

ಗಂಗಾವತಿ: ನಗರದ ಹಿರೇಜಂತಕಲ್ ಶ್ರೀ ಕನ್ಯಕಾಪರಮೇಶ್ವರಿ ದೇವಾಲಯದಲ್ಲಿ ಮಂತ್ರಾಲಯ ಪಾದಯಾತ್ರೆ ಸಮಾರೋಪ ಸಮಾರಂಭ ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು. ಹಿರೇಜಂತಕಲ್, ವಿರುಪಾಪುರ ಆರ್ಯವೈಶ್ಯ ಸಮಾಜದಿಂದ 4ನೇ ವರ್ಷದ ಮಂತ್ರಾಲಯ ಪಾದಯಾತ್ರೆ ಹಮ್ಮಿಕೊಂಡಿದ್ದು, 500ಕ್ಕೂ ಹೆಚ್ಚು ಭಕ್ತರು ಪಾಲ್ಗೊಂಡಿದ್ದರು.
ಸಮಾರೋಪ ಹಿನ್ನೆಲೆಯಲ್ಲಿ ದೇವಾಲಯದಲ್ಲಿ ವಿಶೇಷ ಪೂಜೆ, ಮೂರ್ತಿಗೆ ಅಲಂಕಾರ, ಶ್ರೀ ಸತ್ಯನಾರಾಯಣ ವ್ರತ ಮತ್ತು ಸಾಮೂಹಿಕ ಪ್ರಸಾದ ವಿತರಣೆ ಜರುಗಿತು.ಮಾಜಿ ಶಾಸಕ ಪರಣ್ಣಮುನವಳ್ಳಿ ಮಾತನಾಡಿ, ಧಾರ್ಮಿಕ ಕಾರ್ಯಕ್ರಮಗಳಿಂದ ಮಾನಸಿಕ ನೆಮ್ಮದಿ ದೊರೆಯಲಿದ್ದು, ಧರ್ಮ ಜಾಗೃತಿಯಾಗಬೇಕಿದೆ ಎಂದರು.
ಆರ್ಯವೈಶ್ಯ ಸಮಾಜದಿಂದ ಹಮ್ಮಿಕೊಳ್ಳುತ್ತಿರುವ ಧಾರ್ಮಿಕ ಕಾರ್ಯಕ್ರಮ, ನಿರಂತರ ಭಜನೆ ಮತ್ತು ಪಾದಯಾತ್ರೆ ಕುರಿತು ಸಮಾಜದ ಹಿರೇಜಂತಕಲ್ ಘಟಕದ ಅಧ್ಯಕ್ಷ ದರೋಜಿ ನಾಗರಾಜ ಶ್ರೇಷ್ಟಿ ಮಾತನಾಡಿದರು. ನಗರಸಭೆ ಮಾಜಿ ಅಧ್ಯಕ್ಷ ಎಸ್.ರಾಘವೇಂದ್ರ ಶ್ರೇಷ್ಟಿ, ಮುಖಂಡರಾದ ಗುರುಭೀಮಭಟ್, ಸತ್ಯನಾರಾಯಣ ಶ್ರೇಷ್ಟಿ, ಚಂದ್ರಶೇಖರ್ ಹಣವಾಳ, ಗಂಗಾಧರ ಶ್ರೇಷ್ಟಿ, ಸಮಾಜದ ತಾಲೂಕು ಘಟಕದ ಅಧ್ಯಕ್ಷೆ ರೂಪಾರಾಣಿ ರಾಯಚೂರ್, ಸದಸ್ಯ ಈಶ್ವರ ಶ್ರೇಷ್ಟಿ, ನವವೃಂದಾನ ಭಜನಾ ಮಂಡಳಿ ಸದಸ್ಯರಿದ್ದರು.