ಪರ್ಯಾಯದಲ್ಲಿ ಧರ್ಮ ರಕ್ಷಣೆಗೆ ಒತ್ತು

Gangavathi Sirur sri visit
ಗಂಗಾವತಿ ಸತ್ಯಾಂಜನೇಯ ದೇವಾಲಯದಲ್ಲಿ ಉಡುಪಿ ಶ್ರೀಕೃಷ್ಣಮಠದ ಪರ್ಯಾಯಕ್ಕಾಗಿ ಪೂರ್ವಭಾವಿ ಸಂಚಾರ ಕೈಗೊಂಡ ಶ್ರೀ ವಾಮನ ತೀರ್ಥ ಪರಂಪರೆಯ ಉಡುಪಿ ಶ್ರೀ ಶೀರೂರು ಮಠದ ಪೀಠಾಧಿಪತಿ ಶ್ರೀ ವೇದವರ್ಧನ ತೀರ್ಥರು ಸೋಮವಾರ ಮಾತನಾಡಿದರು.ಶ್ರೀಮಠದ ದಿವಾನ್ ಶ್ರೀಶ್ ಆಚಾರ್, ವಿಜಯಧ್ವಜ ವಿದ್ಯಾಪೀಠದ ವ್ಯವಸ್ಥಾಪಕ ವಾದಿರಾಜಾಚಾರ್ ಕಲ್ಮಂಗಿ, ಸತ್ಯಾಂಜನೇಯ ದೇವಾಲಯ ಸಮಿತಿಯ ಅಡವಿರಾವ್ ಕಲಾಲ್ ಬಂಡಿ ಇತರರಿದ್ದರು.
Published on

ಗಂಗಾವತಿ : ಉಡುಪಿ ಶ್ರೀ ಮಠದಲ್ಲಿ ‘ಪರ್ಯಾಯ ಮಹೋತ್ಸವ’ದ ಭಾಗವಾಗಿ ರಾಜ್ಯಾದ್ಯಂತ ಪೂರ್ವಭಾವಿ ಸಂಚಾರ ಆಯೋಜಿಸಲಾಗಿದ್ದು, ಧರ್ಮ ರಕ್ಷಣೆಗೆ ಒತ್ತು ನೀಡಲಾಗುವುದು ಎಂದು ಶ್ರೀ ವಾಮನ ತೀರ್ಥ ಪರಂಪರೆಯ ಉಡುಪಿ ಶ್ರೀ ಶೀರೂರು ಮಠದ ಪೀಠಾಧಿಪತಿ ಶ್ರೀ ವೇದವರ್ಧನ ತೀರ್ಥರು ಹೇಳಿದರು.

ನಗರದ ಸತ್ಯಾಂಜನೇಯ ದೇವಾಲಯದಲ್ಲಿ ಸೋಮವಾರ ಪರ್ಯಾಯ ಮಹೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದರು. ಶೀರೂರು ಮಠದ ಪರ್ಯಾಯ ಮಹೋತ್ಸವ 2026 ರಿಂದ 2028ರವರೆಗೆ ನಡೆಯಲಿದೆ. 2026 ಜ.28 ರಂದು ಸರ್ವಜ್ಞ ಪೀಠಾರೋಹಣ ಮೂಲಕ ಪರ್ಯಾಯ ನಡೆಸುವ ಸಂಕಲ್ಪ ಕೈಗೊಳ್ಳಲಾಗುವುದು. ಎರಡು ವರ್ಷದ ಅವಧಿಯಲ್ಲಿ ವೇದ ರಕ್ಷಣೆಯೊಂದಿಗೆ ಅನೇಕ ಸತ್ಕಾರ್ಯಗಳನ್ನು ಕೈಗೊಳ್ಳಲು ಭಗವತ್ಪ್ರೇರಣೆ ಯಂತೆ ಸಂಕಲ್ಪಿಸಲಾಗಿದೆ ಎಂದರು.

ಇದಕ್ಕೂ ಮುನ್ನ ಶ್ರೀಗಳನ್ನು ಪೂರ್ಣಕುಂಭ ದೊಂದಿಗೆ ಸ್ವಾಗತಿಸಿದ್ದು, ದೇವಾಲಯದಲ್ಲಿ ಸತ್ಯಾಂಜನೇಯ ಮೂರ್ತಿಗೆ ಮಹಾಮಂಗಳಾರತಿ ನೆರವೇರಿಸಿದರು. ನಂತರ ಶ್ರೀ ಕೃಷ್ಣ ತೊಟ್ಟಿಲುಸೇವೆ ಯೊಂದಿಗೆ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದವು. ಮಂಗಳವಾರದಂದು ಬೆಳಗ್ಗೆ ಭಕ್ತರ ಮನೆಯಲ್ಲಿ ಪಾದಪೂಜೆ ಮತ್ತು ದೇವಾಲಯದಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿದೆ.

ಶ್ರೀಮಠದ ದಿವಾನ್ ಶ್ರೀಶ್ ಆಚಾರ್, ವಿಜಯಧ್ವಜ ವಿದ್ಯಾಪೀಠದ ವ್ಯವಸ್ಥಾಪಕ ವಾದಿರಾಜಾಚಾರ್ ಕಲ್ಮಂಗಿ, ಸತ್ಯಾಂಜನೇಯ ದೇವಾಲಯ ಸಮಿತಿಯ ಅಡವಿರಾವ್ ಕಲಾಲ್ ಬಂಡಿ, ಹನುಮೇಶಚಾರ್, ಕೇಸಕ್ಕಿ ವೆಂಕಟೇಶ, ಕೇಸಕ್ಕಿ ಉಪೇಂದ್ರಾಚಾರ್, ರಂಗನಾಥ ಬಡಶೇಸಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net