ವಸತಿ ಯೋಜನೆ ಅನುಷ್ಠಾನದಲ್ಲಿ ಗ್ರಾಪಂ ವಿಲ

protest
ನಿವೇಶನ ಮತ್ತು ವಸತಿ ರಹಿತರಿಗೆ ಸೂರು ಕಲ್ಪಿಸುವಂತೆ ಒತ್ತಾಯಿಸಿ ನಿವೇಶನ ಮತ್ತು ವಸತಿರಹಿತರ ಹೋರಾಟ ಸಮಿತಿ ತಾಲೂಕು ಘಟಕದ ಸದಸ್ಯರು ಮಲ್ಲಾಪುರ ಗ್ರಾಪಂ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಿದರು. ಸಮಿತಿ ಜಿಲ್ಲಾಧ್ಯಕ್ಷ ಎ.ಹುಲುಗಪ್ಪ, ಕಾರ್ಯದರ್ಶಿ ಎ.ಎಲ್.ತಿಮ್ಮಣ್ಣ, ಪದಾಧಿಕಾರಿಗಳಾದ ಹನುಮಂತ, ಭೀಮಣ್ಣ, ಶೇಖಮ್ಮ, ಗಂಗಮ್ಮಹೊಸಳ್ಳಿ ಇತರರಿದ್ದರು.
Published on

ಗಂಗಾವತಿ: ನಿವೇಶನ ಮತ್ತು ವಸತಿ ರಹಿತರಿಗೆ ಸೂರು ಕಲ್ಪಿಸುವಂತೆ ಒತ್ತಾಯಿಸಿ ನಿವೇಶನ ಮತ್ತು ವಸತಿರಹಿತರ ಹೋರಾಟ ಸಮಿತಿ ತಾಲೂಕು ಘಟಕದ ಸದಸ್ಯರು ತಾಲೂಕಿನ ಮಲ್ಲಾಪುರ ಗ್ರಾಪಂ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಿ ಕಾರ್ಯದರ್ಶಿ ಶ್ರೀನಿವಾಸ್‌ಗೆ ಮನವಿ ಸಲ್ಲಿಸಿದರು.

ಸಮಿತಿ ಜಿಲ್ಲಾಧ್ಯಕ್ಷ ಎ.ಹುಲುಗಪ್ಪ ಮಾತನಾಡಿ, ಮನೆ, ನಿವೇಶನವಿಲ್ಲದೇ ಹಲವು ಕಾರ್ಮಿಕರು ಅತಂತ್ರರಾಗಿದ್ದು, ದುಬಾರಿ ಬಾಡಿಗೆ ನೀಡಿ ವಾಸಿಸುವ ಸ್ಥಿತಿ ಬಂದಿದೆ. ವಸತಿ ಯೋಜನೆಗಳನ್ನು ಸಮರ್ಪಕ ಅನುಷ್ಠಾನಗೊಳಿಸುವಲ್ಲಿ ಗ್ರಾಪಂ ಸಿಬ್ಬಂದಿ ವಿಲವಾಗಿದ್ದು, ಮನೆಗಳು ಬಂದರೂ ಇದುವರೆಗೆ ವಸತಿ ರಹಿತರ ಮಾಹಿತಿ ವೆಬ್‌ಸೈಟ್‌ನಲ್ಲಿ ನಮೂದಿಸಿಲ್ಲ. ಯೋಜನೆ ಅನುಷ್ಠಾನಗೊಳಿಸುವಲ್ಲಿ ವಿಲವಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕಿದ್ದು, ವಸತಿ ರಹಿತರ ಮಾಹಿತಿಯನ್ನು ಯೋಜನೆ ವೆಬ್‌ಸೈಟ್‌ನಲ್ಲಿ ಅಪಲೋಡ್ ಮಾಡುವಂತೆ ಒತ್ತಾಯಿಸಿದರು.

ಕಾರ್ಯದರ್ಶಿ ಎ.ಎಲ್.ತಿಮ್ಮಣ್ಣ, ಪದಾಧಿಕಾರಿಗಳಾದ ಹನುಮಂತ, ಭೀಮಣ್ಣ, ಗುಂಡಪ್ಪ ಭಗವಾನ್, ಮರಿಯಮ್ಮ, ಅನ್ನಪೂರ್ಣ, ಲಕ್ಷ್ಮಣನಾಯಕ, ಮಲ್ಲಯ್ಯ, ಶೇಖಮ್ಮ, ಗಂಗಮ್ಮಹೊಸಳ್ಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net