ವಡ್ಡರಹಟ್ಟಿಗೆ ಎರಡು ಹೆಚ್ಚುವರಿ ಬಸ್, ಗ್ರಾಮಸ್ಥರು, ವಿದ್ಯಾರ್ಥಿಗಳಿಂದ ವಿಜಯೋತ್ಸವ ಆಚರಣೆ

VIJAYOTHAVA
ಗಂಗಾವತಿ ತಾಲೂಕಿನ ವಡ್ಡರಹಟ್ಟಿಗೆ ಹೆಚ್ಚುವರಿ ಎರಡು ಬಸ್‌ಗಳ ಸಂಚಾರಕ್ಕೆ ಅವಕಾಶ ಸಿಕ್ಕಿದ್ದರಿಂದ ಗ್ರಾಮಸ್ಥರು ಸಿಹಿ ಹಂಚಿ ಶನಿವಾರ ವಿಜಯೋತ್ಸವ ಆಚರಿಸಿದರು. ನಾಗರಿಕ ಸಮಿತಿ ಸದಸ್ಯರಾದ ಯರ‌್ರಿಸ್ವಾಮಿಗೌಡ, ಹರನಾಯಕ, ಶಿವರಾಜ್ ಡಂಬರ್ ಸೇರಿ ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳಿದ್ದರು.
Published on

ಗಂಗಾವತಿ: ತಾಲೂಕಿನ ವಡ್ಡರಹಟ್ಟಿಗೆ ಹೆಚ್ಚುವರಿ ಎರಡು ಬಸ್‌ಗಳ ಸಂಚಾರಕ್ಕೆ ಅವಕಾಶ ಸಿಕ್ಕಿದ್ದರಿಂದ ಗ್ರಾಮಸ್ಥರು ಶನಿವಾರ ವಿಜಯೋತ್ಸವ ಆಚರಿಸಿದರು.

ವಡ್ಡರಹಟ್ಟಿ ಅತಿ ಹೆಚ್ಚು ಜನಸಂಖ್ಯೆ ಹೊಂದಿದ್ದರೂ, ನಗರಕ್ಕೆ ಹೊಂದಿಕೊಂಡಿರುವ ಕಾರಣ ಕೆಕೆಆರ್‌ಟಿಸಿ ಬಸ್‌ಗಳ ನಿಲುಗಡೆಗೆ ಅವಕಾಶವಿರಲಿಲ್ಲ. ಗ್ರಾಮೀಣ ಸಾರಿಗೆ ಬಸ್‌ಗಳು ುಲ್ ಆಗಿ ಬರುತ್ತಿರುವುದರಿಂದ ನಿಲ್ಲಿಸುತ್ತಿರಲಿಲ್ಲ. ಈ ಕುರಿತು ನ.22 ರಂದು ಬಸ್ ನಿಲುಗಡೆಗೆ ಸ್ಪಂದಿಸದ ಅಧಿಕಾರಿಗಳು ಶೀರ್ಷಿಕೆಯಡಿ ವಿಜಯವಾಣಿ ಸುದ್ದಿ ಪ್ರಕಟಿಸಿ ಸಾರಿಗೆ ಅಧಿಕಾರಿಗಳ ಗಮನ ಸೆಳೆದಿತ್ತು. ಹೀಗಾಗಿ 2 ಸಿಟಿ ಬಸ್‌ಗಳ ಸಂಚಾರಕ್ಕೆ ಅವಕಾಶ ನೀಡಿದ್ದು, ಬೆಳಗ್ಗೆ 8.30 ಮತ್ತು 9.30ಕ್ಕೆ ಗ್ರಾಮಕ್ಕೆ ಬರಲಿವೆ. ಅಧಿಕಾರಿಗಳ ಕ್ರಮ ಸ್ವಾಗತಿಸಿದ ಗ್ರಾಮದ ನಾಗರಿಕ ಸಮಿತಿ ಸದಸ್ಯರು ಮತ್ತು ವಿದ್ಯಾರ್ಥಿಗಳು ಸಿಹಿ ಹಂಚಿ, ವಿಜಯೋತ್ಸವ ಆಚರಿಸಿದರು.

ನಾಗರಿಕ ಸಮಿತಿ ಸದಸ್ಯರಾದ ಯರ‌್ರಿಸ್ವಾಮಿಗೌಡ, ಹರನಾಯಕ, ಶಿವರಾಜ್ ಡಂಬರ್ ಮಾತನಾಡಿ, ಬಸ್ ಸಂಚಾರ ನಿರಂತರವಾಗಬೇಕಿದ್ದು, ಯಾವುದೇ ಕಾರಣಕ್ಕೂ ರದ್ದುಪಡಿಸಬಾರದು. ವಡ್ಡರಹಟ್ಟಿಗೆ ಪ್ರತ್ಯೇಕ ಸ್ಟೇಜ್ ೋಷಣೆಯಾಗುವರೆಗೂ ಹೋರಾಟ ಮುಂದುವರಿಯಲಿದೆ. ಅತಿ ಹೆಚ್ಚು ಜನಸಂಖ್ಯೆ, ಉದ್ಯಮ ಘಟಕಗಳಿದ್ದರೂ ಬಸ್‌ಗಳು ನಿಲುಗಡೆಯಾಗುತ್ತಿಲ್ಲ. ಇನ್ನು ಮುಂದೆ ಎಲ್ಲ ಡಿಪೋಗಳ ಬಸ್ ನಿಲುಗಡೆಯಾಗಬೇಕಿದೆ ಎಂದರು.

ಮುಖಂಡರಾದ ಷಣ್ಮುಖ ಹತ್ತಿಮರದ, ಮೇಹರಾಜ್, ಕಾಳಿಂಗ ಹತ್ತಿಮರದ, ಹನುಮೇಶ ಮೂಲಿಮನಿ, ಮುದ್ದಣ್ಣ ವದ್ದಟ್ಟಿ, ದಾವಲ್‌ಸಾಬ್ ಮುಲ್ಲಾರ್, ಟಿ.ರಮೇಶ, ವೀರೇಶ ಹುಲಸನಟ್ಟಿ, ಷಣ್ಮುಖ ಜೋಗಿನ್, ಇಬ್ರಾಹಿಂಸಾಬ್, ಹಸೇನ್ ಸಾಬ್, ಮಹೆಬೂಬ್ ಡಮ್ಮೂರು, ಮುತ್ತಣ್ಣ, ಖಾಸೀಂಸಾಬ್ ಕೃಷ್ಣಾಪುರ ಸೇರಿ ಗುಡ್ಡದಕ್ಯಾಂಪ್, ಗದ್ವಾಲ್ ಕ್ಯಾಂಪ್ ನಿವಾಸಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net