

ಗಂಗಾವತಿ: ಕಲಿಕಾಮಟ್ಟ ಹೆಚ್ಚಳಕ್ಕೆ ನಲಿಕಲಿ ತರಬೇತಿ ಕಾರ್ಯಾಗಾರ ಪೂರಕವಾಗಿದ್ದು, ಗುಣಮಟ್ಟದ ಬೋಧನೆಗೆ ಸಹಕಾರಿಯಾಗಲಿದೆ ಎಂದು ರಾಜ್ಯ ಸಂಪನ್ಮೂಲ ವ್ಯಕ್ತಿ ಛತ್ರಪ್ಪ ತಂಬೂರಿ ಹೇಳಿದರು.
ನಗರದ ಶ್ರೀ ಕೊಟ್ಟೂರುಸ್ವಾಮಿ ವಿವಿಧೋದ್ದೇಶ ಟ್ರಸ್ಟ್‌ನ ಕಲ್ಮಠ ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ ಪ್ರಶಿಕ್ಷಣಾರ್ಥಿಗಳಿಗೆ ಬುಧವಾರ ಹಮ್ಮಿಕೊಂಡಿದ್ದ ನಲಿಕಲಿ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಆಟದಿಂದ ಪಾಠದತ್ತ ಪರಿಕಲ್ಪನೆಯಡಿ ತರಬೇತಿ ನೀಡಲಾಗುತ್ತಿದ್ದು, ಆಟಿಕೆ, ಚಿತ್ರಪಟಗಳ ಮೂಲಕ ಬೋಧನೆ ಕೈಗೊಂಡರೆ ಮಕ್ಕಳ ಕಲಿಕೆಗೆ ಸುಲಭವಾಗಲಿದೆ. ಮಕ್ಕಳ ಆಸಕ್ತಿ ಅನುಗುಣ ಬೋಧನೆ ಪ್ರಕ್ರಿಯೆಗೆ ಶಿಕ್ಷಕರು ಅದ್ಯತೆ ನೀಡಬೇಕಿದೆ ಎಂದರು.
ಕಲಿಕಾ ಪದ್ಧತಿ, ಬೋಧನಾ ಗುಣಮಟ್ಟ, ಕಲಿಕಾಸಕ್ತಿ ಗುರುತಿಸುವಿಕೆ ಸೇರಿ ವಿವಿಧ ಬೋಧನಾ ಕ್ರಮಗಳ ಬಗ್ಗೆ ಸಂಪನ್ಮೂಲ ವ್ಯಕ್ತಿ ಜಯಮ್ಮ ಮಾಹಿತಿ ನೀಡಿದರು. ಕಾಲೇಜಿನ ಆಡಳಿತಾಧಿಕಾರಿ ಬಸಮ್ಮ, ಐಟಿಐ ಕಾಲೇಜಿನ ಪ್ರಾಚಾರ್ಯ ಅಣ್ಣಪ್ಪ, ಉಪನ್ಯಾಸಕರಾದ ಮಂಜುನಾಥ್ ಎಂ, ಮಾಣಿಕ್ಯ ವೆರ್ಣಿಕರ್, ಯು.ಎಂ.ಬಸವರಾಜ್, ದಾನನಗೌಡ, ಗಣೇಶ ನಾಯಕ, ಪದ್ಮಾ ಇತರರಿದ್ದರು.