ವಿಶ್ವ ದಾರ್ಶನಿಕ ದಿನವಾಗಿ ಆಚರಿಸಲು ಸೂಚನೆ

MEETING
ಗಂಗಾವತಿ ತಾಲೂಕಾಡಳಿತ ಸೌಧದಲ್ಲಿ ಶ್ರೀ ಶಂಕರಾಚಾರ್ಯರ ಜಯಂತಿ ಪೂರ್ವಭಾವಿ ಸಭೆಯಲ್ಲಿ ಗ್ರೇಡ್ 2 ತಹಸೀಲ್ದಾರ್ ಮಹಾಂತಗೌಡ ಗೌಡರ್ ಸೋಮವಾರ ಮಾತನಾಡಿದರು. ಶ್ರೀಶಂಕರ ಮಠದ ಸ್ಥಳೀಯ ಶಾಖೆ ಮುಖ್ಯಸ್ಥ ನಾರಾಯಣರಾವ್ ವೈದ್ಯ, ವಿಪ್ರ ಸಮಾಜದ ಮುಖಂಡರಾದ ಶ್ರೀಪಾದ ಮುಧೋಳಕರ್, ಶೇಷಗಿರಿ ಪದಕಿ ಇತರರಿದ್ದರು.
Published on

ಗಂಗಾವತಿ: ಎಲ್ಲ ಇಲಾಖೆಯಲ್ಲಿ ಶ್ರೀ ಶಂಕರಾಚಾರ್ಯರ ಜಯಂತ್ಯುತ್ಸವ ಕಡ್ಡಾಯ ಆಚರಿಸಬೇಕಿದ್ದು, ವಿಶ್ವ ದಾರ್ಶನಿಕ ದಿನವನ್ನಾಗಿ ಆಚರಿಸುವಂತೆ ಗ್ರೇಡ್ 2 ತಹಸೀಲ್ದಾರ್ ಮಹಾಂತಗೌಡ ಗೌಡರ್ ಹೇಳಿದರು.

ನಗರದ ತಾಲೂಕಾಡಳಿತ ಸೌಧದಲ್ಲಿ ಶ್ರೀ ಶಂಕರಾಚಾರ್ಯರ ಜಯಂತಿ ನಿಮಿತ್ತ ಸೋಮವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಮೇ 2ರಂದು ಜಯಂತಿ ಆಚರಿಸಲಾಗುತ್ತಿದ್ದು, ತಾಲೂಕಾಡಳಿತ ಸೌಧದಲ್ಲೂ ಕಂದಾಯ ಇಲಾಖೆಯಿಂದ ಆಯೋಜಿಸಲಾಗುವುದು. ಅರ್ಥಪೂರ್ಣ ಆಚರಣೆಗೆ ಸಮುದಾಯದ ಮುಖಂಡರು ಸಲಹೆ ನೀಡಿದರೆ, ಮೇಲಧಿಕಾರಿಗಳ ಗಮನಕ್ಕೆ ತಂದು ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಎಲ್ಲ ಇಲಾಖೆಯಲ್ಲಿ ಕಡ್ಡಾಯವಾಗಿ ಜಯಂತಿ ಆಚರಿಸಲು ತಾಲೂಕಾಡಳಿತ ವಿವಿಧ ಕಚೇರಿಗಳಿಗೆ ನಿರ್ದೇಶನ ನೀಡಬೇಕಿದ್ದು, ಅಗತ್ಯ ಬಿದ್ದರೆ ಭಾವಚಿತ್ರವನ್ನು ಇಲಾಖೆಗಳಿಗೆ ನೀಡುವ ವ್ಯವಸ್ಥೆ ಮಾಡಲಾಗುವುದು ಎಂದು ಶ್ರೀಶಂಕರ ಮಠದ ಸ್ಥಳೀಯ ಶಾಖೆ ಮುಖ್ಯಸ್ಥ ನಾರಾಯಣರಾವ್ ವೈದ್ಯ ಹೇಳಿದರು.

ವಿಪ್ರ ಸಮಾಜದ ಮುಖಂಡರಾದ ಶ್ರೀಪಾದ ಮುಧೋಳಕರ್, ಶೇಷಗಿರಿ ಪದಕಿ, ಜಗನ್ನಾಥ ಅಳವಂಡಿಕರ್, ಹೊಸಳ್ಳಿ ಭೀಮಾಶಂಕರ, ವೇಣುಗೋಪಾಲ, ಮೋಹನ್ ಲೆಖ್ಖಿಹಾಳ್, ನಾಗೇಶ ಭಟ್, ಅನಿಲ್ ಅಳವಂಡಿಕರ್ ಇತರರಿದ್ದರು.

ಇದೇ ವೇಳೆ ಶ್ರೀಭಗೀರಥ ಜಯಂತಿಯನ್ನು ಮೇ 4ರಂದು, ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿ ಮೇ 10ರಂದು ಆಚರಿಸಲು ನಿರ್ಧರಿಸಲಾಯಿತು. ಆಯಾ ಸಮುದಾಯದ ಸಹಯೋಗದಲ್ಲಿ ತಾಲೂಕಾಡಳಿತ ಕಚೇರಿಯಲ್ಲಿ ಜಯಂತಿ ಆಯೋಜಿಸಲಾಗುವುದು ಎಂದರು.

ಉಪ್ಪಾರ ಸಮಾಜದ ಮುಖಂಡ ವೆಂಕಟೇಶ ಅಮರಜ್ಯೋತಿ, ರಡ್ಡಿ ಸಮಾಜದ ಮುಖಂಡರಾದ ಉಮೇಶ ಸಿಂಗನಾಳ್, ವಿಶ್ವನಾಥ ಮಾಲಿ ಪಾಟೀಲ್, ಚನ್ನಬಸವ ಜೇಕಿನ್, ವಿವಿಧ ಇಲಾಖೆ ಅಧಿಕಾರಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net