

ಗಂಗಾವತಿ: ಆರೋಗ್ಯವೇ ಭಾಗ್ಯವಾಗಿದ್ದು, ಸಕಾಲಕ್ಕೆ ಚಿಕಿತ್ಸೆ ಪಡೆಯುವ ಮೂಲಕ ಸ್ವಾಸ್ಥೃ ಜೀವನ ಸಾಗಿಸಬೇಕು ಎಂದು ರಾಜ್ಯ ಔಷಧ ವ್ಯಾಪಾರಿಗಳ ಸಂಘದ ಮುಖ್ಯಸ್ಥ ಅಶೋಕಸ್ವಾಮಿ ಹೇರೂರು ಹೇಳಿದರು.
ತಾಲೂಕಿನ ಬಸಾಪಟ್ಟಣದ ಸ.ಕಿ.ಪ್ರಾ.ಶಾಲೆ ಆವರಣದಲ್ಲಿ ಸ್ಥಳೀಯ ಔಷಧ ವ್ಯಾಪಾರಿಗಳ ಸಂಘದ ಸಹಯೊಗದೊಂದಿಗೆ ಸೋಮವಾರ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮದಲ್ಲಿ ಧನ್ವಂತರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು. ಆರೋಗ್ಯದ ಕಡೆಗೆ ಹೆಚ್ಚು ಗಮನ ಹರಿಸಬೇಕು. ತಂಪು ಪದಾರ್ಥ, ಪೌಷ್ಟಿಕ ಆಹಾರ ಸೇವಿಸಿ, ನಿರಂತರ ವ್ಯಾಯಾಮ ಮಾಡಿದರೆ ಮಾತ್ರ ಸದೃಢ ದೇಹದಾರ್ಢ್ಯತೆ ಹೊಂದಬಹುದು ಎಂದರು.
ಸ್ಫೂರ್ತಿ ನರ್ಸಿಂಗ್ ಕಾಲೇಜಿನ ವೈದ್ಯರು ರಕ್ತದೊತ್ತಡ, ಮಧುಮೇಹ ಸೇರಿ ವಿವಿಧ ರೋಗಗಳನ್ನು ತಪಾಸಣೆ ನಡೆಸಿ ಔಷಧ ವಿತರಿಸಿದರು. ವೈದ್ಯರಾದ ಬಸವರಾಜ ಸಸಿಮಠ, ಡಾ.ಬಸವರೆಡ್ಡಿ ಸಿದ್ದಾಪುರ, ಡಾ.ಕುಬೇರ್, ಡಾ.ನಾಮದೇವ ಹೆಬ್ಬಾರ್, ಡಾ.ಮಹಾಲಿಂಗಪ್ಪ ಕಾಳಗಿ, ಡಾ.ಎಸ್.ಗಂಗಾಧರ, ಡಾ.ಜೆ.ಜೆ.ತಿಮ್ಮನಾಳ್, ಸಂಘದ ಸದಸ್ಯರಾದ ಸಂಧ್ಯಾಪಾರ್ವತಿ, ರಾಜಶೇಖರಯ್ಯ ಭಾನಾಪುರ, ಚಿದಾನಂದ, ಶೇಖರಗೌಡ ಪಾಟೀಲ್, ಗುರುಪ್ರಸಾದ ಬಳ್ಳೊಳ್ಳಿ, ನಾಗರಾಜ್, ಹನುಮನಗೌಡ, ವಾಮನಮೂರ್ತಿ, ಮಹೇಶಸ್ವಾಮಿ, ಕಂಪನಿ ಪ್ರತಿನಿಧಿಗಳಾದ ಎ.ವಿಜಯಕುಮಾರ, ಅಜಯಕುಮಾರ, ರಮೇಶಕುಮಾರ, ವಿ.ತಿರುಮಲ ಇತರರಿದ್ದರು.