

ಗಂಗಾವತಿ: ಶೋಷಿತ ಸಮುದಾಯಗಳ ಪರ ಸಾಹಿತ್ಯ ಚಟುವಟಿಕೆ ವಿಸ್ತಾರಗೊಳಿಸಲಾಗುತ್ತಿದ್ದು, ಕ್ರೀಯಾಶೀಲ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ದಲಿತ ಸಾಹಿತ್ಯ ಪರಿಷತ್ತು ರಾಜ್ಯ ಉಪಾಧ್ಯಕ್ಷ ವೈ.ಬಿ.ಭಜಂತ್ರಿ ಹೇಳಿದರು.
ನಗರದ ಬಾಲಕರ ಸ.ಪ.ಪೂ.ಕಾಲೇಜಿನಲ್ಲಿ ದಲಿತ ಸಾಹಿತ್ಯ ಪರಿಷತ್ತು ತಾಲೂಕು ಘಟಕದಿಂದ ಭಾನುವಾರ ಹಮ್ಮಿಕೊಂಡಿದ್ದ ಅಕ್ಷರದವ್ವ ಸಾವಿತ್ರಿಬಾಯಿ ುಲೆೆ ಪ್ರಶಸ್ತಿ ಪ್ರದಾನ ಮತ್ತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
70-80ರದಶಕಗಳಿಂದಲೂ ಪರಿಷತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಪ್ರಗತಿಪರ ವಿಚಾರಗಳ ಜತೆಗೆ ಸಾಹಿತ್ಯ ಚಟುವಟಿಕೆಗಳಿಗೆ ಆದ್ಯತೆ ನೀಡಿದೆ. ಪುಸ್ತಕ ಪ್ರಕಟಣೆಗಳಿಗೆ ಸರ್ಕಾರದಿಂದ ಆರ್ಥಿಕ ನೆರವಿನ ಅಗತ್ಯವಿದೆ ಎಂದರು.
ಪ್ರಗತಿಪರ ಲೇಖಕಿ ಶೈಲಜಾಹಿರೇಮಠ ಮಾತನಾಡಿ, ಮಹಿಳೆಯರಿಗೆ ಶಿಕ್ಷಣ ದೊರಕಿಸುವ ಕೊಡುವಲ್ಲಿ ಸಾವಿತ್ರಿಬಾಯಿ ುಲೆ, ಜ್ಯೋತಿಬಾಯಿುಲೆ ಕೊಡುಗೆ ಅಪಾರವಾಗಿದ್ದು, ಮಹಿಳಾ ವರ್ಗಕ್ಕೆ ಶಿಕ್ಷಣದ ಬೆಳಕು ನೀಡಿದ್ದಾರೆ. ಪರಿಷತ್ತು ಚಟುವಟಿಕೆಗಳಿಗೆ ಸರ್ಕಾರದಿಂದ ಅನುದಾನ ಮೀಸಲಿಡುವಂತೆ ಸಿಎಂಗೆ ಮನವಿ ಮಾಡಲಾಗುವುದು ಎಂದರು.
ಸಾವಿತ್ರಿಬಾಯಿ ುಲೆ ಜೀವನ ಚರಿತ್ರೆ ಕುರಿತು ಕೊಪ್ಪಳದ ಸರ್ಕಾರಿ ಪದವಿ ಕಾಲೇಜಿನ ಪ್ರಾಧ್ಯಾಪಕಿ ಡಾ.ಭಾಗ್ಯಜ್ಯೋತಿ ಉಪನ್ಯಾಸ ನೀಡಿದರು. ವಿವಿಧ ಕ್ಷೇತ್ರದ 14ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ನಗರಸಭೆ ಮಾಜಿ ಸದಸ್ಯ ಹುಸೇನಪ್ಪ ಹಂಚಿನಾಳ, ಕಸಾಪ ಜಿಲ್ಲಾಧ್ಯಕ್ಷ ಶರಣೇಗೌಡ ಪೊ.ಪಾಟೀಲ್, ವಿವಿಧ ಸಂಘಟನೆ ಪದಾಧಿಕಾರಿಗಳಾದ ಸಿಂಗನಾಳ ಸುರೇಶ, ಡಾ.ಶಿವಕುಮಾರ ಮಾಲಿ ಪಾಟೀಲ, ಹನುಮಂತಪ್ಪ, ಕೆ.ರಂಗಸ್ವಾಮಿ ನಾಯಕ, ಪದ್ಮಾವತಿ, ಸುಂಕಪ್ಪ, ಪ್ರಾಚಾರ್ಯ ಬಸಪ್ಪ ನಾಗೋಲಿ, ಉಪನ್ಯಾಸಕ ಸೋಮಶೇಖರಗೌಡ, ಗ್ರಂಥಪಾಲಕ ರಮೇಶ ಗಬ್ಬೂರ, ಪರಿಷತ್ತು ಜಿಲ್ಲಾಧ್ಯಕ್ಷ ಡಾ.ಲಿಂಗಣ್ಣ ಜಂಗಮರಹಳ್ಳಿ, ತಾಲೂಕು ಘಟಕದ ಅಧ್ಯಕ್ಷ ಛತ್ರಪ್ಪ ತಂಬೂರಿ, ಪದಾಧಿಕಾರಿಗಳಾದ ಕೆ.ನಿಂಗಜ್ಜ, ಮೈಲಾರಪ್ಪ ಬೂದಿಹಾಳ ಇತರರಿದ್ದರು.