ಟ್ ಬಳಿ ಕೆಕೆಆರ್‌ಟಿಸಿ ಬಸ್ ಮತ್ತು ಫ್ಲೈಯಿಂಗ್ ಸ್ಕ್ವಾಡ್ ತಂಡದ ಜೀಪ್ ನಡುವೆ ಕ್ಕಿಯಾಗಿದ್ದು, ಜೀಪ್ ಚಾಲಕ ಶಿವಾನಂದಗೆ ಸಣ್ಣಪುಟ್ಟು ಗಾಯಗಳಾಗಿವೆ.

ಕೊಪ್ಪಳ ಘಟಕದ ಕೊಪ್ಪಳ ಮತ್ತು ಹೈದರಾಬಾದ್ ಮಾರ್ಗದ ಕೆಕೆಆರ್‌ಟಿಸಿ ಬಸ್ ಹೈದರಾಬಾದ್‌ಗೆ ತೆರಳುತ್ತಿದ್ದಾಗ, ಚೆಕ್‌ಪೋಸ್ಟ್ ಬಳಿ ಹಾಕಿರುವ ಬ್ಯಾರಿಕೇಡ್ ಬಳಿ ಜೀಪ್ ಡಿಕ್ಕಿ ಹೊಡೆದಿದೆ. ಮೀನುಗಾರಿಕೆ ಇಲಾಖೆಗೆ ಸೇರಿದ ಜೀಪ್ ಮತ್ತು ಬಸ್ ಮುಂಭಾಗ ಜಖಂಗೊಂಡಿದ್ದು, ಗಾಯಗೊಂಡ ಚಾಲಕನಿಗೆ ಚಿಕಿತ್ಸೆ ನೀಡಲಾಗಿದೆ. ಚೆಕ್‌ಪೋಸ್ಟ್ ಬಳಿಯ ಪೇದೆ ಮಾಹಿತಿಯಂತೆ ಜೀಪ್ ಚಾಲಕನ ವಿರುದ್ಧ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಕೆಕೆಆರ್‌ಟಿಸಿ ನಿಯಂತ್ರಕ ಶಿವನಗೌಡ ತಿಳಿಸಿದ್ದಾರೆ.

ರಾಜ್ಯ ಹೆದ್ದಾರಿಯಲ್ಲಿರುವ ಚೆಕ್‌ಪೋಸ್ಟ್ ಅವೈಜ್ಞಾನಿಕವಾಗಿದ್ದು, ಬ್ಯಾರಿಕೇಡ್‌ಗಳನ್ನು ಸಮರ್ಪಕವಾಗಿ ಬಳಸಿಕೊಂಡಿಲ್ಲ. ವೇಗವಾಗಿ ಬರುವ ವಾಹನಗಳು ಬ್ಯಾರಿಕೇಡ್‌ಗಳನ್ನು ಲೆಕ್ಕಿಸದೇ ಚಲಿಸುತ್ತಿರುವುದರಿಂದ ಅಪಘಾತಕ್ಕೆ ಕಾರಣವಾಗುತ್ತಿದೆ. ರಸ್ತೆ ಅಡೆತಡೆಗಳಿರುವ (ಹಂಪ್ಸ್) ವ್ಯಾಪ್ತಿಯಲ್ಲಿ ಚೆಕ್‌ಪೋಸ್ಟ್ ಹಾಕುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net