

ಗಂಗಾವತಿ: ತಾಲೂಕಿನ ಚಿಕ್ಕಬೆಣಕಲ್‌ನಲ್ಲಿರುವ ವಾಲ್ಮೀಕಿ ಆಶ್ರಮ ವಸತಿ ನಿಲಯಕ್ಕೆ ತಾಪಂ ಇಒ ರಾಮರೆಡ್ಡಿ ಪಾಟೀಲ್ ಬುಧವಾರ ಭೇಟಿ ನೀಡಿ ಮಕ್ಕಳ ಕಲಿಕಾ ಗುಣಮಟ್ಟ ಮತ್ತು ವ್ಯವಸ್ಥೆ ಮಾಹಿತಿ ಪಡೆದುಕೊಂಡರು.
ಪರಿಶಿಷ್ಟ ವರ್ಗಗಳ ಇಲಾಖೆ ನಿರ್ವಹಣೆಯಲ್ಲಿ ವಸತಿ ಶಾಲೆಯಿದ್ದು, ತಾಲೂಕಿನ ವಿವಿಧ ಭಾಗದ ವಿದ್ಯಾರ್ಥಿಗಳು ವಸತಿ ಸಹಿತ ಶಿಕ್ಷಣ ಪಡೆಯುತ್ತಿದ್ದಾರೆ. ಶಾಲೆಯಲ್ಲಿ ಅಡುಗೆ ಕೋಣೆ, ಶೌಚಗೃಹ, ಸ್ನಾನಗೃಹ ಮತ್ತು ತರಗತಿ ಕೊಠಡಿಗಳನ್ನು ವೀಕ್ಷಿಸಿದರಲ್ಲದೇ, ಕೊರತೆಯಿರುವ ಮೂಲ ಸೌಲಭ್ಯಗಳ ಮಾಹಿತಿ ಪಡೆದುಕೊಂಡರು. ಮಕ್ಕಳ ಸ್ನಾನಕ್ಕಾಗಿ ಸೋಲಾರ್ ಬಿಸಿ ನೀರಿನ ವ್ಯವಸ್ಥೆ ಮಾಡುವಂತೆ ಶಿಕ್ಷಕರು ಮನವಿ ಮಾಡಿದರು.
ಇಒ ರಾಮರೆಡ್ಡಿ ಪಾಟೀಲ್ ಮಾತನಾಡಿ, ಉತ್ತಮ ಪರಿಸರದಲ್ಲಿ ವಸತಿ ಶಾಲೆಯಿದ್ದು, ಕಲಿಕೆಯಲ್ಲಿ ಹಿಂದುಳಿದಿರುವ ಮಕ್ಕಳ ಬಗ್ಗೆ ನಿಗಾವಹಿಸಬೇಕು. ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ತಿಳಿಸಿದರು.
ಇಲಾಖೆ ತಾಲೂಕು ಅಧಿಕಾರಿ ಗ್ಯಾನನಗೌಡ, ವಾರ್ಡನ್ ಬಸನಗೌಡ, ಶಿಕ್ಷಕ ಮತ್ತು ಶಿಕ್ಷಕರೇತ ಸಿಬ್ಬಂದಿ ಇದ್ದರು.