ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಕರು ದೇಶದ ನಿರ್ಮಾತೃಗಳು

Gangavati Nation Builders Honer to teachers
ಗಂಗಾವತಿಯಲ್ಲಿ ರೋಟರಿ ಕ್ಲಬ್ ತಾಲೂಕು ಘಟಕದಿಂದ ಶಿಕ್ಷಕರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
Published on

ಗಂಗಾವತಿ: ಜಯನಗರದ ರೋಟರಿ ಕ್ಲಬ್ ಕಚೇರಿಯಲ್ಲಿ ರೋಟರಿ ಕ್ಲಬ್ ತಾಲೂಕು ಘಟಕದಿಂದ ಶಿಕ್ಷಕರ ದಿನ ನಿಮಿತ್ತ ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮತ್ತು ಸನ್ಮಾನ ಕಾರ್ಯಕ್ರಮ ಶನಿವಾರ ಹಮ್ಮಿಕೊಳ್ಳಲಾಗಿತ್ತು.

ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕರಾದ ಶ್ರೀನಿವಾಸ ಅಂಗಡಿ, ಮೈಲಾರಪ್ಪ ಬೂದಿಹಾಳ್, ಶಿವಕಾಂತ ತಳವಾರ ಮತ್ತು ಯಮನೂರಪ್ಪ ಹೊಸ್ಕೇರಾ ಅವರಿಗೆ ನೇಶನ್ ಬಿಲ್ಡರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕ್ಲಬ್ ತಾಲೂಕು ಅಧ್ಯಕ್ಷ ಟಿ.ಆಂಜನೇಯ ಮಾತನಾಡಿ, ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಕರು ದೇಶದ ನಿರ್ಮಾತೃಗಳಾಗಿದ್ದು, ಕಲಿಕೆ ಜತೆಗೆ ಕೌಶಲ ಬಗ್ಗೆ ಜಾಗೃತಿ ಮೂಡಿಸಲಿದ್ದಾರೆ ಎಂದರು. ಶಿಕ್ಷಣ ಸಂಯೋಜಕ ರಾಘವೇಂದ್ರ ಮಾತನಾಡಿದರು.

ಎಂಎನ್‌ಎಂ ಬಾಲಕೀಯರ ಪ.ಪೂ.ಕಾಲೇಜು ಪ್ರಾಚಾರ್ಯ ಟಿ.ಸಿ.ಶಾಂತಪ್ಪ, ರಾಯಚೂರು ಜಿಲ್ಲಾ ದೈಹಿಕ ಶಿಕ್ಷಣ ಪರಿವೀಕ್ಷಕ ಕೆ.ರಂಗಸ್ವಾಮಿ ನಾಯಕ, ಕ್ಲಬ್ ಪದಾಧಿಕಾರಿಗಳಾದ ಉಗಮ ರಾಜ ಬಂಬ, ಜೆ.ನಾಗರಾಜ, ದಿಲೀಪ್ ಕುಮಾರ್, ಸುರೇಶ ಸೋಲಂಕಿ, ನಾಗೇಶ್ವರ ರಾವ್, ಮಂಜುನಾಥ ಹುಡೇದ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net