ಬೀದಿ ಬದಿ ವ್ಯಾಪಾರಿಗಳಿಗೆ ತೊಂದರೆ, ಗಂಗಾವತಿ ನಗರಸಭೆ ಅಧಿಕಾರಿಗಳ ವಿರುದ್ಧ ಆಕ್ರೋಶ

161122 Gangavati Protest by AAP members
ಗಂಗಾವತಿ ಬಸ್ ನಿಲ್ದಾಣದ ಮುಂದಿನ ಬೀದಿ ಬದಿ ವ್ಯಾಪಾರಿಗಳನ್ನು ತೆರವುಗೊಳಿಸಿರುವ ನಗರಸಭೆ ಅಧಿಕಾರಿಗಳ ಕ್ರಮ ಖಂಡಿಸಿ ಆಮ್ ಆದ್ಮಿ ಪಕ್ಷದ ತಾಲೂಕು ಘಟಕದ ಸದಸ್ಯರು ನಗರಸಭೆ ಮುಂದೆ ಪ್ರತಿಭಟಿಸಿ ಎಇಇ ಚೇತನನಾಯ್ಕರನ್ನು ತರಾಟೆಗೆ ತೆಗೆದುಕೊಂದರು.
Published on

ಗಂಗಾವತಿ: ನಗರದ ಬಸ್ ನಿಲ್ದಾಣದ ಮುಂದಿನ ಬೀದಿ ಬದಿ ವ್ಯಾಪಾರಿಗಳನ್ನು ತೆರವುಗೊಳಿಸಿರುವ ನಗರಸಭೆ ಅಧಿಕಾರಿಗಳ ಕ್ರಮ ಖಂಡಿಸಿ ಆಮ್ ಆದ್ಮಿ ಪಕ್ಷದ ತಾಲೂಕು ಘಟಕದ ಸದಸ್ಯರು ನಗರಸಭೆ ಕಚೇರಿ ಮುಂದೆ ಬುಧವಾರ ಪ್ರತಿಭಟನೆ ನಡೆಸಿದರು.

ಬೀದಿ ಬದಿ ವ್ಯಾಪಾರಿಗಳೊಂದಿಗೆ ಪ್ರತಿಭಟನೆ ರ‌್ಯಾಲಿ ಮೂಲಕ ಆಗಮಿಸಿ, ಎಇಇ ಚೇತನನಾಯ್ಕರ್‌ರನ್ನು ಸದಸ್ಯರು ತರಾಟೆಗೆ ತೆಗೆದುಕೊಂಡರು. ಸ್ಥಳಕ್ಕೆ ಅಧ್ಯಕ್ಷೆ ಮತ್ತು ಪೌರಾಯುಕ್ತ ಬರುವಂತೆ ಒತ್ತಾಯಿಸಿದ್ದರಿಂದ ಕೆಲಕಾಲ ಗದ್ದಲ ನಡೆಯಿತು.

ಜಿಲ್ಲಾಧ್ಯಕ್ಷ ಹುಸೇನ್‌ಸಾಬ್ ಗಂಗನಾಳ್ ಮಾತನಾಡಿ, ವ್ಯಾಪಾರಿಗಳ ಗಮನಕ್ಕೆ ತಾರದೇ ಏಕಾಏಕಿ ಒಕ್ಕಲೆಬ್ಬಿಸಿದ್ದು ಸರಿಯಲ್ಲ. ಬೀದಿ ಬದಿ ವ್ಯಾಪಾರಿಗಳಿಂದ ಪ್ರಯಾಣಿಕರು ಮತ್ತು ಪರಸ್ಥಳದಿಂದ ಬರುವ ವಿದ್ಯಾರ್ಥಿಗಳ ಹಸಿವು ನೀಗುತ್ತಿತ್ತು, ಬಡ ವ್ಯಾಪಾರಿ ಕುಟುಂಬಗಳಿಗೆ ಅನುಕೂಲವಾಗಿತ್ತು. ಕೋವಿಡ್‌ನಿಂದ ಚೇತರಿಸಿಕೊಂಡ ಬೀದಿ ಬದಿ ವ್ಯಾಪಾರಿಗಳಿಗೆ ನಗರಸಭೆ ಅಧಿಕಾರಿಗಳು ತೊಂದರೆ ನೀಡುತ್ತಿದ್ದು, ಮೊದಲಿನಂತೆ ವಹಿವಾಟು ನಡೆಸಲು ಅವಕಾಶ ನೀಡದಿದ್ದರೆ ಪ್ರತಿಭಟನೆ ತೀವ್ರಗೊಳಿಸಲಾಗುವುದು ಎಂದರು.

ತಾಲೂಕು ಅಧ್ಯಕ್ಷ ಶರಣಪ್ಪ ಸಜ್ಜಿಹೊಲ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಬಸವರಾಜ ಮ್ಯಾಗಳಮನಿ ಪದಾಧಿಕಾರಿಗಳಾದ ವಿಕ್ರಂ, ಪರಶುರಾಂ ಒಡೆಯರ್, ರೇಣುಕಾಬಸವರಾಜ್, ಭೋಗೇಶ ಆನೆಗೊಂದಿ, ಚಂದ್ರಶೇಖರ್ ವಗ್ಗಾ, ದುರ್ಗೇಶ ಹೊಸಳ್ಳಿ, ವಿರುಪಣ್ಣ, ಬಸಮ್ಮ, ದ್ರಾಕ್ಷಾಯಣಿ, ಭಾಸ್ಕರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net