ನರೇಗಾ ಕೂಲಿ ಮೊತ್ತ ಕಡಿತಕ್ಕೆ ವಿರೋಧ

PROTEST
ನರೇಗಾ ಯೋಜನೆಯಡಿ ಕೆಲಸ ಮಾಡಿದ ಕಾರ್ಮಿಕರಿಗೆ ನಿಯಮಾನುಸಾರ ಕೂಲಿ ಮತ್ತು ಸಾರಿಗೆ ವೆಚ್ಚ ನೀಡುವಂತೆ ಒತ್ತಾಯಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ತಾಲೂಕು ಸಮಿತಿ ಸದಸ್ಯರು ಗಂಗಾವತಿ ತಾಪಂ ಕಚೇರಿ ಮುಂದೆ ಬುಧವಾರ ಪ್ರತಿಭಟಿಸಿದರು. ಜಿಲ್ಲಾ ಜಂಟಿ ಕಾರ್ಯದರ್ಶಿ ಕೆ.ಹುಸೇನಪ್ಪ, ಸಮಿತಿ ತಾಲೂಕಾಧ್ಯಕ್ಷ ಮರಿನಾಗಪ್ಪ, ಪದಾಧಿಕಾರಿಗಳಾದ ರಮೇಶ ವಡ್ಡರಹಟ್ಟಿ, ಬಾಳಪ್ಪ ಹುಲಿಹೈದರ್, ಯಲ್ಲಪ್ಪ, ಮಲ್ಲಮ್ಮ, ಪದ್ದಮ್ಮ ಇತರರಿದ್ದರು.
Published on

ಗಂಗಾವತಿ: ನರೇಗಾ ಯೋಜನೆಯಡಿ ಕೆಲಸ ಮಾಡಿದ ಕಾರ್ಮಿಕರಿಗೆ ನಿಯಮಾನುಸಾರ ಕೂಲಿ ಮತ್ತು ಸಾರಿಗೆ ವೆಚ್ಚ ನೀಡುವಂತೆ ಒತ್ತಾಯಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ತಾಲೂಕು ಸಮಿತಿ ಸದಸ್ಯರು ನಗರದ ತಾಪಂ ಕಚೇರಿ ಮುಂದೆ ಬುಧವಾರ ಪ್ರತಿಭಟನೆ ನಡೆಸಿದರು.

ತಾಲೂಕಿನ ವಡ್ಡರಹಟ್ಟಿ ಗ್ರಾಪಂ ವ್ಯಾಪ್ತಿಯ ಕೂಲಿಕಾರರೊಂದಿಗೆ ಪ್ರತಿಭಟಿಸಿದ ನಂತರ ಬೇಡಿಕೆ ಮನವಿಯನ್ನು ತಾಪಂ ಇಒ ಲಕ್ಷ್ಮೀ ದೇವಿ ಯಾದವ್, ಪಿಡಿಒ ಸುರೇಶ ಛಲವಾದಿಗೆ ಸಲ್ಲಿಸಿದರು.

ಸಮಿತಿ ಜಿಲ್ಲಾ ಜಂಟಿ ಕಾರ್ಯದರ್ಶಿ ಕೆ.ಹುಸೇನಪ್ಪ ಮಾತನಾಡಿ, ತಾಲೂಕಿನ ವಡ್ಡರಹಟ್ಟಿ ಗ್ರಾಪಂನಲ್ಲಿ ನರೇಗಾ ಯೋಜನೆಯಡಿ ಕೆಲಸ ಮಾಡಿದ ಕೂಲಿಕಾರರಿಗೆ ಕಡಿಮೆ ಕೂಲಿ ನೀಡಲಾಗುತ್ತಿದೆ.

30ರೂ.ಗಳಿಂದ 130ರೂ.ವರೆಗೂ ನೀಡಲಾಗಿದೆ. ಈ ಬಗ್ಗೆ ವಿಚಾರಿಸಿದರೆ ಗ್ರಾಪಂ ಮತ್ತು ಜಿಪಂ ಸಿಬ್ಬಂದಿ ನಿರ್ಲಕ್ಷ್ಯದಿಂದ ವರ್ತಿಸುತ್ತಿದ್ದು, ಸರಿಪಡಿಸುತ್ತಿಲ್ಲ. ವಡ್ಡರಹಟ್ಟಿಯಿಂದ ವಿಠಲಾಪುರದ ಕೆರೆಗೆ ಕೂಲಿಗಾಗಿ ತೆರಳಿದ ಕೂಲಿಕಾರರಿಗೆ ಟ್ರ್ಯಾಕ್ಟ್‌ರ್ ಬಾಡಿಗೆ ನೀಡಿಲ್ಲ. ಕೇಸರಹಟ್ಟಿ ಗ್ರಾಪಂ ವ್ಯಾಪ್ತಿಯ ಮರಕುಂಬಿ ಕೂಲಿಕಾರರಿಗೆ ಸರಿಯಾಗಿ ಕೂಲಿ ವಿತರಿಸುತ್ತಿಲ್ಲ. ಮನೆ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದರೂ ಇದುವರಿಗೂ ವಿಲೇವಾರಿಯಾಗಿಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net