

ಗಂಗಾವತಿ: ಗುರು ಪೌರ್ಣಿಮೆ ನಿಮಿತ್ತ ತಾಲೂಕಿನ ಆನೆಗೊಂದಿಯ ವಾಲಿಕಿಲ್ಲಾ ಮ್ಯಾಗೋಟದ ಆದಿಶಕ್ತಿ ದೇವಾಲಯದಲ್ಲಿ ಸೋಮವಾರ ವಿಶೇಷ ಪೂಜೆ ಮತ್ತು ಹೋಮ ಹಮ್ಮಿಕೊಳ್ಳಲಾಗಿತ್ತು.
ಬೆಳಗ್ಗೆ ದೇವಿ ಮೂರ್ತಿಗೆ ಕುಂಕುಮಾರ್ಚನೆ, ಅಭಿಷೇಕ, ಹೂವಿನ ಅಲಂಕಾರ ನೆರವೇರಿಸಲಾಯಿತು. ನಂತರ ಚಂಡಿ ಹೋಮವನ್ನು ಭಕ್ತರ ಸಮ್ಮುಖದಲ್ಲಿ ಮಾಡಿ, ಪೂರ್ಣಾಹುತಿ ಸಲ್ಲಿಸಲಾಯಿತು. ದಾಸೋಹ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದೇವಾಲಯದ ಮುಖ್ಯಸ್ಥ ದಾಸೋಹರತ್ನ ಬ್ರಹ್ಮಾನಂದಾ ಸ್ವಾಮೀಜಿಗೆ ಭಕ್ತರು ತುಲಾಭಾರದೊಂದಿಗೆ ಗುರುವಂದನೆ ಸಲ್ಲಿಸಿದರು.
ಇದನ್ನೂ ಓದಿ:
ದೇವಾಲಯದ ವ್ಯವಸ್ಥಾಪಕ ರಾಜಣ್ಣ ಸ್ವಾಮಿ ಮಾತನಾಡಿ, ಆಧ್ಮಾತ್ಮಿಕ ಚಟುವಟಿಕೆಗಳು ಹೆಚ್ಚಾಗಬೇಕಿದೆ. ಗೋ ಶಾಲೆಯಲ್ಲಿ ಸಾವಿರಕ್ಕೂ ಹೆಚ್ಚು ಗೋವುಗಳಿದ್ದು, ದತ್ತು ಪಡೆಯುವ ಮೂಲಕ ಗೋ ಶಾಲೆ ನಿರ್ವಹಣೆಗೆ ನೆರವಾಗುವಂತೆ ಮನವಿ ಮಾಡಿದರು.
ಪ್ರಮುಖರಾದ ಬಾಬುಲಾಲ್ ಬಾಂಠಿಯಾ, ಮಹಾವೀರ ಜೈನ್, ನಾಗರಾಜ್ ಹಿರೇಜಂತಕಲ್, ಶರಣಬಸಪ್ಪ, ರವಿಕುಮಾರ ಕಲ್ಯಂ ಇತರರಿದ್ದರು.
ಸಾಯಿನಗರ: ನಗರದ ಶ್ರೀ ಶಿರಡಿ ಸಾಯಿಬಾಬಾ ದೇವಾಲಯದಲ್ಲಿ ಗುರು ಪೌರ್ಣಿಮೆ ನಿಮಿತ್ತ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ಕಾಕಡಾರತಿ, ಪಂಚಾಮೃತ ಅಭಿಷೇಕ, ಪುಷ್ಪಾರ್ಚನೆ, ಮಹಾಮಂಗಳಾರತಿ, ತೀರ್ಥ ಪ್ರಸಾದ, ಅನ್ನಸಂತರ್ಪಣೆ ಮತ್ತು ಸಂಧ್ಯಾ ಆರತಿ ನೆರವೇರಿಸಲಾಯಿತು.
ಶ್ರೀಶಿರಡಿ ಸಾಯಿಬಾಬಾ ಚಾರಿಟಬಲ್ ಟ್ರಸ್ಟ್, ಶ್ರೀ ಶಿರಡಿ ಸಾಯಿಬಾಬಾ ಸೇವಾ ಸಮಿತಿ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿತ್ತು. ಗೋಪಿ ರಕ್ತ ಭಂಡಾರದಿಂದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಪ್ರಮುಖರಾದ ಎಂ.ಸರ್ವೇಶ ಮಲ್ಲಿಕಾರ್ಜುನ, ಮಸ್ಕಿ ಸಿದ್ದಣ್ಣ, ರಾಮಕೃಷ್ಣ, ಕಲಿಕಾಮೂರ್ತಿ, ನಂಜುಂಡ ಐಲಿ ಇತರರಿದ್ದರು.