ಶ್ರೀ ಕಾಟಮಯ್ಯ ಪೂಜಾ ಮಹೋತ್ಸವ- ಕಡೇಬಾಗಿಲು ಬಯಲಿನಲ್ಲಿ ಈಡಿಗರಿಂದ ಆಚರಣೆ

080223 Kadebagilu Katamayya Programme
ಗಂಗಾವತಿ ತಾಲೂಕಿನ ಕಡೇಬಾಗಿಲು ಬಯಲಿನಲ್ಲಿ ಈಡಿಗ ಸಮಾಜದ ಕುಲದೇವತೆ ಶ್ರೀ ಕಾಟಮಯ್ಯ ಪೂಜಾ ಮಹೋತ್ಸವ ಕಾರ್ಯಕ್ರಮದಲ್ಲಿ ವರನಟ ಡಾ.ರಾಜಕುಮಾರ ಮೊಮ್ಮಗಳು ಸರಸ್ವತಿಯನ್ನು ಮಂಗಳವಾರ ಸನ್ಮಾನಿಸಲಾಯಿತು.
Published on

ಗಂಗಾವತಿ: ತಾಲೂಕಿನ ಕಡೇಬಾಗಿಲು ಬಯಲಿನಲ್ಲಿ ಈಡಿಗ ಸಮಾಜದಿಂದ ಮಂಗಳವಾರ ಕುಲದೇವತೆ ಶ್ರೀ ಕಾಟಮಯ್ಯ ಪೂಜಾ ಮಹೋತ್ಸವ ನಡೆಯಿತು. ಈಚಲ ಮರದಿಂದ ವಿಶೇಷ ಅಲಂಕಾರ ಮಾಡಿದ್ದು, ಸಂಪ್ರದಾಯ ಬದ್ಧ ಪೂಜೆ ನೆರವೇರಿಸಲಾಯಿತು. ಇದಕ್ಕೂ ಮುನ್ನ ರೇಣುಕಾ ಯಲ್ಲಮ್ಮ ಭಾವಚಿತ್ರವನ್ನು ಗ್ರಾಮದಿಂದ ಪೂಜಾ ಸ್ಥಳಕ್ಕೆ ವಾದ್ಯಮೇಳದೊಂದಿಗೆ ಮೆರವಣಿಗೆ ನೆರವೇರಿಸಲಾಯಿತು.

ನಂತರ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್ ಮಾತನಾಡಿ, ಈಡಿಗ ಸಮುದಾಯದ ಬೇಡಿಕೆ ಈಡೇರಿಕೆಗಾಗಿ ಸರ್ಕಾರದ ಮೇಲೆ ಒತ್ತಡ ಹಾಕಲಾಗುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ ವರನಟ ಡಾ.ರಾಜಕುಮಾರ ಮೊಮ್ಮಗಳು ಸರಸ್ವತಿ (ರಾಜ್ ಹಿರಿಯ ಮಗಳು ಲಕ್ಷ್ಮೀ ಅವರ ಮಗಳು)ಯನ್ನು ಸಮಾಜದಿಂದ ಸನ್ಮಾನಿಸಲಾಯಿತು.

ಮಾಜಿ ಸಂಸದ ಎಚ್.ಜಿ.ರಾಮುಲು, ಶಾಸಕ ಪರಣ್ಣ ಮುನವಳ್ಳಿ, ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ, ಮಾಜಿ ಶಾಸಕ ಎಚ್.ಎಸ್.ಮುರಳೀಧರ, ಈಡಿಗ ಸಮಾಜದ ಮುಖಂಡರಾದ ಸತೀಶ್ ಬಳ್ಳಾರಿ, ನರಸನಗೌಡ, ಈ.ನಾಗರಾಜ್, ನಾಗರಾಜ್ ಗುತ್ತೇದಾರ್, ತಿರುಮಲೇಶ, ಈ.ಪರಮೇಶ, ವಿವಿಧ ಸಮಾಜದ ಮುಖಂಡರಾದ ರಮೇಶ ಗೌಳಿ, ಇಲಿಯಾಸ್ ಬಾಬಾ, ಮಾಂತಗೊಂಡ ರವೀಂದ್ರನಾಥ, ಪೂಲಭಾವಿ ಸಂಗಪ್ಪ, ಸುರೇಶ ಗೌರಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net