ಬೀದಿಬದಿ ವ್ಯಾಪಾರಕ್ಕೆ ಅನುಮತಿ ನೀಡಿ: ಶಾಸಕ ಪರಣ್ಣ ಮುನವಳ್ಳಿಗೆ ವ್ಯಾಪಾರಸ್ಥರ ಮನವಿ

171122 Gangavati Road Side Traders
ಗಂಗಾವತಿಯ ಬಿಜೆಪಿ ಕಚೇರಿಲ್ಲಿ ಶಾಸಕ ಪರಣ್ಣ ಮುನವಳ್ಳಿರನ್ನು ಭೇಟಿ ಮಾಡಿ ಶ್ರೀಕೃಷ್ಣದೇವರಾಯ ವೃತ್ತ ಬಳಿಯ ಬೀದಿ ಬದಿ ವ್ಯಾಪಾರಿಗಳು, ವ್ಯಾಪಾರಕ್ಕೆ ಅನುಮತಿ ನೀಡಲು ಮನವಿ ಮಾಡಿದರು.
Published on

ಗಂಗಾವತಿ: ರಸ್ತೆ ಬದಿ ವ್ಯಾಪಾರ ನಡೆಸಲು ಅವಕಾಶ ನೀಡುವಂತೆ ಒತ್ತಾಯಿಸಿ ನಗರದಲ್ಲಿ ಶಾಸಕ ಪರಣ್ಣ ಮುನವಳ್ಳಿಗೆ ಬೀದಿಬದಿ ವ್ಯಾಪಾರಿಗಳು ಗುರುವಾರ ಮನವಿ ಸಲ್ಲಿಸಿದರು.

ಸ್ವಚ್ಛತೆ ಹಿನ್ನೆಲೆಯಲ್ಲಿ ಬಸ್ ನಿಲ್ದಾಣದ ಬಳಿ ಇದ್ದ ಬೀದಿ ಬದಿಯ ಹೋಟೆಲ್ ಸೇರಿ ಇತರ ಅಂಗಡಿಗಳನ್ನು ತೆರವುಗೊಳಿಸಿದ್ದು, ಜೀವನ ನಿರ್ವಹಣೆ ಕಷ್ಟವಾಗಿದೆ. ನಗರಸಭೆ ಅಧಿಕಾರಿಗಳು ಮಾಹಿತಿ ನೀಡದೇ ಏಕಾಏಕಿ ತೆರವುಗೊಳಿಸುವ ಮೂಲಕ ಸರ್ವಾಧಿಕಾರ ಧೋರಣೆ ಅನುಸರಿಸಿದ್ದಾರೆ. ವ್ಯಾಪಾರ ಹೊರತುಪಡಿಸಿ ಬೇರೆ ಯಾವುದೇ ಆದಾಯವಿಲ್ಲ. ಎಂದಿನಂತೆ ವ್ಯಾಪಾರ ಮಾಡಲು ಅವಕಾಶ ನೀಡುವಂತೆ ವ್ಯಾಪಾರಿಗಳಾದ ರಮೇಶ, ಶರಣಪ್ಪ, ಬಸವರಾಜ್, ರಫಿ ಇತರರು ಮನವಿ ಮಾಡಿದರು.

ಶಾಸಕ ಪರಣ್ಣಮುನವಳ್ಳಿ ಮಾತನಾಡಿ, ವ್ಯಾಪಾರ ನಡೆಸಲು ಅವಕಾಶ ನೀಡುವಂತೆ ನಗರಸಭೆ ಅಧಿಕಾರಿಗಳಿಗೆ ಸೂಚಿಸಲಾಗುತ್ತಿದ್ದು, ರಸ್ತೆ ಬಳಿ ಸ್ವಚ್ಛತೆ ಕಾಪಾಡುವ ಜವಾಬ್ದಾರಿ ನಿಮ್ಮದು. ಎಲ್ಲೆಂದರಲ್ಲಿ ತ್ಯಾಜ್ಯ ಹಾಕದಂತೆ ವ್ಯಾಪಾರಿಗಳಿಗೆ ತಿಳಿಸಿದರು. ನಗರಸಭೆ ಮಾಜಿ ಉಪಾಧ್ಯಕ್ಷ ಹೊಸಳ್ಳಿ ಶಂಕರಗೌಡ, ಮುಖಂಡರಾದ ಚಂದ್ರುನಾಡಗೌಡ, ಹನುಮಂತಪ್ಪ, ಅಮರೇಶ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net