ಗುರಿಯೊಂದಿಗೆ ಸಾಧನೆ ಮಾಡಿ

UDGHATANE
ಗಂಗಾವತಿ ಟಿಎಂಎಇ ಶಿಕ್ಷಣ ಮಹಾವಿದ್ಯಾಲಯದಲ್ಲಿ ಪ್ರಸಕ್ತ ಸಾಲಿನ ವಿದ್ಯಾರ್ಥಿ ಸಂಘವನ್ನು ಪ್ರಾಚಾರ್ಯ ಡಾ.ಕೆ.ಸಿ.ಕುಲ್ಕರ್ಣಿ ಶನಿವಾರ ಉದ್ಘಾಟಿಸಿದರು. ದಾವಣಗೆರೆ ವಿವಿ ಸಹಾಯಕ ಪ್ರಾಧ್ಯಾಪಕ ಡಾ.ಚೇತನಕುಮಾರ, ವಿಎಸ್‌ಕೆ ವಿವಿ ಸಿಂಡಿಕೇಟ್ ಸದಸ್ಯ ಟಿ.ಎಂ.ರಾಜಶೇಖರ ಇತರರಿದ್ದರು.
Published on

ಗಂಗಾವತಿ: ಪ್ರಶಿಕ್ಷಣಾರ್ಥಿಗಳಿಗೆ ಸಾಧಕರ ಜೀವನ ಮಾರ್ಗ ಆದರ್ಶವಾಗಬೇಕು. ಅಧ್ಯಯನದ ಮೂಲಕ ನಿರೀಕ್ಷಿತ ಗುರಿ ತಲುಪಬೇಕು ಎಂದು ಪ್ರಾಚಾರ್ಯ ಡಾ.ಕೆ.ಸಿ.ಕುಲ್ಕರ್ಣಿ ಹೇಳಿದರು.

ನಗರದ ಟಿಎಂಎಇ ಶಿಕ್ಷಣ ಮಹಾವಿದ್ಯಾಲಯದಲ್ಲಿ ಪ್ರಸಕ್ತ ಸಾಲಿನ ವಿದ್ಯಾರ್ಥಿ ಸಂಘ ಶನಿವಾರ ಉದ್ಘಾಟಿಸಿ ಮಾತನಾಡಿದರು. ಓದು ಮತ್ತು ಕ್ರಿಯಾಶೀಲ ಚಟುವಟಿಕೆಗಳ ಮೂಲಕ ಸಾಧಕರ ಪಟ್ಟಿಯಲ್ಲಿ ಸೇರಬೇಕು. ಗುರಿಯೊಂದಿಗೆ ಸಾಧನೆಯತ್ತ ಗಮನಹರಿಸಬೇಕಿದೆ ಎಂದರು.

ದಾವಣಗೆರೆ ವಿವಿ ಸಹಾಯಕ ಪ್ರಾಧ್ಯಾಪಕ ಡಾ.ಚೇತನಕುಮಾರ ಮಾತನಾಡಿ, ಜೀವನದಲ್ಲಿ ಕಷ್ಟಗಳನ್ನು ಎದುರಿಸಿದವರು ಎಲ್ಲ ಕ್ಷೇತ್ರದಲ್ಲೂ ಆದ್ಯತೆ ಪಡೆಯಲಿದ್ದಾರೆ ಎಂದರು.

ವಿಎಸ್‌ಕೆ ವಿವಿ ಸಿಂಡಿಕೇಟ್ ಸದಸ್ಯ ಟಿ.ಎಂ.ರಾಜಶೇಖರ, ಹರಪನಹಳ್ಳಿ ಬಿಇಡಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ.ಮರುಳಸಿದ್ದಪ್ಪ, ಡಾ.ಡಿ.ಎಂ.ಅರುಣಕುಮಾರ, ಸ್ಥಳೀಯ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಕೆ.ಎಂ. ಶಿವಪ್ರಕಾಶ, ಜಯರಾಂ ಮರಡಿತೋಟದ್, ಎಂ.ರುದ್ರೇಶ ಆರಾಳ್, ಶಿವರಾಜ್ ಪಾಟೀಲ್, ಕೀರಪ್ಪ, ಗಂಗಾಧರ ಇತರಿದ್ದರು. ಪ್ರಶಿಕ್ಷಣಾರ್ಥಿಗಳಾದ ಹರ್ಷಿತಾ,ಅರವಿಂದ,ಪ್ರಮೀಳಾ,ಪಾಂಡುರಂಗ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net