ಸಂಚಾರ ನಿಯಮ ಪಾಲನೆ ಕಡ್ಡಾಯ

Gangavathi trafic police meeting
ಗಂಗಾವತಿಯಲ್ಲಿ ಹಮ್ಮಿಕೊಂಡಿದ್ದ ಜನಜಾಗೃತಿ ಕಾರ್ಯಕ್ರಮದಲ್ಲಿ ಸಂಚಾರ ಪಿಎಸ್‌ಐ ಶಾರದಮ್ಮ ಮಾತನಾಡಿದರು. ಸಂಚಾರ ಪಿಎಸ್‌ಐ ಇಸ್ಮಾಯಿಲ್, ಎಎಸೈ ಅಜೀಜ್ ಇತರರಿದ್ದರು.
Published on

ಗಂಗಾವತಿ: ಸಂಚಾರ ನಿಯಮಾವಳಿಯಂತೆ ವಾಹನಗಳನ್ನು ಚಲಾಯಿಸಬೇಕಿದ್ದು, ಅಗತ್ಯ ದಾಖಲೆ ಗಳನ್ನಿಟ್ಟುಕೊಳ್ಳುವಂತೆ ಆಟೋ ಮತ್ತು ಇತರ ವಾಹನ ಚಾಲಕರಿಗೆ ಸಂಚಾರ ಪಿಎಸ್‌ಐ ಶಾರದಮ್ಮ ದೊಡ್ಮನಿ ಸಲಹೆ ಹೇಳಿದರು.

ನಗರದ ಸಂಚಾರ ಠಾಣೆ ಆವರಣದಲ್ಲಿ ಸಂಚಾರ ಮತ್ತು ರಸ್ತೆ ಸುರಕ್ಷತೆ, ಮಾದಕ ವಸ್ತುಗಳ ದುರ್ಬಳಕೆ ಮತ್ತು ಅಕ್ರಮ ಸಾಗಣೆ ಕುರಿತು ಶುಕ್ರವಾರ ಹಮ್ಮಿಕೊಂಡಿದ್ದ ಜನಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಾಹನ ಚಾಲನಾ ಪರವಾನಗಿಯಲ್ಲಿರುವ ಷರತ್ತಿನಂತೆ ಅಗತ್ಯ ದಾಖಲೆಗಳನ್ನಿಟ್ಟುಕೊಳ್ಳಬೇಕಿದ್ದು, ನಿಗದಿತಕ್ಕಿಂತ ಹೆಚ್ಚಿನ ಪ್ರಯಾಣಿಕರನ್ನು ವಾಹನದಲ್ಲಿ ಹಾಕಬಾರದು. ಸಮವಸ ಸೇರಿ ಸೀಟ್ ಬೆಲ್ಟ್ ಕಡ್ಡಾಯ ಧರಿಸಬೇಕು. ನಿಷೇಧಿತ ವಸ್ತುಗಳನ್ನು ಸಾಗಣೆ ಮಾಡುವುದು ಅಪರಾಧವಾಗಿದ್ದು, ಸಂಚಾರ ನಿಯಮಾವಳಿಗಳನ್ನು ಕಡ್ಡಾಯ ಪಾಲಿಸಬೇಕಿದೆ. ಅಪ್ತಾಪ್ತರ ಕೈಯಲ್ಲಿ ವಾಹನ ನೀಡದಂತೆ ಸಲಹೆ ನೀಡಿದರು.

ಸಂಚಾರ ಪಿಎಸೈ ಇಸ್ಮಾಯಿಲ್, ಎಎಸೈ ಅಜೀಜ್ ಸೇರಿ ಆಟೋ ಚಾಲಕರ ಸಂಘದ ಪದಾಧಿಕಾರಿಗಳಿದ್ದರು.

ಸುರಕ್ಷತಾ ಪ್ರಾತ್ಯಕ್ಷಿಕೆ

ತಾಲೂಕಿನ ವಡ್ಡರಹಟ್ಟಿಯ ಸ.ಹಿ.ಪ್ರಾ.ಶಾಲೆಯಲ್ಲಿ ಅಗ್ನಿಶಾಮಕ ದಳದಿಂದ ತುರ್ತು ಸೇವೆಗಳ ಸುರಕ್ಷತೆ ಕುರಿತು ಪ್ರಾತ್ಯಕ್ಷಿಕೆ ಶನಿವಾರ ಹಮ್ಮಿಕೊಳ್ಳಲಾಗಿತ್ತು. ಅಗ್ನಿ, ವಿದ್ಯುತ್ ಅವಘಡ, ಸಿಲಿಂಡರ್‌ಗೆ ಬೆಂಕಿ ಸೇರಿ ಪ್ರವಾಹ ಸಂದರ್ಭದಲ್ಲಿ ಕೈಗೊಳ್ಳಬೇಕಿರುವ ಸುರಕ್ಷತಾ ಕ್ರಮ ಮತ್ತು ಮುನ್ನೆಚ್ಚರಿಕೆ ಕುರಿತು ಠಾಣಾಧಿಕಾರಿ ರಮೇಶ ಈಡಿಗೇರ್ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿದರು. ಇಲಾಖೆ ಠಾಣಾಧಿಕಾರಿ ಆರ್.ವಿ.ಪೂಜಾರ್, ಸಿಬ್ಬಂದಿ ಶರಣಪ್ಪ ಕುರಿ, ರುದ್ರೇಶ, ಚನ್ನಪ್ಪ, ಸುರೇಶ, ದೌಲತರಾಯ, ಆಕಾಶ, ಮೆಹಬೂಬ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net