ಸಂಗಾಪುರ ಕೆರೆ ನಿರ್ವಹಣೆ ಗ್ರಾಪಂಗೆ ವಹಿಸಿ

protests
ಗಂಗಾವತಿ ತಾಲೂಕಿನ ಸಂಗಾಪುರ ಕೆರೆಯ ನಿರ್ವಹಣೆಯನ್ನು ಗ್ರಾಪಂಗೆ ವಹಿಸುವಂತೆ ಒತ್ತಾಯಿಸಿ ಗ್ರಾಮಸ್ಥರು ಶಿರಸ್ತೇದಾರ್ ರವಿಕುಮಾರ ನಾಯಕ್ವಾಡಿಗೆ ಮಂಗಳವಾರ ಮನವಿ ಸಲ್ಲಿಸಿದರು. ಗ್ರಾಮಸ್ಥರಾದ ಉಪ್ಪಾರ ಕೃಷ್ಣಪ್ಪ, ರವಿನಾಯಕ, ರಾಘು, ಯಮನೂರ ಅಗಸರ ಇತರರಿದ್ದರು.
Published on

ಗಂಗಾವತಿ: ತಾಲೂಕಿನ ಸಂಗಾಪುರದ ಐತಿಹಾಸಿಕ ಕೆರೆಯ ನಿರ್ವಹಣೆ ಜವಾಬ್ದಾರಿಯನ್ನು ಗ್ರಾಪಂಗೆ ವಹಿಸುವಂತೆ ಒತ್ತಾಯಿಸಿ ಸಂಗಾಪುರ ಗ್ರಾಮಸ್ಥರು ನಗರದ ತಾಲೂಕಾಡಳಿತ ಸೌಧದ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಿ ಶಿರಸ್ತೇದಾರ್ ರವಿಕುಮಾರ ನಾಯಕ್ವಾಡಿಗೆ ಮನವಿ ಸಲ್ಲಿಸಿದರು.

ಸಂಗಾಪುರ ವ್ಯಾಪ್ತಿಯಲ್ಲಿ ನೀರಾವರಿ ಇಲಾಖೆ ನಿರ್ವಣೆಯಲ್ಲಿ 42.21ಎಕರೆ ಕೆರೆಯಿದ್ದು, ನಾಗರಿಕರು ಮತ್ತು ಜಾನುವಾರುಗಳ ಕುಡಿವ ನೀರಿಗಾಗಿ ಅನಾದಿ ಕಾಲದಿಂದಲೂ ಬಳಕೆ ಮಾಡಲಾಗುತ್ತಿದೆ. ಗ್ರಾಪಂ ನರೇಗಾ ಯೋಜನೆಯಡಿ ಹೂಳೆತ್ತುವ ಕಾಮಗಾರಿಯನ್ನು ಇತ್ತೀಚಿಗೆ ನಿರ್ವಹಿಸಲಾಗಿದೆ. ಕೆರೆ ಅಭಿವೃದ್ಧಿ ಹೆಸರಿನಲ್ಲಿ ಕೆಲವರು ಕೆರೆ ಸುಪರ್ದಿಗೆ ಪಡೆಯುವ ಹುನ್ನಾರ ನಡೆಸಿದ್ದು, ಕೆರೆಯ ನೀರು, ಮಣ್ಣನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಸನಿಹದಲ್ಲಿ ಅಂಜನಾದ್ರಿ ಬೆಟ್ಟವಿದ್ದು, ಪ್ರವಾಸೋದ್ಯಮದ ದಷ್ಟಿಯಿಂದ ಅಭಿವದ್ಧಿ ಹೊಂದುತ್ತಿದೆ.

ಕೆರೆಯನ್ನು ಅಭಿವದ್ಧಿಪಡಿಸಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಮೀನು ಸಾಕಣೆ, ಬೋಟಿಂಗ್ ವ್ಯವಸ್ಥೆ, ವಾಕಿಂಗ್ ಟ್ರ್ತ್ರ್ಯಾಕ್, ಮಕ್ಕಳಿಗೆ ಮನರಂಜನಾ ಉಪಕರಣಗಳನ್ನು ಅಳವಡಿಸುವ ಮೂಲಕ ಕೆರೆಯನ್ನು ಅಭಿವದ್ಧಿಪಡಿಸಿಬೇಕಿದ್ದು, ಗ್ರಾಪಂಗೆ ವಹಿಸುವುದು ಸೂಕ್ತವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಇದನ್ನು ಗಂಭೀರ ಪರಿಗಣಿಸಿ ಸೂಕ್ತ ಕ್ರಮಕೈಗೊಳ್ಳುವಂತೆ ಗ್ರಾಮಸ್ಥರಾದ ಉಪ್ಪಾರ ಕೃಷ್ಣಪ್ಪ, ರವಿನಾಯಕ, ರಾಘು, ಯಮನೂರ ಅಗಸರ, ಮರಿಯಪ್ಪ, ಕೃಷ್ಣನಾಯಕ್, ರಾಘವೇಂದ್ರ, ರಾಚಯ್ಯ ಸ್ವಾಮಿ, ಗೋವಿಂದ ಲಮಾಣಿ, ನಾಗರಾಜ್ ಗದ್ವಾಲ್ ಇತರರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net