ಗಂಗಾವತಿ ತಾಲೂಕು ಸಾಹಿತ್ಯ ಸಮ್ಮೇಳನಾಧ್ಯಕ್ಷ ಸಿ.ಎಚ್.ನಾರಿನಾಳ್‌ಗೆ ಅಧಿಕೃತ ಆಹ್ವಾನ

100223 CH Narinala
ಗಂಗಾವತಿ ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಹಿರಿಯ ಸಾಹಿತಿ ಸಿ.ಎಚ್.ನಾರಿನಾಳ್‌ರನ್ನು ಅವರ ನಿವಾಸದಲ್ಲಿ ಕಸಾಪದಿಂದ ಸನ್ಮಾನಿಸಿ ಆಹ್ವಾನ ನೀಡಲಾಯಿತು.
Published on

ಗಂಗಾವತಿ: ತಾಲೂಕು ಮಟ್ಟದ 8ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಹಿರಿಯ ಸಾಹಿತಿ ಸಿ.ಎಚ್.ನಾರಿನಾಳ್‌ರನ್ನು ಗುರುವಾರ ಕಸಾಪದಿಂದ ಅಧಿಕೃತವಾಗಿ ಆಹ್ವಾನ ನೀಡಲಾಯಿತು.

ನಗರದ ಬಾಲಕರ ಪಪೂ ಕಾಲೇಜು ಮೈದಾನದಲ್ಲಿ ಮಾ.6 ಮತ್ತು 7ರಂದು ಸಮ್ಮೇಳನ ಹಮ್ಮಿಕೊಳ್ಳಲಾಗಿದೆ. ಇತ್ತೀಚೆಗೆ ನಡೆದ ತಾಲೂಕು ಕಾರ್ಯಕಾರಿಣಿ ಸಭೆಯಲ್ಲಿ ಸಿ.ಎಚ್.ನಾರಿನಾಳ್‌ರನ್ನು ಒಮ್ಮತದಿಂದ ಆಯ್ಕೆ ಮಾಡಲಾಗಿತ್ತು. ಸಂಪ್ರದಾಯದಂತೆ ಶಾಸಕ ಪರಣ್ಣ ಮುನವಳ್ಳಿ ನೇತೃತ್ವದಲ್ಲಿ ಸಮ್ಮೇಳನಾಧ್ಯಕ್ಷರ ನಿವಾಸಕ್ಕೆ ತೆರಳಿದ ಪರಿಷತ್ ಸದಸ್ಯರು ಸನ್ಮಾನಿಸುವ ಮೂಲಕ ಆಹ್ವಾನ ನೀಡಿದರು.

ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ಸೂಕ್ತ ವ್ಯಕ್ತಿಯನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದು, ಸಮ್ಮೇಳನವನ್ನು ಅದ್ದೂರಿ ಮತ್ತು ಅರ್ಥಪೂರ್ಣವಾಗಿ ನಡೆಸೋಣ ಎಂದರು. ಕಸಾಪ ಜಿಲ್ಲಾಧ್ಯಕ್ಷ ಶರಣೇಗೌಡ ಪೊ.ಪಾಟೀಲ್ ಮಾತನಾಡಿ, ಕನ್ನಡದ ಹಿರಿಮೆ, ಕಲೆ, ಸಾಂಸ್ಕೃತಿಕ ಬಿಂಬಿಸುವ ಕಾರ್ಯಕ್ರಮವಾಗಿದೆ ಎಂದರು. ಕಸಾಪ ತಾಲೂಕಾಧ್ಯಕ್ಷ ಶ್ರೀನಿವಾಸ ಅಂಗಡಿ, ಗೌರವ ಕಾರ್ಯದರ್ಶಿ ರುದ್ರೇಶ ಆರಾಳ್, ಸಿಂಗನಾಳ್ ಮಹೇಶ, ಮಸ್ಕಿ ಮಂಜುನಾಥ, ಲಿಂಗಾರಡ್ಡಿ ಆಲೂರು ಇತರರಿದ್ದರು.

ಜನಾರ್ದನ ರೆಡ್ಡಿ ಭೇಟಿ: ಸಮ್ಮೇಳನಾಧ್ಯಕ್ಷ ಸಿ.ಎಚ್.ನಾರಿನಾಳ್ ನಿವಾಸಕ್ಕೆ ಕೆಆರ್‌ಪಿಪಿ ಸಂಸ್ಥಾಪಕ ಅಧ್ಯಕ್ಷ ಹಾಗೂ ಮಾಜಿ ಸಚಿವ ಜನಾರ್ದನರೆಡ್ಡಿ ಭೇಟಿ ನೀಡಿ, ಸನ್ಮಾನಿಸಿದರು. ಮುಖಂಡ ಅಮರಜ್ಯೋತಿ ನರಸಪ್ಪ, ವೈದ್ಯ ರಾಜಶೇಖರ್ ನಾರಿನಾಳ್ ಇತರರಿದ್ದರು. ಲಿಟಲ್ ಹಾರ್ಟ್ಸ್ ಶಾಲೆ, 1985ರ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಸನ್ಮಾನಿಸಿದರು. ವಿದ್ಯಾರ್ಥಿಗಳಾದ ಜಗನ್ನಾಥ ಆಲ್ಲಂಪಲ್ಲಿ, ಸರ್ವೇಶ ವಸದ್, ಇಬ್ರಾಹಿಂ ಬಳ್ಳಾರಿ, ಅಹ್ಮದ್ ಪಾಷಾ, ಸದಾಶಿವರೆಡ್ಡಿ, ಕೃತಿಕ್ ವಸದ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net