

ಗಂಗಾವತಿ: ಅಂಚೆ ಇಲಾಖೆ ಸೃಷ್ಟಿಸಿರುವ ಶಾಶ್ವತ ಚಿತ್ರಾತ್ಮಕ ಮುದ್ರಣದಿಂದ ಅಂಜನಾದ್ರಿ ಭಾಗದ ಐತಿಹ್ಯ ವಿಶ್ವದಾದ್ಯಂತ ಗೊತ್ತಾಗಲಿದೆ ಎಂದು ಆನೆಗೊಂದಿ ಗ್ರಾಪಂ ಅಧ್ಯಕ್ಷೆ ಹುಲಿಗೆಮ್ಮ ಹೊನ್ನಪ್ಪ ನಾಯಕ ಹೇಳಿದರು.
ತಾಲೂಕಿನ ಹನುಮನಹಳ್ಳಿ ಬಳಿ ಅಂಜನಾದ್ರಿ ಬೆಟ್ಟದ ಬಳಿ ಕೇಂದ್ರ ಸರ್ಕಾರದ ಸಂಚಾರ ಸಚಿವಾಲಯ ಮತ್ತು ಅಂಚೆ ಇಲಾಖೆ ಕೊಪ್ಪಳ ವಿಭಾಗದಿಂದ ಬುಧವಾರ ಹಮ್ಮಿಕೊಂಡಿದ್ದ ಶಾಶ್ವತ ಚಿತ್ರಾತ್ಮಕ ಮುದ್ರೆ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮುದ್ರೆ ವಿಶಿಷ್ಟ ರೀತಿಯಲ್ಲಿ ರೂಪಿಸಿದ್ದು, ನಮ್ಮ ಪ್ರದೇಶದ ಹೆಮ್ಮೆಯ ಸಂಗತಿಯಾಗಿದೆ. ಅಂಜನಾದ್ರಿ ಬೆಟ್ಟದ ಪ್ರಾಚೀನತೆ ಮತ್ತು ಪಾವಿತ್ರ್ಯ ವಿಶ್ವದಾದ್ಯಂತ ತಲುಪಲಿದೆ ಎಂದರು.
ಅಂಚೆ ಇಲಾಖೆ ವಿವಿಧ ಸೇವೆಗಳ ಬಗ್ಗೆ ಮಾಹಿತಿ ನೀಡಿದರಲ್ಲದೇ,ಯೋಜನೆಗಳನ್ನು ಸದ್ಭಳಕೆ ಮಾಡಿಕೊಳ್ಳುವಂತೆ ಅಂಚೆ ಅಧೀಕ್ಷಕ ಶಿವಾನಂದ ಬಿ.ರಬಕವಿ
ಹೇಳಿದರು.
ಪಾರಂಪರಿಕ ಕಿಷ್ಕಿಂದ ಮತ್ತು ಅಂಜನಾದ್ರಿ ಬೆಟ್ಟದ ಶಾಶ್ವತ ಚಿತ್ರಾತ್ಮಕ ಮುದ್ರೆಯ ವಿಶೇಷತೆ ಕುರಿತು ಉಪ ಅಧೀಕ್ಷಕ ಬಿ.ಪಿ.ಮಾಳಗಿ ಮಾಹಿತಿ ನೀಡಿದರು.
ಗ್ರಾಪಂ ಪಿಡಿಒ ರವೀಂದ್ರ ಕುಲ್ಕರ್ಣಿ, ಅಂಚೆ ನಿರೀಕ್ಷಕ ಎಚ್.ವೆಂಕಟೇಶ, ಅಂಚೆ ಇಲಾಖೆ ಸಿಬ್ಬಂದಿ ಸುಭಾಸ್, ಜಿ.ಕಾರ್ತಿಕ್, ರಂಗನಾಥಕೊಣ್ಣೂರ, ಶಂಕರ
ನಾಯ್ಕ, ಸಹನಾ, ಸೋಮಶೇಖರಗೌಡ ಇತರರಿದ್ದರು.