19ರಿಂದ ಅಕ್ಷರಾಭ್ಯಾಸ ಅಭಿಯಾನ, ಆರ್ಯವೈಶ್ಯ ಸಂಘದ ಅಧ್ಯಕ್ಷ ಎನ್.ನಾಗಮೋಹನ್ ಮಾಹಿತಿ

Jayanti celebrations
ಗಂಗಾವತಿಯ ಹಿರೇಜಂತಕಲ್‌ನಲ್ಲಿ ಶ್ರೀ ವಾಸವಿ ಜಯಂತಿ ನಿಮಿತ್ತ ಭಾವಚಿತ್ರದ ಮೆರವಣಿಗೆ ಬುಧವಾರ ಜರುಗಿತು. ವಾಸವಿ ಮಹಿಳಾ ಮಂಡಳಿ ಪದಾಧಿಕಾರಿಗಳು ಮತ್ತು ಸದಸ್ಯರಿದ್ದರು.
Published on

ಗಂಗಾವತಿ: ತಾಲೂಕಿನ ಶ್ರೀರಾಮನಗರದ ಶ್ರೀ ವಾಸವಿ ದೇವಾಲಯದಲ್ಲಿ ವಾಸವಿ ಜಯಂತ್ಯುತ್ಸವ ಬುಧವಾರ ಹಮ್ಮಿಕೊಳ್ಳಲಾಗಿತ್ತು.

ಆರ್ಯವೈಶ್ಯ ಸಂಘ, ವಾಸವತಿ ಯುವಜನ ಸಂಘ ಮತ್ತು ವಾಸವಿ ಮಹಿಳಾ ಮಂಡಳಿಯಿಂದ ಹಮ್ಮಿಕೊಂಡಿದ್ದು, ಶ್ರೀ ವಾಸವಿ ಭಾವಚಿತ್ರವನ್ನು ಪಟ್ಟಣದ ಶ್ರೀ ಸುಬ್ರಮಣ್ಯಸ್ವಾಮಿ ದೇವಾಲಯದಿಂದ ವಾಸವಿ ದೇವಾಲಯದವರೆಗೆ ಪೂರ್ಣಕುಂಭ ಮತ್ತು ಕಲಾಮೇಳದೊಂದಿಗೆ ಅದ್ದೂರಿ ಮೆರವಣಿಗೆ ನೆರವೇರಿಸಲಾಯಿತು.

ದೇವಾಲಯದಲ್ಲಿನ ಮೂರ್ತಿಗೆ ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ, ಪಾರಾಯಣ, ಭಜನೆ, ಮಹಿಳಾ ಮಂಡಳಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಸಾಮೂಹಿಕ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು. ದೇವಾಲಯದಲ್ಲಿನ ಧಾರ್ಮಿಕ ಕಾರ್ಯಕ್ರಮಗಳ ಕುರಿತು ಆರ್ಯವೈಶ್ಯ ಸಂಘದ ಸ್ಥಳೀಯ ಘಟಕದ ಅಧ್ಯಕ್ಷ ಎನ್.ನಾಗಮೋಹನ್ ಮಾತನಾಡಿದರು.

ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ದೇವಾಲಯದಲ್ಲಿ ಮೇ 19, 23 ಮತ್ತು 25ರಂದು ಅಕ್ಷರಾಭ್ಯಾಸ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟಕರು ತಿಳಿಸಿದರು.

ಪದಾಧಿಕಾರಿಗಳಾದ ಕೆ.ಪದ್ಮನಾಭ, ರಾಮರಾವ್ ಬಾಲಾಜಿ, ಶರಣಪ್ಪ ಶ್ರೇಷ್ಟಿ, ಪ್ರಹ್ಲಾದ್, ಕೆ.ಸುಭಾಷ್ ಶ್ರೇಷ್ಟಿ, ಎಂ ಸುರೇಶ್, ಎಂ.ನಿವಾಸರಾವ್, ಕೆ.ನಾಗೇಶರಾವ್, ಎಸ್. ವೆಂಕಟರತ್ನಂ ಸೇರಿ ವಿವಿಧ ಗ್ರಾಮಗಳ ಮುಖಂಡರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net