371ಜೆ ರದ್ದತಿಗೆ ಸರ್ಕಾರಕ್ಕೆ ಒತ್ತಡ

SABHE
ಹೋರಾಟದ ರೂಪುರೇಷೆಗಾಗಿ ಗಂಗಾವತಿ ವಕೀಲರ ಸಂಘದ ಕಚೇರಿಯಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ 371ಜೆ ವಿಧೇಯಕ ಅನುಷ್ಠಾನ ಸಮಿತಿ ಸಂಚಾಲಕ ಈ.ಧನರಾಜ್ ಮಾತನಾಡಿದರು. ವಕೀಲರ ಸಂಘದ ಕಾರ್ಯದರ್ಶಿ ಎಚ್.ಎಂ.ಮಂಜುನಾಥ, ಸದಸ್ಯರಾದ ಎಚ್.ಸಿ.ಯಾದವ್, ರಾಘವೇಂದ್ರ ನವಣಕ್ಕಿ ಇತರರಿದ್ದರು.
Published on

ಗಂಗಾವತಿ: ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿಗಾಗಿ ಜಾರಿಗೊಂಡ 371ಜೆ ಸಮರ್ಪಕ ಅನುಷ್ಠಾನಕ್ಕೆ ಒತ್ತಾಯಿಸಿ ಆ.1ರಂದು ನಗರದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು 371ಜೆ ವಿಧೇಯದ ಅನುಷ್ಠಾನ ಸಮಿತಿ ತಾಲೂಕು ಸಂಚಾಲಕ ಈ.ಧನರಾಜ್ ಹೇಳಿದರು.

ಹೋರಾಟದ ರೂಪುರೇಷೆಗಾಗಿ ನಗರದ ವಕೀಲ ಸಂಘದ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ವಿಧೇಯಕ ರದ್ದತಿಗಾಗಿ ಬೆಂಗಳೂರು ಮೂಲದ ಹಸಿರು ಪ್ರತಿಷ್ಠಾನ ಯತ್ನಿಸುತ್ತಿದ್ದು, ಸರ್ಕಾರ ಮೇಲೆ ಒತ್ತಡ ಹಾಕಲಾಗುತ್ತಿದೆ. ಶಿಕ್ಷಣ, ಉದ್ಯೋಗ ಸೇರಿ ಎಲ್ಲ ಕ್ಷೇತ್ರದಲ್ಲೂ ಕಕ ಭಾಗದ ಜನರಿಗೆ ಆದ್ಯತೆಯಿದ್ದು, ಸಮರ್ಪಕ ಅನುಷ್ಠಾನಗೊಳಿಸುವಲ್ಲಿ ಜನಪ್ರತಿನಿಧಿಗಳು ವಿಲರಾಗಿದ್ದಾರೆ.

ಸರ್ಕಾರಕ್ಕೆ ಒತ್ತಡ ಹಾಕಲು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದು, ಸಾಹಿತಿಗಳು, ಚಿಂತಕರು, ಶೈಕ್ಷಣಿಕ, ಕನ್ನಡ ಪರ, ವಿದ್ಯಾರ್ಥಿ ಸಂಘಟನೆಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು ಸೇರಿ ಸಾರ್ವಜನಿಕರ ಸಹಭಾಗಿತ್ವದಲ್ಲಿ ಜರುಗಲಿದೆ. ಸಿಬಿಎಸ್, ಗಾಂಧಿ ವೃತ್ತದಿಂದ ಪ್ರತಿಭಟನೆ ಆರಂಭವಾಗಲಿದ್ದು, ಗಾಂಧಿ ವೃತ್ತದಲ್ಲಿ ಸಮಾಗಮಗೊಳ್ಳಲಿದೆ. ಬಹಿರಂಗ ಸಭೆ ನಂತರ ಪ್ರತಿಭಟನೆಯಲ್ಲಿ ಕೈಗೊಂಡ ನಿರ್ಣಯಗಳನ್ನು ಸರ್ಕಾರಕ್ಕೆ ಕಳುಹಿಸಲಾಗುವುದು ಎಂದರು.

ವಕೀಲರ ಸಂಘದ ಕಾರ್ಯದರ್ಶಿ ಎಚ್.ಎಂ.ಮಂಜುನಾಥ, ಸದಸ್ಯರಾದ ಎಚ್.ಸಿ.ಯಾದವ್, ರಾಘವೇಂದ್ರ ನವಣಕ್ಕಿ, ಎಂ.ಎಸ್.ತಲೇಖಾನ್ ಇತರರಿದ್ದರು.

ಪ್ರತಿಭಟನೆಯಲ್ಲಿ ಪಾಲ್ಗೊಳ್ಳಿ…..

371ಜೆ ವಿಧೇಯಕ ಸಮರ್ಪಕ ಅನುಷ್ಠಾನಕ್ಕೆ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಸಾರ್ವಜನಿಕರು ಕಡ್ಡಾಯ ಪಾಲ್ಗೊಳ್ಳಬೇಕಿದ್ದು, ವಿಧೇಯ ಉಳಿಸಿಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಸಂಚಾಲಕ ಸಮಿತಿ ಹಿರಿಯ ಸದಸ್ಯ ಕೆ.ಚನ್ನಬಸಯ್ಯಸ್ವಾಮಿ ಹೇಳಿದರು. ಕಾಯ್ದೆ ಅನುಷ್ಠಾನ ವಿಚಾರದಲ್ಲಿ ಜನಪ್ರತಿನಿಧಿಗಳ ವೈಲ್ಯ ಕಾಣುತ್ತಿದ್ದು, ಅಧಿಕಾರಿ ವರ್ಗ ದಾರಿತಪ್ಪಿಸುತ್ತಿದೆ. ಪ್ರಮಾಣ ಪತ್ರ ನೀಡದೇ ಜನರಿಗೆ ತೊಂದರೆ ನೀಡುತ್ತಿದ್ದು, ಕಕ ಭಾಗದ ಅನುದಾನ ಬಳಸಿಕೊಳ್ಳುವಲ್ಲಿ ವಿಲವಾಗಿದ್ದೇವೆ. ಹೋರಾಟದ ಮೂಲಕ ಜನಪ್ರತಿನಿಧಿಗಳು ಮತ್ತು ಜನರನ್ನು ಎಚ್ಚರಿಸುವ ಕೆಲಸ ಮಾಡಲಾಗುತ್ತಿದೆ ಎಂದರು. ಹೋರಾಟದ ರೂಪುರೇಷೆ, ಸಮರ್ಪಕ ಅನುಷ್ಠಾನ ಇತರ ವಿಷಯ ಕುರಿತು ಸಂಚಾಲಕ ಈ.ಧನರಾಜ್ ಮಾತನಾಡಿದರು. ಪದಾಧಿಕಾರಿಗಳಾದ ಅಜ್ಮೀರ್ ನಂದಾಪುರ, ಎ.ಕೆ. ಮಹೇಶ, ವಿರೂಪಾಕ್ಷಗೌಡ ನಾಯಕ ಹೇರೂರು, ಪಂಪಣ್ಣ ನಾಯಕ, ರಾಜೇಶ್ ರೆಡ್ಡಿ, ಪವನ್ ಕುಮಾರ್ ಗುಂಡೂರು, ಕೆ.ಅಂಬಣ್ಣ, ರಾಘವೇಂದ್ರ ತೂನಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net