ಅಂಜನಾದ್ರಿಯಿಂದ ಅಯೋಧ್ಯೆಗೆ ಸೈಕಲ್ ಯಾತ್ರೆ

JATHA
ಅಯೋಧ್ಯೆಗೆ ಸೈಕಲ್ ಯಾತ್ರೆ ಹಮ್ಮಿಕೊಂಡ ಸುರೇಶ ಬ.ಕೊಟಗೊಂಡರಿಗೆ ಅಂಜನಾದ್ರಿ ಬೆಟ್ಟದಲ್ಲಿ ಮಂಗಳವಾರ ಬೀಳ್ಕೊಡಲಾಯಿತು. ಮೋದಿ ಬ್ರಿಗೇಡ್ ಉತ್ತರ ಕರ್ನಾಟಕ ಸಂಚಾಲಕ ಮದನ್ ಈಡಿಗ, ಪದಾಧಿಕಾರಿಗಳಾದ ಭೀಮರಾಜ್ ನಾಯಕ, ಯಮನೂರ ರಾಠೋಡ ಇತರರಿದ್ದರು.
Published on

ಗಂಗಾವತಿ: ಶ್ರೀರಾಮ ಜನ್ಮಭೂಮಿ ಅಯೋಧ್ಯೆ ಕ್ಷೇತ್ರಕ್ಕೆ ಸೈಕಲ್ ಯಾತ್ರೆ ಹಮ್ಮಿಕೊಂಡ ವಿಜಯಪುರ ಜಿಲ್ಲೆ ಬಿ.ಬಾಗೇವಾಡಿ ತಾಲೂಕಿನ ತಾಳೇವಾಡದ ಕಲಾವಿದ ಸುರೇಶ ಬ. ಕೊಟಗೊಂಡರಿಗೆ ತಾಲೂಕಿನ ಅಂಜನಾದ್ರಿ ಬೆಟ್ಟದಲ್ಲಿ ಮಂಗಳವಾರ ಬೀಳ್ಕೊಡಲಾಯಿತು.

ಶ್ರೀರಾಮ ಮಂದಿರ ಉದ್ಘಾಟನೆಗಾಗಿ ಸೈಕಲ್ ಯಾತ್ರೆ ಹಮ್ಮಿಕೊಂಡಿದ್ದು, ಕೊಪ್ಪಳದ ಮೋದಿ ಬ್ರಿಗೇಡ್‌ನಿಂದ ಸೈಕಲ್ ನೀಡಲಾಗಿದೆ. ಕಿಷ್ಕಿಂಧಾ ಮತ್ತು ಅಯೋಧ್ಯೆ ಜೋಡಿಸುವ ಭಾಗವಾಗಿ ಸೈಕಲ್ ಯಾತ್ರೆ ಹಮ್ಮಿಕೊಂಡಿದ್ದು, ಸಂಪರ್ಕಿಸುವ ಪ್ರತಿಯೊಂದು ಪ್ರಮುಖ ನಗರಗಳಲ್ಲಿ ಶ್ರೀರಾಮನ ಚಿತ್ರ ಬಿಡಿಸುವ ಸಂಕಲ್ಪ ಕೈಗೊಂಡಿದ್ದಾರೆ. ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಸೈಕಲ್ ಯಾತ್ರೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಯಿತು.

ಯಾತ್ರಿ ಸುರೇಶ ಬ.ಕೊಟಗೊಂಡ ಮಾತನಾಡಿ, ಸನಾತನ ಧರ್ಮ ಸಂರಕ್ಷಣೆಗೆ ಯುವಕರು ಬಲಿಷ್ಟರಾಗಬೇಕಿದ್ದು, ದುಶ್ಚಟಗಳಿಂದ ದೂರವಿರುವಂತೆ ಸಲಹೆ ನೀಡಿದರು.

ಮೋದಿ ಬ್ರಿಗೇಡ್ ಉತ್ತರ ಕರ್ನಾಟಕ ಸಂಚಾಲಕ ಮದನ್ ಈಡಿಗ, ಪದಾಧಿಕಾರಿಗಳಾದ ಭೀಮರಾಜ್ ನಾಯಕ, ಯಮನೂರ ರಾಠೋಡ, ಹನುಮಂತ ಭಾವಿಕಟ್ಟಿ, ವೈ.ಸಿದ್ದು, ಬಿಜೆಪಿ ಮುಖಂಡರಾದ ಶಿವಕುಮಾರ ಅರಿಕೇರಿ, ಅರ್ಜುನ ರಾಯ್ಕರ್, ಹನುಶಿಲ್ಪಿ, ಪ್ರಭುರಾಜ ಮಾ.ಪಾಟೀಲ್, ಸಾಗರ ಈಡಿಗ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net