

ಗಂಗಾವತಿ: ತಾಲೂಕಿನ ಆನೆಗೊಂದಿಯ ರಾಯರ ಮಠದಲ್ಲಿ ಹಮ್ಮಿಕೊಂಡಿದ್ದ ಶ್ರೀ ಜಯತೀರ್ಥರ ಮಧ್ಯಾರಾಧನೆ ನಿಮಿತ್ತ ರಥೋತ್ಸವ ಮಂಗಳವಾರ ಜರುಗಿತು.
ಬೆಳಗ್ಗೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದ್ದು, ಮೂರ್ತಿಗೆ ಪಂಚಾಮೃತ ಅಭಿಷೇಕ, ವಿಶೇಷ ಪೂಜೆ, ಹೂವಿನ ಅಲಂಕಾರ, ಸಾಮೂಹಿಕ ಅಷ್ಟೋತ್ತರ ಪಾರಾಯಣ, ವಿವಿಧ ಭಜನಾ ಮಂಡಳಿಯಿಂದ ನಿರಂತರ ಭಜನೆ ಮತ್ತು ಸಂಗೀತ ಕಾರ್ಯಕ್ರಮ ಜರುಗಿದವು. ಸರ್ವಾಲಂಕೃತ ರಥೋತ್ಸವನ್ನು ಶ್ರೀ ಜಯತೀರ್ಥರ ಭಾವಚಿತ್ರದೊಂದಿಗೆ ಗ್ರಾಮದಾದ್ಯಂತ ನೆರವೇರಿಸಲಾಯಿತು.
ಆರಾಧನೆ ಮಹೋತ್ಸವ ಕುರಿತು ರಾಯರ ಮಠದ ವ್ಯವಸ್ಥಾಪಕ ಸುಮಂತಕುಲ್ಕರ್ಣಿ ಮಾತನಾಡಿದರು. ಬ್ರಾಹ್ಮಣ ಸಮಾಜದ ಮುಖಂಡರಾದ ಸುಳಾದಿ ಹನುಮೇಶಾಚಾರ್, ಅನಂತ ಪದ್ಮನಾಭ್, ಸುಶಿಲೇಂದ್ರಾಚಾರ್, ವಿಜಯೇಂದ್ರಾಚಾರ್, ಶ್ರೀನಿವಾಸಾಚಾರ್, ಗಿರೀಶಾಚಾರ್, ವಿಜಯ ದೇಸಾಯಿ, ಸಂಜೀವ ಕುಲ್ಕರ್ಣಿ ಸೇರಿ ವಿವಿಧ ಮಹಿಳಾ ಭಜನಾ ಮಂಡಳಿ ಸದಸ್ಯರಿದ್ದರು.
ಶ್ರೀರಾಮನಗರ: ತಾಲೂಕಿನ ಶ್ರೀರಾಮನಗರದ ವೆಂಕಟೇಶ್ವರ ದೇವಾಲಯದಲ್ಲಿ ಶ್ರೀ ಜಯತೀರ್ಥರ ಮಧ್ಯಾರಾಧನೆ ಮಂಗಳವಾರ ನಡೆಯಿತು. ದೇವಾಲಯ ಸಮಿತಿ ನೇತೃತ್ವದಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಬೆಳಗ್ಗೆ ಶ್ರೀ ವೆಂಕಟೇಶ್ವರ ಮೂರ್ತಿಗೆ ಪಂಚಾಮೃತ ಅಭಿಷೇಕ, ಸಾಮೂಹಿಕ ಅಷ್ಟೋತ್ತರ ಪಾರಾಯಣ, ತುಳಸಿ, ಹೂವುಗಳಿಂದ ವಿಶೇಷ ಅಲಂಕಾರ, ಮಹಾಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿತರಣೆ ನೆರವೇರಿತು. ಉಪನ್ಯಾಸ ನೀಡಿದ ಪಂ.ಬೇವಿನಾಳ್ ಪ್ರಲ್ಹಾದಾಚಾರ್, ಅದ್ವೈತ ಸಿದ್ಧಾಂತದ ಅನೇಕ ಗ್ರಂಥಗಳನ್ನು ನೀಡಿದ ಶ್ರಿ ಜಯತೀರ್ಥರ ಕೊಡುಗೆ ಅಪಾರ ಎಂದರು.
ಎಸ್ಸೆಸ್ಸೆಲ್ಸಿ, ಪಿಯುಸಿ ಮತ್ತು ಪದವಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಶಶಾಂಕಭಟ್, ಸ್ಫೂರ್ತಿ ಸಗರ, ಶ್ರೀಪೂರ್ಣ ಹೇರೂರು, ಧಾತ್ರಿ, ಶ್ರೀನಿವಾಸಾಚಾರ್ ಜೋಶಿ, ಸಂಜನಾ ದೇಸಾಯಿ, ಶ್ರೀಹರಿ ಹೇರೂರು, ಶ್ರೇಯಾ ಪುರೋಹಿತ್ ಮತ್ತು ವಂದನಾ ಗದಗಕರ್ ಅವರಿಗೆ ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು.
ದೇವಸ್ಥಾನ ಸಮಿತಿ ಅಧ್ಯಕ್ಷ ಡಾ.ಗುರುರಾಜಾಚಾರ್ ಅಯೋಧ್ಯಾ, ಪದಾಧಿಕಾರಿಗಳಾದ ಸತ್ಯಾನಾರಾಯಣ ದೇಶಪಾಂಡೆ, ಚಂದ್ರಕಾಂತ ಆಲ್ಲಂಪಲ್ಲಿ, ತಿರುಮಲರಾವ್, ಲಕ್ಷ್ಮೀಕಾಂತ, ಗುಂಡೂರಾವ್, ವೆಂಕಟೇಶ ಗದಕರ್, ರಮೇಶ ಕುಲ್ಕರ್ಣಿ, ನರೇಶ ಜೋಶಿ, ಶ್ರೀಧರ್, ರಾಮು, ಕಲ್ಲಪ್ಪ, ಗುರುರಾಜ್ ಹೆಬ್ಬಾಳ್, ನಾರಾಯಣಾಚಾರ್, ಶ್ರೀನಿವಾಸ ಕೌಶಿಕ, ಕೃಷ್ಣರಾವ್, ರವೀಂದ್ರ, ಗೋಪಾಲರಾವ್ ಇತರರಿದ್ದರು.