ಶ್ರೀ ಕವೀಂದ್ರ ತೀರ್ಥರ ಉತ್ತರಾರಾಧನೆ ಸಂಪನ್ನ

Uttara Adoration of Kavindra Tirtha
ಗಂಗಾವತಿ ತಾಲೂಕಿನ ಆನೆಗೊಂದಿಯ ನವವೃಂದಾವನ ಗಡ್ಡಿಯಲ್ಲಿ ಶ್ರೀ ಕವೀಂದ್ರ ತೀರ್ಥರ ಉತ್ತರಾರಾಧನೆ ನಿಮಿತ್ತ ಉತ್ತರಾಧಿ ಮಠದ ಪೀಠಾಧಿಪತಿ ಶ್ರೀ ಸತ್ಯಾತ್ಮ ತೀರ್ಥರು ಸೋಮವಾರ ವಿಶೇಷ ಪೂಜೆ ಸಲ್ಲಿಸಿದರು.
Published on

ಗಂಗಾವತಿ: ತಾಲೂಕಿನ ಐತಿಹಾಸಿಕ ಆನೆಗೊಂದಿಯ ನವವೃಂದಾವನ ಗಡ್ಡಿಯಲ್ಲಿ ಉತ್ತರಾದಿ ಮಠದಿಂದ ಶ್ರೀ ಕವೀಂದ್ರ ತೀರ್ಥರ ಉತ್ತರಾರಾಧನೆ ಸೋಮವಾರ ಹಮ್ಮಿಕೊಳ್ಳಲಾಗಿತ್ತು.

ಸುಪ್ರೀಂಕೋರ್ಟ್ ತೀರ್ಪಿನಂತೆ ಉತ್ತರಾದಿ ಮಠದಿಂದ ಉತ್ತರಾರಾಧನೆ ಮಾತ್ರ ನಿರ್ವಹಿಸಲಾಯಿತು. ಉತ್ತರಾದಿ ಮಠದ ಪೀಠಾಧಿಪತಿ ಶ್ರೀ ಸತ್ಯಾತ್ಮ ತೀರ್ಥರ ಸಾನ್ನಿಧ್ಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದವು. ದಂಡೋದಕ ಸ್ನಾನ, ಸೀತಾಸಮೇತ ಶ್ರೀ ದಿಗ್ವಿಜಯ ರಾಮದೇವರ ಸಂಸ್ಥಾನ ಪೂಜೆ, ಶ್ರೀಗಳಿಂದ ವಿದ್ಯಾರ್ಥಿಗಳಿಗೆ ಪಾಠ ಪ್ರವಚನ ಬೋಧಿಸಲಾಯಿತು.

ಶ್ರೀ ಕವೀಂದ್ರ ತೀರ್ಥರ ವೃಂದಾವನಕ್ಕೆ ಪಂಚಾಮೃತಾಭಿಷೇಕ, ಹೂವಿನ ಅಲಂಕಾರ, ಮಹಾಮಂಗಳಾರತಿ, ಎಲ್ಲ ವಂದಾವನಗಳಿಗೆ ವಿಶೇಷ ಪೂಜೆ, ಭಕ್ತರಿಗೆ ತಪ್ತ ಮುದ್ರಾಧಾರಣೆ, ಶ್ರೀಗಳಿಂದ ಆಶೀರ್ವಚನ ಜರುಗಿತು. ಶ್ರೀಕವೀಂದ್ರ ತೀರ್ಥರ ಮಹಿಮೆ ಕುರಿತು ಪಂ. ವಿದ್ಯಾದೀಶಾಚಾರ್ಯ ಗುತ್ತಲ್ ಉಪನ್ಯಾಸ ನೀಡಿದರು. ನಂತರ ತೀರ್ಥ ಪ್ರಸಾದ ಮತ್ತು ಲ ಮಂತ್ರಾಕ್ಷತೆ ವಿತರಿಸಲಾಯಿತು.

ಮುಖಂಡರಾದ ಆನಂದಾಚಾರ್ ಮಹಿಶಿ, ಆನಂದಾಚಾರ್ ಜೋಶಿ, ರಾಮಾಚಾರ್ ಉಮರ್ಜಿ, ಹುಲಿಗಿ ನಾರಾಯಣಾಚಾರ್, ನರಸಿಂಹಾಚಾರ್ ಕಟ್ಟಿ, ಪ್ರಸನ್ನಾಚಾರ್ಯ ಕಟ್ಟಿ, ಬೇವಿನಾಳ ಪ್ರಹ್ಲಾದಾಚಾರ್, ವಿಚಾರಣಕರ್ತ ಅಡವಿರಾವ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net