ವಿಜಯನಗರ ಸಾಮ್ರಾಜ್ಯಕ್ಕಿದೆ ವೈಭವದ ಇತಿಹಾಸ

SAMSTHAPANE
ಗಂಗಾವತಿ ಶ್ರೀಕೃಷ್ಣದೇವರಾಯ ವೃತ್ತದಲ್ಲಿ ಅಖಿಲ ಕರ್ನಾಟಕ ಹರಿಹರ ಹಕ್ಕಬುಕ್ಕ ನಾಯಕ ಮಹಾ ವೇದಿಕೆಯಿಂದ ವಿಜಯನಗರ ಸಾಮ್ರಾಜ್ಯದ ಸಂಸ್ಥಾಪನೆ ದಿನ ಗುರುವಾರ ಆಚರಿಸಲಾಯಿತು. ವೇದಿಕೆ ಅಧ್ಯಕ್ಷ ಎಚ್.ರಾಜೇಶ ನಾಯಕ ದೊರೆ, ಪ್ರಧಾನ ಕಾರ್ಯದರ್ಶಿ ಹರನಾಯಕ ಇತರರಿದ್ದರು.
Published on

ಗಂಗಾವತಿ: ನಗರದ ಶ್ರೀಕೃಷ್ಣದೇವರಾಯ ವೃತ್ತದಲ್ಲಿ ಅಖಿಲ ಕರ್ನಾಟಕ ಹರಿಹರ ಹಕ್ಕಬುಕ್ಕ ನಾಯಕ ಮಹಾ ವೇದಿಕೆಯಿಂದ ವಿಜಯನಗರ ಸಾಮ್ರಾಜ್ಯದ ಸಂಸ್ಥಾಪನೆ ದಿನ ಗುರುವಾರ ಹಮ್ಮಿಕೊಳ್ಳಲಾಗಿತ್ತು.

ವಿಜಯನಗರ ಅರಸರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಸಲ್ಲಿಸಿದ ವೇದಿಕೆ ಅಧ್ಯಕ್ಷ ಎಚ್.ರಾಜೇಶ ನಾಯಕ ದೊರೆ ಮಾತನಾಡಿ, 13ನೇ ಶತಮಾನದಲ್ಲಿ ದಕ್ಷಿಣ ಭಾರತದಲ್ಲಿ ಪರಕೀಯರ ಆಕ್ರಮಣಗಳನ್ನು ವಿಜಯನಗರ ಅರಸರು ನಿಯಂತ್ರಿಸಿದ್ದು, ಹಿಂದು ಧರ್ಮ ಮತ್ತು ನಾಡುನುಡಿ ರಕ್ಷಣೆಗಾಗಿ ಶ್ರಮಿಸಿದವರು.

ವಿಜಯನಗರ ಸಾಮ್ರಾಜ್ಯದ ವೈಭವ ಇತಿಹಾಸದಲ್ಲಿ ದಾಖಲಾಗಿದ್ದು, ಇಂತಹ ಸಾಮ್ರಾಜ್ಯ ಕಟ್ಟಿ ಆಳಿದ ಅರಸರನ್ನು ಕನ್ನಡಿಗರು ಮರೆಯುತ್ತಿರುವುದು ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ ಎಂದರು.

ವೇದಿಕೆ ಪ್ರಧಾನ ಕಾರ್ಯದರ್ಶಿ ಹರ ನಾಯಕ, ಮುಖಂಡರಾದ ಭೀಮರಾಯ, ಜೋಗಿನ್ ರಮೇಶ್, ಎಂ.ಬಸಪ್ಪ, ಸಿ.ಆನಂದ, ಡಾ.ಶಿವಕುಮಾರ, ಬಸವರಾಜ, ಮುಸ್ತಾಫ್ ಪಠಾಣ, ಕೆ.ವೀರಭದ್ರಪ್ಪ , ವಿ.ದೇವಪ್ಪ, ಎಚ್.ರಮೇಶ, ಕೃಷ್ಣಾ ರಾಜಾ ಮಯೂರವರ್ಮ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net