

ಗಂಗಾವತಿ: ನಗರದ ಸಿದ್ದಿಕೇರಿ ಬೇಡರ ಕಣ್ಣಪ್ಪ ವೃತ್ತದಲ್ಲಿ ಗಂಡುಗಲಿ ಕುಮಾರರಾಮ ಹೋರಾಟ ಸಮಿತಿಯಿಂದ ಬೇಡರ ಕಣ್ಣಪ್ಪ ಜಯಂತ್ಯುತ್ಸವ ಬುಧವಾರ ಹಮ್ಮಿಕೊಳ್ಳಲಾಗಿತ್ತು. ನಾಮಲಕಕ್ಕೆ ಪುಷ್ಪಾರ್ಪಣೆಯೊಂದಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಸಾನ್ನಿಧ್ಯವಹಿಸಿದ್ದ ಆಂಜನೇಯ ದೇವಾಲಯದ ಮುಖ್ಯಸ್ಥ ಕೀರೇಶ್ವರ ಸ್ವಾಮೀಜಿ ಮಾತನಾಡಿ, ಬೇಡರ ಕಣ್ಣಪ್ಪನಿಗೆ ಶಿವನೊಲಿದ ದಿನವೇ ಶಿವರಾತ್ರಿಯಾಗಿದ್ದು, ಶಿವನಿಗೆ ತನ್ನ ಕಣ್ಣನ್ನು ನೀಡುವ ಮೂಲಕ ಶಿವಮೆಚ್ಚಿದ ಕಣ್ಣಪ್ಪನಾದ. ಪ್ರತಿಯೊಬ್ಬರು ದೈವ ಭಕ್ತರಾಗಿ ಉದಾತ್ತ ಜೀವನ ಸಾಗಿಸೋಣ ಎಂದರು. ನಗರಸಭೆ ಸದಸ್ಯ ಎ್.ರಾಘವೇಂದ್ರ, ಮುಖಂಡರಾದ, ಭೀಮರಾಯ ಸಿಂಗಾಪುರ, ಬಸಪ್ಪ ಸೋಮಲಾಪುರ, ಶೇಖರಪ್ಪ, ಕೋಲ್ಕಾರ್ ನಾಗರಾಜ್, ಜೆ.ಸೋಮಪ್ಪ, ಟಿ.ಅನಿಲ್‌ಕುಮಾರ, ನಾಗಪ್ಪ ಮಣ್ಣೂರ್, ಗಿರೀಶ ನಾಯಕ, ಉಮೇಶಪ್ಪ ರಾಂಪುರ, ಟಿ.ಬಸವರಾಜ್, ಶ್ರೀನಿವಾಸ ಸಿಂಗಾಪುರ ಹಾಗೂ ಸಿದ್ದಿಕೇರಿ ಗ್ರಾಮಸ್ಥರಿದ್ದರು.